Select Your Language

Notifications

webdunia
webdunia
webdunia
webdunia

ನೋಕಿಯಾದ ಲುಮಿಯಾ 530 ಮಾರುಕಟ್ಟೆಗೆ ಬಿಡುಗಡೆ

ನೋಕಿಯಾದ  ಲುಮಿಯಾ 530 ಮಾರುಕಟ್ಟೆಗೆ ಬಿಡುಗಡೆ
ನವದೆಹಲಿ , ಶುಕ್ರವಾರ, 25 ಜುಲೈ 2014 (15:59 IST)
ನೋಕಿಯಾ ಕಂಪೆನಿ ತನ್ನ ಹೊಸ ಬಜೆಟ್‌ ಸ್ಮಾರ್ಟ್‌‌ಫೋನ್ ಲುಮಿಯಾ 530 ಮತ್ತು 530 ಡ್ಯುವೆಲ್‌ ಸಿಮ್‌ ಬಿಡುಗಡೆ ಮಾಡಿದೆ. ಇದರ ಸ್ಕ್ರೀನ್‌ 4 ಇಂಚಿನದ್ದಾಗಿದೆ. ಇದರ ರೆಜ್ಯುಲ್ಯೂಶನ್‌‌ 854X480 ಪಿಕ್ಸಲ್‌ ಇದೆ. 
 
1. ಈ ಫೋನ್‌ 1.2 ಜಿಎಚ್‌‌ಜೆಡ್‌ ಕ್ವಾಡ್‌ ಕೊರ ಸ್ನೈಪಡ್ರೈಗನ್‌ 200 ಪ್ರೊಸೆಸರ್ ಹೊಂದಿದೆ ಮತ್ತು ವಿಂಡೋಸ್‌ 8.1ರಿಂದ ಕಾರ್ಯನಿರ್ವಹಿಸುತ್ತದೆ. 
 
2. ಇದರ ಹಿಂಬದಿಯಲ್ಲಿ 5 ಎಮ್‌ಪಿ ಫಿಕ್ಸ್ಡ್ ಕ್ಯಾಮೆರಾ ಇದೆ ಆದರೆ ಎದುರುಗಡೆ ಯಾವುದೇ ಕ್ಯಾಮೆರಾ ಇಲ್ಲ. ಇದರಲ್ಲಿ ಡ್ಯುವೆಲ್‌ ಸಿಮ್‌‌‌ ಸೌಲಭ್ಯವಿದೆ ಮತ್ತು ಇದಕ್ಕೆ ಲುಮಿಯಾ 530 ಡ್ಯುವೆಲ್‌ ಸಿಮ್‌ ಎಂದು ಹೆಸರು ನೀಡಲಾಗಿದೆ. 
  
3. ಈ ಫೋನ್‌‌ನ ಭಾರ 129 ಗ್ರಾಂ ಇದೆ ಮತ್ತು ಇದರ ದಪ್ಪ 11.7 ಮಿಮಿ ಇದೆ. ಇದರ ರ್ಯಾಮ್‌ 512 ಎಮ್‌ಬಿ ಇದೆ. ಇದರಲ್ಲಿ ಇಂಟರನಲ್‌ ಸ್ಟೋರೆಜ್‌ 4 ಜಿಬಿಯದ್ದಾಗಿದೆ. ಇದರಲ್ಲಿ 128 ಎಮ್‌ಬಿಯವರೆಗಿನ ಮೆಮೊರಿ ಕಾರ್ಡ್ ಅಳವಡಿಸಬಹುದಾಗಿದೆ. 
 
4. ಇದರಲ್ಲಿ 3.5 ಅಡಿಯೋ ಚೆಕ್‌‌‌ ಇದೆ ಮತ್ತು ಎಫ್‌ಎಮ್‌ ರೆಡಿಯೋ ಕೂಡ ಇದೆ. ಇದರಲ್ಲಿ 3ಜಿ, ವೈಫೈ 802, ಬ್ಲ್ಯೂಟೂಥ್‌ 4.0, ಜಿಪಿಎಸ್‌‌ ನಂತಹ ಸೌಲಭ್ಯಗಳಿವೆ. ಇದರ ಬ್ಯಾಟರಿ 1430 ಎಮ್‌‌ಎಎಚ್‌ ಇದೆ. 
  
5. ನೋಕಿಯಾ ಲುಮಿಯಾ 530 ಮತ್ತು 530 ಡ್ಯುವೆಲ್‌ ಸಿಮ್‌ ಆರೆಂಜ್‌, ಹಸಿರು, ಬಿಳಿ ಮತ್ತು ಡಾರ್ಕ್ ಬಣ್ಣಗಳಲ್ಲಿ ಲಭ್ಯವಿದೆ. 
 
6. ಲುಮಿಯಾ 530ಯ ಬೆಲೆ 6,890 ರೂಪಾಯಿ ಇದೆ. ಈ ಫೋನ್‌ ಅಗಸ್ಟ್‌ನಲ್ಲಿ ಭಾರತ ಸಹಿತ ಇತರ ದೇಶಗಳಲ್ಲಿ ಲಭ್ಯವಿರಲಿವೆ. 

Share this Story:

Follow Webdunia kannada