Webdunia - Bharat's app for daily news and videos

Install App

ಈಗ 50 ರೂಪಾಯಿಯಲ್ಲಿ ಚಿನ್ನ ಖರೀದಿಸಿ

Webdunia
ಗುರುವಾರ, 24 ಜುಲೈ 2014 (17:56 IST)
ಚಿನ್ನದ ಬೆಲೆ ಗಗನಕ್ಕೆರುವುದು ಕಂಡು ನಿಮಗೆ ಚಿನ್ನ ಖರೀಧಿಸಿಲು ಸಾಧ್ಯವಾಗುತ್ತಿಲ್ಲವೆ? ಆದರೆ ನೀವು  ಈಗ ಕೇವಲ 50 ರೂಪಾಯಿಗಳಲ್ಲಿ ಚಿನ್ನ ಕೂಡ ಖರೀದಿಸಬಹುದು. 
 
ಬುಲಿಯನ್‌ ಮಾರುಕಟ್ಟೆಯಲ್ಲಿ ಈ ತರಹದ ಗೋಲ್ಡ್‌ ಸ್ಕೀಮ್ ಬಂದಿದೆ. ಇದರಿಂದ ಪ್ರತಿದಿನ 50 ರೂಪಾಯಿ ನೀಡಿ ಚಿನ್ನವನ್ನು ಖರೀದಿಸಬಹುದಾಗಿದೆ. ಅಥವಾ ಪ್ರತಿ ತಿಂಗಳು 1000 ರೂಪಾಯಿ ನೀಡಿ ಕೂಡ ಚಿನ್ನ ಖರೀದಿಸಬಹುದು. ಸತ್‌ಯುಗ್ ಗೋಲ್ಡ್‌ ಹೆಸರಿನ ಕಂಪೆನಿ " ಮೇರಾ ಗೋಲ್ಡ್‌‌‌" ಪ್ಲ್ಯಾನ್ ಮಾರುಕಟ್ಟೆಗೆ ಪರಿಚಯಿಸಿದೆ. 
 
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಇವರ ಪತಿ ರಾಜ್ ಕುಂದ್ರಾ ಈ ಪ್ಲ್ಯಾನ್‌ ಸತ್‌ಯುಗ್ ಗೋಲ್ಡ್‌ ಕಂಪೆನಿಯ ಮಾಲೀಕರಾಗಿದ್ದಾರೆ. 
 
ಭಾರತೀಯ ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 28,000 ರೂ. ನಿಂದ 28.500 ರೂಪಾಯಿವರೆಗೆ ನಡೆಯುತ್ತಿದೆ. ನೀವು ಒಂದು ಗ್ರಾಂ ಚಿನ್ನ ಖರೀದಿಸಬೇಕೆಂದಿದ್ದರೆ ನೀವು 2800-3000 ರೂಪಾಯಿ ಖರ್ಚು ಮಾಡಬೇಕಾಗುತ್ತದೆ. 
 
ನೀವು ಒಂದು ಗ್ರಾಂ ಗಿಂತ ಕಡಿಮೆ ಚಿನ್ನ ಖರೀದಿಸಲು ಬಯಸಿದರೆ ಯಾವುದೇ ಅಂಗಡಿಯವರು ಒಪ್ಪಲಿಕಿಲ್ಲ. ಹಲವು ಅಂಗಡಿಯವರು ಒಂದು ಗ್ರಾಂ ಗಿಂತ ಕಡಿಮೆ ಚಿನ್ನವನ್ನು ಮಾರುವುದಿಲ್ಲ. ಒಂದು ವೇಳೆ ನೀವು 500 ಮಿಲಿಗ್ರಾಂ ಚಿನ್ನ ಖರೀದಿಸಲು ಬಯಸಿದರೆ 1400-1500 ರೂಪಾಯಿ ತೆರಬೇಕಾಗುತ್ತದೆ.
 
ದೇಶದಲ್ಲಿ ಲಕ್ಷಾಂತರ ಜನರು ಪ್ರತಿ ತಿಂಗಳು ಒಂದು ಗ್ರಾಂ ಚಿನ್ನ ಖರೀದಿ ಮಾಡುವವರಿದ್ದಾರೆ. ಈ ಲಕ್ಷಾಂತರ ಜನರ ಕನಸಿಗಾಗಿ ಹೊಸ ಗೋಲ್ಡ್‌ ಸ್ಕೀಮ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈಗ ಯಾರೂ ಕೂಡ ಪ್ರತಿ ದಿನ 50 ರೂಪಾಯಿ ಅಥವಾ ಪ್ರತಿ ತಿಂಗಳು 1000 ರೂಪಾಯಿ ನೀಡಿ ಚಿನ್ನ ಖರೀದಿಸಬಹುದಾಗಿದೆ. 
 
ಈ ಸ್ಕೀಮ್‌ನಲ್ಲಿ ಯಾವುದೇ ರೀತಿಯ ಲಾಕ್‌ ಇನ್ ಪಿರಿಯಡ್ ಇರುವುದಿಲ್ಲ ಮತ್ತು ಯಾವುದೇ ಡಿಜೈನ್ ಖರ್ಚು ನೀಡುವುದು ಅವಶ್ಯಕತೆ ಇಲ್ಲ ಮತ್ತು ಯಾವುದೇ ಮಾರ್ಕಿಂಗ್ ಚಾರ್ಜ್ ಇರುವುದಿಲ್ಲ. ಕಂಪೆನಿ ಈ ಕುರಿತು ಶೇ.100 ರಷ್ಟು ಗ್ಯಾರೆಂಟಿ ನೀಡುತ್ತಿದೆ. ಚಿನ್ನ ಶುದ್ದ 24 ಕ್ಯಾರೆಟ್‌ ಆಗಿರಲಿದೆ ಮತ್ತು ಇದರ ಸ್ಟೋರೆಜ್‌ ಮೇಲೆ ಯಾವುದೇ ಚಾರ್ಜ್ ಇಲ್ಲ. 
 
ಲಕ್ಷಾಂತರ ಜನರು ಪ್ರತಿ ತಿಂಗಳು ಚಿನ್ನ ಖರೀದಿಸುವ ಸಾಮರ್ಥ ಇರದವರಿಗೆ ಈ ಗೊಲ್ಡ್‌ ಸ್ಕೀಮ್‌ನ ಉಪಯೋಗ ಆಗಲಿದೆ ಎಂದು ರಾಜ್‌ ಕುಂದ್ರಾ ತಿಳಿಸಿದ್ದಾರೆ. 
 
ಈ ಸ್ಕೀಮ್‌ಗೆ ಸೇರಲು ನೀವು ಕಂಪೆನಿಯ ವೆಬ್‌‌‌ಸೈಟ್‌‌ಗೆ ಹೋಗಿ ಕೆಲವು ಔಪಚಾರಿಕ ಭರ್ತಿಗಳನ್ನು ಪೂರ್ತಿಮಾಡಬೇಕಾಗುವುದು.  

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments