Select Your Language

Notifications

webdunia
webdunia
webdunia
webdunia

ಈರುಳ್ಳಿ ದರ ಕೆಜಿಗೆ 80 ರೂ. ಆದರೆ ಆನ್‌ಲೈನ್‌ನಲ್ಲಿ ಬರೀ 40 ರಿಂದ 60 ರೂ.

ಈರುಳ್ಳಿ ದರ ಕೆಜಿಗೆ 80 ರೂ. ಆದರೆ ಆನ್‌ಲೈನ್‌ನಲ್ಲಿ ಬರೀ 40 ರಿಂದ 60 ರೂ.
ನವದೆಹಲಿ , ಬುಧವಾರ, 26 ಆಗಸ್ಟ್ 2015 (21:11 IST)
ಈರುಳ್ಳಿ ದರಗಳು ಚಿಲ್ಲರೆ ಮಾರುಕಟ್ಟೆಯಲ್ಲಿ ಗಗನಕ್ಕೇರಿ ಕೆಜಿಗೆ 80 ರೂ.ತಲುಪಿವೆ. ಆದರೆ ಆನ್‌ಲೈನ್ ಸ್ಟೋರ್‌ಗಳಾದ ಲೊಕಾಲ್ ಬಾನ್ಯಾ, ಫ್ರೆಶ್‌ಫಾಲ್‌ಸಬ್ಜಿ.ಕಾಂ, ಗ್ರೋಸರ್‌ಮ್ಯಾಕ್ಸ್ ಮತ್ತು ಮೆರಾಗ್ರೋಸರ್ ಪ್ರತಿ ಕೆಜಿಗೆ 40-69 ರೂ.ಗಳಲ್ಲಿ ಅರ್ಧ ಬೆಲೆಯಲ್ಲಿ ಈರುಳ್ಳಿ ಆಫರ್ ಮಾಡುತ್ತಿವೆ.  ಗ್ರಾಹಕರಿಗೆ ಪದಾರ್ಥಗಳ ಚಂದಾ ಯೋಜನೆಯನ್ನು  ಆರಂಭಿಸಿದ ಲೋಕಲ್ ಬಾನ್ಯಾ ಖರೀದಿಯಲ್ಲಿ ಮಧ್ಯವರ್ತಿಗಳ ಪಾತ್ರವನ್ನು ನಿವಾರಿಸಿ, ಗ್ರಾಹಕರಿಗೆ ಅದರ ಅನುಕೂಲಗಳನ್ನು ಹಸ್ತಾಂತರಿಸಲು ನಿರ್ಧರಿಸಿರುವುದಾಗಿ ತಿಳಿಸಿದೆ. 
 
 ಫ್ರೆಷ್ ಫಾಲ್ ಸಾಬ್ಜಿ ದೆಹಲಿ ಮೂಲಕ ಚಿಲ್ಲರೆ ಮಾರಾಟವಾಗಿದ್ದು, ಪ್ರತಿ ಕೆಜಿಗೆ 40 ರೂ. ದರದಂತೆ ಈರುಳ್ಳಿ ಮಾರಾಟ ಮಾಡುತ್ತಿದೆ. ಅದು ಈರುಳ್ಳಿಯನ್ನು ನಷ್ಟದಲ್ಲಿ ಮಾರಾಟ ಮಾಡುತ್ತಿದ್ದು, ಅದನ್ನು ತುಂಬಲು ಜಾಹಿರಾತು ವೆಚ್ಚವನ್ನು ಕಡಿತಗೊಳಿಸಿದೆ.  
 
ಟೆಲಿವಿಷನ್ ನಟಿ ಸಾಕ್ಷಿ ತನ್ವರ್ ಪ್ರವರ್ತನೆಯ ಸ್ಟಾರ್ಟ್ ಅಪ್ ಹಣ್ಣು ಮತ್ತು ತರಕಾರಿಗಳನ್ನು ನೇರವಾಗಿ ತೋಟದಿಂದ ಖರೀದಿಸಿ ಲಾಭ ಅಥವಾ ನಷ್ಟವಿಲ್ಲದೇ ಅಸಲು ದರಕ್ಕೆ ಮಾರಾಟ ಮಾಡುತ್ತಿದೆ ಎಂದು ಫ್ರೆಶ್‌ಫಾಲ್ ಸಾಬ್ಜಿಯ ಅಧ್ಯಕ್ಷ ರಾಜೇಶ್ ಗುಪ್ತಾ ಹೇಳಿದ್ದಾರೆ.  ಸ್ಟಾರ್ಟ್ ಅಪ್ ಕನಿಷ್ಠ ಆರ್ಡರ್ ಮನೆಗೆ ಡೆಲಿವರಿ ಮಾಡಲು 249 ರೂ.ಗಳಾಗಿವೆ.  ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ದರಗಳು ಪ್ರಸಕ್ತ 45.50-55 ರೂ.ಗಳಿದ್ದು, ಚಿಲ್ಲರೆ ಮಾರುಕಟ್ಟೆಗಳಿಗಿಂತ ಹಣ್ಣು ಮತ್ತು ತರಕಾರಿಗಳ ಆನ್‌ಲೈನ್ ದರಗಳು ಶೇ. 10ರಷ್ಟು ಅಗ್ಗವಾಗಿದೆ.
 
 ಗುರಗಾಂವ್ ಮೂಲಕ ಆನ್‌ಲೈನ್ ಮಾರಾಟಗಾರ ಮಿರಾಗ್ರೋಸರ್ ಶೇ. 30ರಷ್ಟು ಡಿಸ್ಕೌಂಟ್ ನೀಡುತ್ತಿದ್ದು, ಈರುಳ್ಳಿ ದರವನ್ನು ಪ್ರತಿ ಕೆಜಿಗೆ 42 ರೂ.ಗೆ ಇಳಿಸಿದ್ದಾರೆ. ಇದು ಸಗಟು ಮಾರುಕಟ್ಟೆ ದರಕ್ಕಿಂತ ಕಡಿಮೆಯಾಗಿದೆ. 

Share this Story:

Follow Webdunia kannada