ನೋಕಿಯಾ ಒಂದೇ ನಿಮಿಷದಲ್ಲಿ ಔಟ್ ಆಫ್ ಸ್ಟಾಕ್

Webdunia
ಶನಿವಾರ, 21 ಜನವರಿ 2017 (13:14 IST)
ಒಂದು ಕಾಲದಲ್ಲಿ ಬೇಸಿಕ್ ಫೋನ್‌ ವಿಭಾಗದಲ್ಲಿ ಸಂಚನಲ ಸೃಷ್ಟಿಸಿದ ನೋಕಿಯಾ ಈಗ ಮತ್ತೆ ಹೊಸ ರೂಪದಲ್ಲಿ ಆಂಡ್ರಾಯ್ಡ್ ಆಧಾರಿತ ಫೋನ್‌ಗಳ ರೂಪದಲ್ಲಿ ಮಾರುಕಟ್ಟೆ ಪ್ರವೇಶಿಸಿರುವುದು ಗೊತ್ತೇ ಇದೆ. ನೋಕಿಯಾ ಬ್ರಾಂಡ್ ಹೆಸರಿನಲ್ಲಿ ಎಚ್‌ಎಂಡಿ ಗ್ಲೋಬಲ್ ಫೋನ್‌ಗಳನ್ನು ಬಿಡುಗಡೆ ಮಾಡಿದೆ. 
 
ಶುಕ್ರವಾರ ನೋಕಿಯಾ 6 ಎಂಬ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಅಲ್ಲಿನ ಇ-ಕಾಮರ್ಸ್ ವೆಬ್‌ಸೈಟ್ ಜೆಡಿ.ಕಾಮ್‌ನಲ್ಲಿ ಬಿಡುಗಡೆ ಮಾಡಿದ ಕೇವಲ ಒಂದೇ ಒಂದು ನಿಮಿಷದಲ್ಲಿ ಔಟ್ ಆಫ್ ಸ್ಟಾಕ್ ಪ್ರಕಟಣೆ ಬೋರ್ಡ್ ಕಾಣಿಸಿಕೊಂಡಿದೆ. ಆಂಡ್ರಾಯ್ಡ್ 7 ಆಪರೇಟಿಂಗ್ ಸಿಸ್ಟಂ ನೂಗಟ್‍ನೊಂದಿಗೆ ಈ ಫೋನ್ ಮಾರುಕಟ್ಟೆಗೆ ಬಂದಿದೆ.
 
ಈ ವರ್ಷ ಏಪ್ರಿಲ್ ನಲ್ಲಿ ಭಾರತದ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆಗಳಿವೆ. ಇದರ ಬೆಲೆ ಸುಮಾರು ರೂ.17,000 ಎಂದು ನಿರ್ಧರಿಸಲಾಗಿದೆ. ಫೆಬ್ರವರಿಯಲ್ಲಿ ಇನ್ನಷ್ಟು ಬ್ರಾಂಡ್‍ಗಳನ್ನು ಬಿಡುಗಡೆ ಮಾಡುವ ಬಗ್ಗೆ ಕಂಪೆನಿ ಚಿಂತಿಸಿದೆ.
 
ನೋಕಿಯಾ 6 ಫೋನ್ ವಿಶೇಷಗಳು:
* 5.5 ಇಂಚು ಸ್ಪರ್ಶಸಂವೇದಿ ಪರದೆ
* 1.1 ಗಿಗಾ ಹಡ್ಜ್ ಆಕ್ಟಾಕೋರ್ ಪ್ರೋಸೆಸರ್
* 4ಜಿಬಿ ರ‍್ಯಾಮ್
* 64 ಜಿಬಿ ಆಂತರಿಕ ಮೆಮೊರಿ
* ಆಂಡ್ರಾಯ್ಡ್ 7.0
* 16 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ
* 8 ಮೆಗಾ ಪಿಕ್ಸೆಲ್ ಮುಂಬದಿ ಕ್ಯಾಮೆರಾ
* 3000 ಎಂಎಎಚ್ ಬ್ಯಾಟರಿ ಸಾಮರ್ಥ್ಯ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಸ್ಥಾನ ಬಿಟ್ಟುಕೊಡುವ ಬಗ್ಗೆ ಸಿದ್ದರಾಮಯ್ಯ ಮಹತ್ವದ ಘೋಷಣೆ

ಡಿಕೆ ಶಿವಕುಮಾರ್ ಸಿಎಂ ಸ್ಥಾನ ಕೊಡಬೇಕಾ: ಡಿಕೆಶಿ ಭವಿಷ್ಯದ ಅಂತಿಮ ನಿರ್ಧಾರ ಯಾರದ್ದು ಗೊತ್ತಾ

Arecanut Ptice: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಸಿಎಂ ಕುರ್ಚಿ ಪಡೆಯಲು ಡಿಕೆ ಶಿವಕುಮಾರ್ ಬಣದ ಮತ್ತೊಂದು ಪವರ್ ಫುಲ್ ಐಡಿಯಾ

ಮುಂದಿನ ಸುದ್ದಿ
Show comments