Webdunia - Bharat's app for daily news and videos

Install App

ನಕಲಿ ಸರಕುಗಳನ್ನು ಗುರುತಿಸಲು ಹೊಸ ಸ್ಮಾರ್ಟ್‌ಫೋನ್ ಅಪ್ಲಿಕೇಶನ್

Webdunia
ಶುಕ್ರವಾರ, 7 ಜುಲೈ 2017 (18:31 IST)
ಔಷಧಿ, ದಿನಸಿ ವಸ್ತುಗಳಿಂದ ಹಿಡಿದು ಕಾರಿನ ಭಾಗಗಳವರೆಗೆ ಶೇ.100 ರಷ್ಟು ನಿಖರತೆ ಹೊಂದಿರುವ ನಕಲಿ ಸರಕುಗಳನ್ನು ಪತ್ತೆ ಹಚ್ಚುವಂತಹ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮುಂದಿನ ವರ್ಷ ಮಾರುಕಟ್ಟೆಗೆ ಲಗ್ಗೆಯಿಡಲಿದೆ.
ಪ್ರತಿ ವರ್ಷವೂ ಜಗತ್ತಿನಾದ್ಯಂತ ನಕಲಿ ಮತ್ತು ಪೈರೇಟೆಡ್ ಸರಕುಗಳ ಆಮದು ಮೊತ್ತ ಸುಮಾರು 0.5 ಟ್ರಿಲಿಯನ್ ಡಾಲರ್‌ಗಳಷ್ಟು ಆಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
 
ನಕಲಿ ಔಷಧಿಗಳಿಂದ ಔಷಧ ಉದ್ಯಮಕ್ಕೆ ಪ್ರತಿ ವರ್ಷ 200 ಶತಕೋಟಿ ಡಾಲರ್‌ಗಳಷ್ಟು ನಷ್ಟವಾಗುತ್ತಿದೆ. ನಕಲಿ ಔಷಧಿ ಸೇವನೆ ಆರೋಗ್ಯಕ್ಕೆ ಅಪಾಯಕಾರಿ. ನಕಲಿ ಔಷಧಿಯಲ್ಲಿ ಯಾವುದೇ ಕ್ರಿಯಾತ್ಮಕ ಪದಾರ್ಥಗಳು ಹೊಂದಿರದಿದ್ದರಿಂದ ವರ್ಷಕ್ಕೆ ಒಂದು ದಶಲಕ್ಷ ಸಾವುಗಳು ಸಂಭವಿಸುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.
 
ಈಗ, ಯುಕೆ ಯಲ್ಲಿರುವ ಲಂಕಸ್ಟೆರ್ ವಿಶ್ವವಿದ್ಯಾನಿಲಯದ ಸಂಶೋಧಕರು, ನಾವು ಅಭಿವೃದ್ಧಿ ಹೊಂದಿದ ಹೊಸ ಕ್ವಾಂಟಮ್ ತಂತ್ರಜ್ಞಾನದ ಕಾರಣದಿಂದಾಗಿ ನಾವು ನಕಲಿ ವಸ್ತುಗಳ ಸಾಮ್ರಾಜ್ಯವನ್ನು ನಿರ್ನಾಮ ಮಾಡುತ್ತೇವೆ ಎನ್ನುವ ವಿಶ್ವಾಸವಿದೆ.  ತಂತ್ರಜ್ಞಾನವು ನಕಲಿ ಮಾಡುವಿಕೆಯನ್ನು ಅಸಾಧ್ಯವಾಗಿಸುತ್ತದೆ ಎಂದು ವಿವರಣೆ ನೀಡಿದ್ದಾರೆ.
 
ವೈಜ್ಞಾನಿಕ ಅನ್ವೇಷಣೆಯನ್ನು ಬಳಸಿಕೊಂಡು ಜಾಗತಿಕ ನಕಲಿ ವಸ್ತುಗಳ ಸಾಂಕ್ರಾಮಿಕ ರೋಗದ ಮೇಲೆ ಯುದ್ಧವನ್ನು ಸಾರುವಂತಾಗುತ್ತದೆ. ಅಂತಿಮವಾಗಿ ಜೀವನ ಮತ್ತು ಜೀವನೋಪಾಯವನ್ನು ಒಂದೇ ರೀತಿ ವೆಚ್ಚ ಮಾಡುವಂತಾಗುತ್ತದೆ ಎಂದು ಲಂಕಾಸ್ಟರ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ರಾಬರ್ಟ್ ಯಂಗ್ ತಿಳಿಸಿದ್ದಾರೆ.
 
ಹೊಸ ತಂತ್ರಜ್ಞಾನವು ವಾಯಾ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಮೂಲಕ ಕಾರ್ಯನಿರ್ವಹಿಸುತ್ತದೆ, ಇದು ಒಂದು ಉತ್ಪನ್ನವು ನೈಜ ಅಥವಾ ನಕಲಿಯಾಗಿದೆಯೇ ಎಂಬುದನ್ನು ಗ್ರಹಿಸಬಲ್ಲದು. ಜನರು ಸ್ಮಾರ್ಟ್‌ಫೋನ್‌ಗಳನ್ನು ಬಳಸುವ ಮೂಲಕ ಉತ್ಪನ್ನದ ದೃಢೀಕರಣವನ್ನು ಪರಿಶೀಲಿಸಬಹುದಾಗಿದೆ.
 
ತಯಾರಕರ ಡೇಟಾಬೇಸ್‌‌ನೊಂದಿಗೆ 2D ಟ್ಯಾಗ್ ಹೊಂದಿರುವುದನ್ನು ಗ್ರಾಹಕನು ತನ್ನ ಸ್ಮಾರ್ಟ್‌ಫೋನ್‌‌ನಿಂದ ಉತ್ಪನ್ನದ ಮೇಲಿರುವ ಆಪ್ಟಿಕಲ್ ಟ್ಯಾಗ್ ಅನ್ನು ಸ್ಕ್ಯಾನ್ ಮಾಡಲು ಸಾಧ್ಯವಾಗುತ್ತದೆ, ಇದರಿಂದ ತಾನು ಖರೀದಿಸುವ ವಸ್ತು ಅಸಲಿಯೋ ನಕಲಿಯೋ ಎನ್ನುವುದು ಗೊತ್ತಾಗುತ್ತದೆ. ಇನ್ಮುಂದೆ ಬೀಳಲಿದೆ ನಕಲಿ ವಸ್ತುಗಳಿಗೆ ಕಡಿವಾಣ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments