Select Your Language

Notifications

webdunia
webdunia
webdunia
webdunia

ಕೇವಲ 1 ರೂಪಾಯಿಗೆ ಎರಡು ಗಂಟೆ ಉಚಿತ ಟಾಕ್‌ಟೈಮ್ ಆಫರ್

ಕೇವಲ 1 ರೂಪಾಯಿಗೆ ಎರಡು ಗಂಟೆ ಉಚಿತ ಟಾಕ್‌ಟೈಮ್ ಆಫರ್
ನವದೆಹಲಿ , ಗುರುವಾರ, 26 ನವೆಂಬರ್ 2015 (20:51 IST)
ನಿಮಗೆ ಫೋನ್‌ನಲ್ಲಿ ದೀರ್ಘಾವಧಿಯವರೆಗೆ ಮಾತನಾಡಬೇಕು ಎಂದು ಬಯಸುತ್ತೀರಾ? ಒಂದು ವೇಳೆ ಹೌದು ಎಂದಾದಲ್ಲಿ ನಿಮಗೊಂದು ಸುದ್ದಿ ಇಲ್ಲಿದೆ.
 
ಟೆಲಿಕಾಂ ಕಂಪೆನಿ ಏರ್‌ಸೆಲ್, ಎರಡು ಗಂಟೆಗಳವರೆಗೆ ಉಚಿತವಾಗಿ ಮಾತನಾಡುವಂತಹ ಸ್ಕೀಮ್ ಜಾರಿಗೆ ತಂದಿದೆ. 
 
ಗುಡ್‌ಮಾರ್ನಿಂಗ್ ಪ್ಯಾಕ್‌ನಲ್ಲಿ ಮೊಬೈಲ್ ಫೋನ್ ಬಳಕೆದಾರರು ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಕೇವಲ 1 ರೂಪಾಯಿಯಲ್ಲಿ ಮಾತನಾಡಬಹುದು. 
 
ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗಿನ ಮೊದಲ ಕರೆಗೆ ಕೇವಲ 1 ರೂಪಾಯಿ ಚಾರ್ಜ್ ಮಾಡಲಾಗುವುದು. ತದ ನಂತರ ಎರಡು ಗಂಟೆಗಳವರೆಗೆ ಉಚಿತವಾಗಿ ಟಾಕ್ ಟೈಮ್ ನೀಡಲಾಗುತ್ತದೆ.
 
ದೇಶದ 13 ಸೇವಾ ಕೇಂದ್ರಗಳಲ್ಲಿ ಗ್ರಾಹಕರು ಕೇವಲ 1 ರೂಪಾಯಿಗಳ ರಿಚಾರ್ಜ್ ಮಾಡಿ ಈ ಸೌಲಭ್ಯ ಪಡೆಯಬಹುದಾಗಿದೆ ಎಂದು ಏರ್‌ಸೆಲ್ ಮೂಲಗಳು ತಿಳಿಸಿವೆ.

Share this Story:

Follow Webdunia kannada