Select Your Language

Notifications

webdunia
webdunia
webdunia
webdunia

ಆರ್‌ಬಿಐ ರೆಕ್ಕೆಗಳನ್ನು ಕತ್ತರಿಸುವುದರ ವಿರುದ್ಧ ಮೂಡಿ ಎಚ್ಚರಿಕೆ

ಆರ್‌ಬಿಐ ರೆಕ್ಕೆಗಳನ್ನು  ಕತ್ತರಿಸುವುದರ ವಿರುದ್ಧ ಮೂಡಿ ಎಚ್ಚರಿಕೆ
ನವದೆಹಲಿ , ಗುರುವಾರ, 30 ಜುಲೈ 2015 (18:29 IST)
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಬಡ್ಡಿ ದರ ನಿಗದಿ ಮಾಡುವ ಸ್ವಾತಂತ್ರ್ಯವನ್ನು ಮೊಟಕು ಮಾಡುವ ಕರಡು ಪ್ರಸ್ತಾವನೆಗೆ ಮೂಡಿ ಕಾರ್ಪೊರೇಷನ್ ಘಟಕವಾದ ಮೂಡಿ ಅನಾಲಿಟಿಕ್ಸ್ ಟೀಕಿಸಿದೆ. ಭಾರತದ ಆರ್ಥಿಕ ಭವಿಷ್ಯಕ್ಕೆ ಇದರಿಂದ ಪೆಟ್ಟಾಗುತ್ತದೆ ಎಂದು ಮೂಡಿ ವರದಿಯಲ್ಲಿ ತಿಳಿಸಿದೆ. 
 
ಕರಡು ಪ್ರಸ್ತಾವನೆಯಲ್ಲಿ ಸರ್ಕಾರಕ್ಕೆ ಅರ್ಧದಷ್ಟು ಸದಸ್ಯರನ್ನು ನೇಮಕ ಮಾಡಲು ಅವಕಾಶ ನೀಡುತ್ತದೆ. ಅದು ಜಾರಿಗೆ ಬಂದರೆ, ಸಮಿತಿಯ ನಿರ್ಧಾರಗಳಲ್ಲಿ ಆರ್‌ಬಿಐ ಗವರ್ನರ್ ಅವರಿಗೆ ಯಾವುದೇ ವಿಟೊ ಅಧಿಕಾರವಿರುವುದಿಲ್ಲ. ಪ್ರಸಕ್ತ ಆರ್‌ಬಿಐ ಗವರ್ನರ್ ಸಲಹಾ ಸಮಿತಿಯ ಜೊತೆ ಸಮಾಲೋಚನೆ ನಡೆಸಿದರೂ, ಬಡ್ಡಿ ದರ ನಿರ್ಧರಿಸುವಾಗ ಬಹುಮತದ ಅಭಿಪ್ರಾಯಕ್ಕೆ ಬೆಲೆ ನೀಡುವ ಅಗತ್ಯವಿರಲಿಲ್ಲ.
 
ಮೂಡಿಯು ರಘುರಾಮ್ ರಾಜನ್ ಅವರ ಹಣದುಬ್ಬರ ಹೋರಾಟದ ಪ್ರಯತ್ನಗಳಿಗೆ ಬೆಂಬಲಿಸಿದೆ.  2013ರ ಸೆಪ್ಟೆಂಬರ್‌ನಲ್ಲಿ ಆರ್‌ಬಿಐ ಮುಖ್ಯಸ್ಥರಾಗಿ ಆಯ್ಕೆಯಾದ ಬಳಿಕ, ರಾಜನ್ ರೆಪೋ ದರವನ್ನು 75 ಬಿಪಿಎಸ್ ಏರಿಕೆ ಮಾಡಿದೆ. ಇದರಿಂದ ಹಣದುಬ್ಬರವು ಎರಡಂಕಿ ಮಟ್ಟದಲ್ಲಿ ಇಳಿಮುಖವಾಗಿದೆ.
 
ಒಟ್ಟಾರೆಯಾಗಿ ಭಾರತದ ವಿತ್ತೀಯ ನೀತಿಯು ಗವರ್ನರ್ ರಘುರಾಮ್ ರಾಜನ್ ನೇತೃತ್ವದಲ್ಲಿ ಪರಿಣಾಮಕಾರಿಯಾಗಿದೆ. ಹಣದುಬ್ಬರ ಕುಸಿತ, ಬಾಹ್ಯ ಲೆಕ್ಕಗಳು ಸುಧಾರಣೆಯಾಗಿದೆ ಮತ್ತು ಆರ್ಥಿಕತೆಯಲ್ಲಿ ಮತ್ತಷ್ಟು ಬಡ್ಡಿದರ ಕಡಿತ ನಿರೀಕ್ಷಿಸಲಾಗಿದೆ ಎಂದು ಮೂಡಿ ಹೇಳಿದೆ. 

Share this Story:

Follow Webdunia kannada