Select Your Language

Notifications

webdunia
webdunia
webdunia
webdunia

ಪೆಟ್ರೋಲ್ ದರ 58 ಪೈಸೆ, ಡೀಸೆಲ್ ದರ 25 ಪೈಸೆ ಕಡಿತ

ಪೆಟ್ರೋಲ್ ದರ 58 ಪೈಸೆ,  ಡೀಸೆಲ್ ದರ 25 ಪೈಸೆ ಕಡಿತ
ನವದೆಹಲಿ , ಮಂಗಳವಾರ, 1 ಡಿಸೆಂಬರ್ 2015 (18:32 IST)
ಪೆಟ್ರೋಲ್ ದರವನ್ನು ಪ್ರತಿ ಲೀಟರ್‌ಗೆ 58 ಪೈಸೆ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ 25 ಪೈಸೆಗೆ ಕಡಿತ ಮಾಡಲಾಗಿದೆ. ದೆಹಲಿಯಲ್ಲಿ ನಿನ್ನೆ ಮಧ್ಯರಾತ್ರಿಯಿಂದ ಪೆಟ್ರೋಲ್ ದರವು ಲೀಟರ್‌ಗೆ 60. 48 ರೂ.ಗಳಾಗಿದ್ದರೆ, ದೆಹಲಿಯಲ್ಲಿ ಲೀಟರ್‌ಗೆ 60. 70 ರೂ.ಗೆ ಮಾರಾಟವಾಗಲಿದೆ. ಡೀಸೆಲ್ ಒಂದು ಲೀಟರ್‌ಗೆ 46. 80 ರೂ.ಗೆ ಬದಲು 46. 55ರೂ.ಗೆ ಮಾರಾಟವಾಗಲಿದೆ ಎಂದು ಐಒಸಿ ಹೇಳಿದೆ.
 
 ನ. 16ರಂದು ಪೆಟ್ರೋಲ್ ದರದಲ್ಲಿ 36 ಪೈಸೆ ಏರಿಕೆಯಾಗಿದ್ದರೆ ಈಗ  ದರಕಡಿತದಿಂದ ಹಿಮ್ಮುಖ ಚಲನೆ ಮಾಡಿದೆ. ಡೀಸಲ್ ದರದಲ್ಲಿ ಕೂಡ ಅಕ್ಟೋಬರ್‌ನಿಂದ ಮೂರು ಸುತ್ತುಗಳ ಏರಿಕೆಯನ್ನು ಕಂಡಿದ್ದು, ಹಿಮ್ಮುಖ ಚಲನೆಯಾಗಿದೆ. 
 
ಪೆಟ್ರೋಲ್ ಮತ್ತು ಡೀಸೆಲ್ ಅಂತಾರಾಷ್ಟ್ರೀಯ ದರಗಳ ಪ್ರಸಕ್ತ ಮಟ್ಟ ಮತ್ತು ರುಪಾಯಿ ಡಾಲರ್ ವಿನಿಮಯ ದರದಿಂದ ದರಗಳಲ್ಲಿ ಪರಿಷ್ಕರಣೆ ಮೂಲಕ ಗ್ರಾಹಕರಿಗೆ ವರ್ಗಾಯಿಸಲಾಗಿದೆ ಎಂದು ಐಒಸಿ ಹೇಳಿಕೆಯಲ್ಲಿ ತಿಳಿಸಿದೆ. 
 

Share this Story:

Follow Webdunia kannada