Webdunia - Bharat's app for daily news and videos

Install App

ಇದೀಗ, ಹಿಂದಿ ಭಾಷೆಯಲ್ಲಿ ಇ-ಮೇಲ್ ವಿಳಾಸಗಳನ್ನು ಪಡೆಯಿರಿ

Webdunia
ಬುಧವಾರ, 31 ಆಗಸ್ಟ್ 2016 (15:18 IST)
ಸ್ಟಾರ್ಟ್‌ಅಪ್ ಡಾಟಾ ಎಕ್ಸ್‌ಜೆನ್ ಟೆಕ್ನಾಲಜೀನ್ ಸಂಸ್ಥೆ, ವಾಣಿಜ್ಯ ಬಳಕೆಯ ಇ-ಮೇಲ್ ವಿಳಾಸಗಳನ್ನು ಹಿಂದಿ ಹಾಗೂ ದೇವನಾಗರಿ ಲಿಪಿಯಲ್ಲಿ ಪ್ರಾರಂಭಿಸಿದ್ದು, ಶೀಘ್ರದಲ್ಲಿ ಜಿ-ಮೇಲ್, ಔಟ್‌ಲುಕ್ ಮತ್ತು ಯಾಹೂ ಮಾದರಿಯಲ್ಲಿರುವ ಇ-ಮೇಲ್ ವಿಳಾಸಗಳ ಉಚಿತ ನೋಂದಣಿ ಸೇವೆಯನ್ನು ನೀಡಲು ಮುಂದಾಗಿದೆ
 
ಈಗಾಗಲೇ ಭಾರತ ಡೊಮೈನ್ ಸಂಸ್ಥೆ, ನೂರಾರು ಇ-ಮೇಲ್ ಐಡಿಗಳನ್ನು ದೇವನಾಗರಿ ಲಿಪಿಯಲ್ಲಿ ಸಿದ್ಧಪಡಿಸಿದ್ದು, ಹಿಂದಿ ಲಿಪಿಯಲ್ಲಿ ಇ-ಮೇಲ್ ವಿಳಾಸ ಬಯಸುವವರು, ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಇಮೇಲ್ ಪ್ಯಾಕೇಜ್ ಖರೀದಿಸಬಹುದು ಎಂದು ಡಾಟಾ ಎಕ್ಸ್‌ಜೆನ್ ಟೆಕ್ನಾಲಜೀಸ್ ಸಂಸ್ಥಾಪಕ ಅಜಯ್ ಡಾಟಾ ತಿಳಿಸಿದ್ದಾರೆ. 
 
ಈ ವಿಳಾಸದಿಂದ ರವಾನಿಸುವ ಇ-ಮೇಲ್‌ಗಳು ಪ್ರಮುಖ ಸೇವಾದಾರರಾದ ಜಿ-ಮೇಲ್ ಹಾಗೂ ಮೈಕ್ರೋಸಾಫ್ಟ್‌ ಬೆಂಬಲಿತವಾಗಿರುತ್ತವೆ. 
 
ಬಳಕೆದಾರರು ಹಿಂದಿ ಭಾಷೆಯನ್ನು ಬಳಸುವುದರ ಜೊತೆಗೆ ಹಿಂದಿಯಲ್ಲಿ ಸೃಷ್ಟಿಸಲಾದ ಜೀಮೇಲ್, ಔಟ್‌ಲುಕ್ ಮೂಲಕ ಇತರ ವಿಳಾಸಗಳಿಗೆ ಹಿಂದಿ ಭಾಷೆಯಲ್ಲಿ ಮೇಲ್ ರವಾನಿಸಬಹುದಾಗಿದೆ.   
 
ಭಾರತ್ ಡೊಮೈನ್ ಮೂಲಕ ಜಿ-ಮೇಲ್ ರೀತಿಯ ಉಚಿತ ಇ-ಮೇಲೆ ಸೇವೆಯನ್ನು ನೀಡಲಿದ್ದು, ಶೀಘ್ರದಲ್ಲಿಯೇ ಭಾರತ ಸರಕಾರದೊಂದಿಗೆ ಕೆಲಸ ಮಾಡಲಿದ್ದೇವೆ ಎಂದು ಅಜಯ್ ಡಾಟಾ ಸ್ಪಷ್ಟಪಡಿಸಿದ್ದಾರೆ. 
 
ಇಂಟರ್‌ನೆಟ್ ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಲು ಸರಕಾರ, ಹಿಂದಿ ಮತ್ತು ದೇವನಗರಿ ಭಾಷೆಯಲ್ಲಿ ಇ-ಮೇಲ್ ವಿಳಾಸ ಮತ್ತು ವೆಬ್‌ಸೈಟ್‌ಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ.  ಡಾಟ್ ಇನ್ ಹೆಸರಿನ ಡೊಮೈನ್ ಖರೀದಿಸುವವರಿಗೆ ಡೊಮೈನ್ ಮತ್ತು ವೆಬ್‌ಸೈಟ್ ಮಾರಾಟಗಾರರು ಉಚಿತವಾಗಿ ದೇವನಗರಿ ಲಿಪಿ (ಭಾರತ್ ಡೊಮೈನ್)  ನೀಡುವಂತೆ ನ್ಯಾಷನಲ್ ಇಂಟರ್‌ನೆಟ್ ಎಕ್ಸ್‌ಚೇಂಜ್ ಆಫ್ ಇಂಡಿಯಾಗೆ ಕೋರಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments