ಭಾರತ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತನ್ನದೇ ಮುದ್ರೆಯನ್ನು ಒತ್ತಿರುವ ಚೀನಾ ಮೊಬೈಲ್ ತಯಾರಿಕಾ ಕಂಪೆನಿ ಷಿಯೋಮಿ ಇನ್ನೊಂದು ಮೈಲುಗಲ್ಲು ಸಾಧಿಸಿದೆ. 3ಎಸ್ ಮಾಡೆಲ್ ಫೋನ್‌ಗಳನ್ನು ಆರು ತಿಂಗಳ ಕಾಲಾವಧಿಯಲ್ಲಿ 30 ಲಕ್ಷ ಸೆಟ್‌ಗಳನ್ನು ಮಾರಾಟ ಮಾಡಿದೆ.
ಕಳೆದ ವರ್ಷ ಕಂಪೆನಿ 3ಎಸ್ (3ಎಸ್, 3ಎಸ್ ಪ್ರೈಮ್, 3ಎಸ್ ಪ್ಲಸ್) ಮೊಬೈಲ್‌ಗಳನ್ನು ಬಿಡುಗಡೆ ಮಾಡಿತ್ತು. ಇವುಗಳಲ್ಲಿ 3ಎಸ್, 3ಎಸ್ ಪ್ರೈಮ್ ಆಗಸ್ಟ್‌ನಿಂದ ಆನ್‍ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. 3ಎಸ್ ಪ್ಪಸ್ ಮಾತ್ರ ಅಕ್ಟೋಬರ್‌ನಿಂದ ಆನ್‍ಲೈನ್ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಿದೆ.
2014ರಲ್ಲಿ ಭಾರತ ಮಾರುಕಟ್ಟೆಗೆ ಪ್ರವೇಶಿಸಿದ ಷಿಯೋಮಿ ರೂ.10 ಸಾವಿರ ವಿಭಾಗದಲ್ಲಿ ಇತರೆ ಕಂಪೆನಿಗಳಿ ಬಲವಾದ ಪೈಪೋಟಿ ನೀಡುತ್ತಿರುವ ಸಂಗತಿ ಗೊತ್ತೇ ಇದೆ. 2016ರ ಕ್ಯಾಲೆಂಡರ್ ವರ್ಷದಲ್ಲಿ ಕೊನೆಯ ಮೂರು ತಿಂಗಳಲ್ಲಿ ಶೇ.10.7 ಪಾಲಿನೊಂದಿಗೆ ಭಾರತದ ಫೋನ್ ಮಾರಾಟದಲ್ಲಿ ಎರಡನೆ ಸ್ಥಾನದಲ್ಲಿದೆ. ಇದೇ ಸಂದರ್ಭದಲ್ಲಿ ಆನ್‌ಲೈನ್ ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.