Select Your Language

Notifications

webdunia
webdunia
webdunia
webdunia

ರೈಲು ಟಿಕೆಟ್ ಬುಕ್ ಮಾಡುವಾಗ ಭೋಜನಕ್ಕೂ ಬುಕ್ ಮಾಡಬಹುದು

ರೈಲು ಟಿಕೆಟ್ ಬುಕ್ ಮಾಡುವಾಗ ಭೋಜನಕ್ಕೂ ಬುಕ್ ಮಾಡಬಹುದು
ನವದೆಹಲಿ , ಶುಕ್ರವಾರ, 27 ಫೆಬ್ರವರಿ 2015 (19:28 IST)
ರೈಲ್ವೆ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಶುಭ ಸುದ್ದಿಯೆಂದರೆ, ಬೆಂಗಳೂರಿನಿಂದ ಹೊರಡುವ ಮೂರು ರೈಲುಗಳು ಮತ್ತು ಮೈಸೂರಿನಿಂದ ಒಂದು ರೈಲಿನಲ್ಲಿ 
ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಟಿಕೆಟ್ ಖರೀದಿ ಮಾಡುವ ಸಂದರ್ಭದಲ್ಲಿ ಭೋಜನಕ್ಕೂ ಕೂಡ  ಬುಕ್ ಮಾಡಬಹುದು.

ಬೆಂಗಳೂರು-ಕೊಚುವೇಲಿ ಎಕ್ಸ್‌ಪ್ರೆಸ್, ಯಶವಂತ ಪುರ-ಸಿಕಂದರಾಬಾದ್ ಗರೀಬ್ ರಥ್, ಮೈಸೂರು-ದಾದರ್ ಶರಾವತಿ ಎಕ್ಸ್‌ಪ್ರೆಸ್ ಮತ್ತು ಬೆಂಗಳೂರು-ಮೈಸೂರು ಚಾಮುಂಡಿ ಎಕ್ಸ್‌ಪ್ರೆಸ್ ಇವು 128 ರೈಲುಗಳ ಪೈಕಿ ಇ-ಕ್ಯಾಟರಿಂಗ್ ಸೌಲಭ್ಯ ಪಡೆಯುತ್ತಿರುವ ರೈಲುಗಳು.ಬೆಂಗಳೂರು ಕಂಟೋನ್ಮೆಂಟ್, ಕೃಷ್ಣರಾಜಪುರಂ, ಬಂಗಾರಪೇಟೆ, ಕೆಂಗೇರಿ, ಬಾಣಸವಾಡಿ, ಯಲಹಂಕ ಮತ್ತು ಹೊಸೂರು ನಿಲ್ದಾಣಗಳಲ್ಲಿ ವೈ-ಫೈ ಕೇಂದ್ರಗಳನ್ನು ಸ್ಥಾಪಿಸಲಾಗುತ್ತದೆ.

ರೈಲ್ವೆ ಸಚಿವ ಸುರೇಶ್ ಪ್ರಭು ಮೂರು ಮಾರ್ಗಗಳ ಡಬ್ಲಿಂಗ್ ಮತ್ತು ವಿದ್ಯುದೀಕರಣಕ್ಕೆ ಹಣ ಮಂಜೂರು ಮಾಡಿದ್ದಾರೆ. ಪೆನುಕೊಂಡ-ಯಲಹಂಕ(120 ಕಿಮೀ)-958 ಕೋಟಿ ರೂ. ಹುಬ್ಬಳ್ಳಿ-ಚಿಕ್ಕಜಾಜೂರು(190 ಕಿಮೀ-1900 ಕೋಟಿ, ಅರಸಿಕೆರೆ-ತುಮಕೂರು(96 ಕಿಮೀ)-960 ಕೋಟಿ ರೂ. ಇವು ಮೂರು ಮಾರ್ಗಗಳು. 
 

Share this Story:

Follow Webdunia kannada