Select Your Language

Notifications

webdunia
webdunia
webdunia
webdunia

ಬಡ್ಡಿದರದಲ್ಲಿ ರಿಸರ್ವ್ ಬ್ಯಾಂಕ್ ಯಾವುದೇ ಬದಲಾವಣೆ ಮಾಡಿಲ್ಲ

ಬಡ್ಡಿದರದಲ್ಲಿ ರಿಸರ್ವ್ ಬ್ಯಾಂಕ್ ಯಾವುದೇ ಬದಲಾವಣೆ ಮಾಡಿಲ್ಲ
ನವದೆಹಲಿ , ಮಂಗಳವಾರ, 30 ಸೆಪ್ಟಂಬರ್ 2014 (14:50 IST)
ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಆರ್‌ಬಿಐ ತಿಳಿಸಿದೆ. ಶೇ. 8 ಬಡ್ಡಿದರವನ್ನು ಮುಂದುವರಿಸಲಾಗುತ್ತದೆ. ರೇಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಾಗುತ್ತಿರುವ ಏರುಪೇರಿನಿಂದ ಹಣದುಬ್ಬರ ಏರುತ್ತಿದೆ. ಆದ್ದರಿಂದ ಈ ಹಿಂದಿನಂತೆ ಶೇ. 8ರ ಬಡ್ಡಿದರ ಮುಂದುವರಿಯಲಿದೆ ಎಂದು ಆರ್‌ಬಿಐ ಗವರ್ನರ್ ರಘುರಾಮ್ ರಾಜನ್ ತಿಳಿಸಿದರು.

 2016ರ ವೇಳೆಗೆ ಶೇ. 6ರ ಬಡ್ಡಿದರವನ್ನು ತಲುಪುವ ಸಾಧ್ಯತೆಯಿದೆ ಎಂದೂ ರಾಜನ್ ಹೇಳಿದರು. ಇದು ಕೆಲವು ಕಾರ್ಪೋರೇಟ್ ವಲಯಕ್ಕೆ ಸ್ವಲ್ಪ ನಿರಾಸೆ ಮೂಡಿಸಿದ್ದರೂ ಆರ್ಥಿಕ ಬೆಳವಣಿಗೆ ದೃಷ್ಟಿಯಿಂದ ಬಡ್ಡಿದರವನ್ನು ಇಳಿಸಿಲ್ಲವೆನ್ನಲಾಗಿದೆ.

ಇದರಿಂದಾಗಿ ಗೃಹಸಾಲ ಮತ್ತು ವಾಹನ ಸಾಲದ ಕಂತುಗಳಲ್ಲಿ ಇಳಿಕೆಯಾಗುವ ಸಂಭವವಿಲ್ಲ. ಗ್ರಾಹಕ ದರ ಆಧಾರಿತ ಹಣದುಬ್ಬರವನ್ನು 2015ರ ಜನವರಿಯೊಳಗೆ ಶೇ. 8ಕ್ಕೆ ತರಲು ಮತ್ತು ಒಂದು ವರ್ಷದ ನಂತರ ಶೇ. 6ಕ್ಕೆ ತರಲು ರಾಜನ್ ನಿರ್ಧರಿಸಿರುವುದರಿಂದ ಆರ್‌ಬಿಐ ಕ್ರಮವನ್ನು ನಿರೀಕ್ಷಿಸಲಾಗಿತ್ತು.

Share this Story:

Follow Webdunia kannada