Select Your Language

Notifications

webdunia
webdunia
webdunia
webdunia

ಎರಡನೇ ತಲೆಮಾರಿನ ಮೋಟೋ ಎಕ್ಸ್ ಸ್ಮಾರ್ಟ್‌ಫೋನ್ ದರ ಕಡಿತ

ಎರಡನೇ ತಲೆಮಾರಿನ ಮೋಟೋ ಎಕ್ಸ್ ಸ್ಮಾರ್ಟ್‌ಫೋನ್ ದರ ಕಡಿತ
ನವದೆಹಲಿ , ಸೋಮವಾರ, 22 ಡಿಸೆಂಬರ್ 2014 (12:27 IST)
ಎರಡನೇ ತಲೆಮಾರಿನ ಮೋಟೋ ಎಕ್ಸ್ ಸ್ಮಾರ್ಟ್‌ಫೋನ್‌ಗೆ ಬೆಲೆ ಕಡಿತವನ್ನು ಮೋಟೊರೋಲಾ ಇಂಡಿಯಾ ಘೋಷಿಸಿದ್ದು, ಅದಕ್ಕೆ ಎಕ್ಸ್‌ಚೇಂಜ್ ಆಫರ್ ಕೂಡ ಆರಂಭಿಸಿದೆ.

 ಮೋಟೋರೋಲಾದ ವಿಶೇಷ ಭಾರತದ ವ್ಯಾಪಾರಿ  ಫ್ಲಿಪ್‌ಕಾರ್ಟ್‌ಲ್ಲಿ ಲಿಸ್ಟಿಂಗ್ ಪ್ರಕಾರ,   ಮೋಟೋ ಎಕ್ಸ್ ಎರಡನೇ ತಲೆಮಾರಿನ ಬೇಸ್ 16 ಜಿಬಿ ಆವೃತ್ತಿ ಈಗ 29,999 ರೂ. ಬೆಲೆಯಿದ್ದು, ಅದರ ಬಿಡುಗಡೆ ದರವಾದ 31,999ಕ್ಕಿಂತ ಕಡಿತವಾಗಿದೆ. ಎಕ್ಸ್‌ಚೇಂಜ್ ಆಫರ್ ಅನ್ವಯ ಮೋಟೊರೋಲಾ ಎರಡನೇ ತಲೆಮಾರಿನ ಮೋಟೋ ಎಕ್ಸ್‌ಅನ್ನು ಸ್ಟಾಂಡರ್ಡ್ ಮಾದರಿಗೆ 25,999 ಮತ್ತು ಮರ ಮತ್ತು ಚರ್ಮದ ಆವೃತ್ತಿಗಳಿಗೆ 25,999 ರೂ.ಗಳಿವೆ.

ಮೋಟೊರೋಲಾ 32ಜಿಬಿ ಆವೃತ್ತಿಯನ್ನು ಬಿಡುಗಡೆ ಮಾಡುವ ದಿನವೇ ಈ ಡಿಸ್ಕೌಂಟ್‌ಗಳನ್ನು ಪ್ರಕಟಿಸಲಾಗಿದೆ. ಎರಡನೇ ತಲೆಮಾರಿನ ಮೋಟೋ ಎಕ್ಸ್ 5.2 ಇಂಟ್ ಪೂರ್ಣ ಎಚ್‌ಡಿ, ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ.ಇದು ವಕ್ರವಾದ ಲೋಹದ ಫ್ರೇಮ್ ಹೊಂದಿದೆ.

2.5 ಜಿಎಚ್‌ಜಡ್ ಕ್ವಾಲ್‌ಕಾಂ ಸ್ನಾಪ್‌ಡ್ರಾಗನ್ 801 ಕ್ಯಾಟ್ ಕೋರ್ ಪ್ರೋಸೆಸರ್ ಮತ್ತು 2 ಜಿಬಿ ರಾಮ್ ಹೊಂದಿರುವ ಇದು 9.9 ಮಿಮಿ ದಪ್ಪನಾಗಿದ್ದು 144 ಗ್ರಾಮ್ ತೂಕವಿದೆ.

Share this Story:

Follow Webdunia kannada