Select Your Language

Notifications

webdunia
webdunia
webdunia
webdunia

ಪ್ಯಾನಸೋನಿಕ್‌ನಿಂದ ಎಲೂಗಾ ನೋಟ್ ಸ್ಮಾರ್ಟ್‌ಪೋನ್ ಬಿಡುಗಡೆ

ಪ್ಯಾನಸೋನಿಕ್‌ನಿಂದ ಎಲೂಗಾ ನೋಟ್ ಸ್ಮಾರ್ಟ್‌ಪೋನ್ ಬಿಡುಗಡೆ
ನವದೆಹಲಿ , ಸೋಮವಾರ, 4 ಜುಲೈ 2016 (14:52 IST)
ಸ್ಮಾರ್ಟ್‌ಪೋನ್‌ ತಯಾರಿಕಾ ಸಂಸ್ಥೆಯಾಗಿರುವ ಪ್ಯಾನಸೋನಿಕ್, ಹೊಸ ವೈಶಿಷ್ಟ್ಯದ ಎಲೂಗಾ ನೋಟ್ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಹೊಸ ಆವೃತ್ತಿಯ ಪೋನ್‌ಗಳು ಭಾರತದ ಎಲ್ಲಾ ಮಳಿಗೆಯಲ್ಲಿ 13,290 ರೂಪಾಯಿಗಳಲ್ಲಿ ಲಭ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
 
ಪ್ಯಾನಸೋನಿಕ್ ಎಲೂಗಾ ನೋಟ್ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು 1080x1920 ಪಿಕ್ಸೆಲ್ಸ್ ಮತ್ತು 403ಪಿಪಿಐ ವೈಶಿಷ್ಟ್ಯದ ಜೊತೆಗೆ 5.5 ಇಂಚ್ ಫುಲ್ ಎಚ್‌ಡಿ ಎಲ್‌ಟಿಪಿಎಸ್ ಡಿಸ್‌ಪ್ಲೇ ಹೊಂದಿದ್ದು, 3 ಜಿಬಿ ರ್ಯಾಮ್, ಆಕ್ಟಾ ಕೋರ್ ಪ್ರೊಸೆಸರ್ 1.3ಜಿಎಚ್‌ಝಡ್, 32 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯ ಮತ್ತು 32 ಜಿಬಿ ವಿಸ್ತರಿಸಬಹುದಾಗ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. 
 
ಎಲೂಗಾ ನೋಟ್ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಟ್ರಿಪಲ್ ಎಲ್ಇಡಿ ಫ್ಲಾಶ್ ಮತ್ತು ಎಫ್1.9 ಅಪಾರ್ಚರ್ ಜೊತೆಗೆ 16 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು 5 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ವೈಶಿಷ್ಟ್ಯ ಹೊಂದಿದೆ. ಈ ಹೊಸ ಆವೃತ್ತಿಯ ಪೋನ್‌ಗಳು 3000 ಎಮ್‌ಎಎಚ್ ಸಾಮರ್ಥ್ಯದ ಬ್ಯಾಟರಿ ಸಾಮರ್ಥ್ಯ ಹೊಂದಿದ್ದು, 4ಜಿ, 3ಜಿ ಎಚ್‌ಎಸ್‌ಪಿಎ+, ವೈ-ಫೈ 802.11ಬಿ/ಜಿ/ಎನ್, ಬ್ಲೂಟೂತ್ 4.0 ಮತ್ತು ಸ್ಟ್ಯಾಂಡರ್ಡ್ ಕನೆಕ್ಟಿವಿಟಿ ಸೌಲಭ್ಯ ಹೊಂದಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದೇಶದ ಮೊದಲ ಬಯೋ ಡೀಸೆಲ್ ಬಸ್‌ಗೆ ಚಾಲನೆ ನೀಡಿದ ಸಚಿವ ರಾಮಲಿಂಗಾ ರೆಡ್ಡಿ