Select Your Language

Notifications

webdunia
webdunia
webdunia
webdunia

ಏಪ್ರಿಲ್ 2015ರಿಂದ ಉದ್ಯಮ ಸ್ಥಾಪನೆಗೆ ಆನ್‌ಲೈನ್ ಅನುಮೋದನೆ ವ್ಯವಸ್ಥೆ

ಏಪ್ರಿಲ್ 2015ರಿಂದ ಉದ್ಯಮ ಸ್ಥಾಪನೆಗೆ ಆನ್‌ಲೈನ್ ಅನುಮೋದನೆ ವ್ಯವಸ್ಥೆ
ನವದೆಹಲಿ , ಶುಕ್ರವಾರ, 28 ನವೆಂಬರ್ 2014 (12:37 IST)
2015 ಏಪ್ರಿಲ್‌ನಿಂದ ಭಾರತದಲ್ಲಿ ಹೊಸ ಉದ್ಯಮ ಆರಂಭಿಸುವುದಕ್ಕೆ ಉದ್ಯಮಿಗಳು ಸರ್ಕಾರಿ ಕಚೇರಿಗಳಿಗೆ ಅಲೆದಾಟ ಮಾಡುವ ಅಗತ್ಯವಿಲ್ಲ. ಕೇಂದ್ರ ಮತ್ತು ರಾಜ್ಯಸರ್ಕಾರಿ ಇಲಾಖೆಗಳಿಂದ ವಿವಿಧ ಉದ್ಯಮಗಳಿಗೆ ಅಗತ್ಯವಾದ 200ಕ್ಕಿಂತ ಹೆಚ್ಚು ಪರ್ಮಿಟ್‌ಗಳಿಗೆ ಆನ್‌ಲೈನ್ ಅನುಮೋದನೆ ವ್ಯವಸ್ಥೆಯನ್ನು ನರೇಂದ್ರ ಮೋದಿ ಸರ್ಕಾರ ಮಾಡಿದೆ. 
 
ಆಡಳಿತವನ್ನು ಜನರ ಕೈಬೆರಳಿಗೆ ತರುವ ಪ್ರಧಾನಿ ಮೋದಿ  ದೂರದೃಷ್ಟಿಗೆ ಮಾದರಿಯಾಗಿ ಯಾವುದೇ ಉದ್ಯಮಕ್ಕೆ ಅನುಮತಿ ಕೋರಿ ನೋಂದಣಿ ಮಾಡಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಎಲ್ಲಾ ಪರ್ಮಿಟ್‌ಗಳ ಸ್ಥಾನಮಾನ ಮತ್ತು ಪರವಾನಗಿಗಳ ಜಾಡು ಹಿಡಿಯಲು ಉದ್ಯಮಿಗಳಿಗೆ ಅವಕಾಶ ಕಲ್ಪಿಸುತ್ತದೆ.

ಕ್ಯಾಬಿನೆಟ್ ಕಾರ್ಯದರ್ಶಿ ಅಜಿತ್ ಸೇಟ್ ಶುಕ್ರವಾರ ಭಾರತದ ಉದ್ಯಮಿಗಳನ್ನು ವಾಣಿಜ್ಯ ಮತ್ತು ಕೈಗಾರಿಕೆ ಕಾರ್ಯದರ್ಶಿಗಳ ಜೊತೆ ಭೇಟಿ ಮಾಡಿ ಉದ್ಯಮ ಪ್ರಾರಂಭಿಸುವ ಪ್ರಕ್ರಿಯೆ ಸುಧಾರಣೆಗೆ ಕ್ರಮಗಳನ್ನು ಕುರಿತು ಚರ್ಚಿಸಲಿದ್ದಾರೆ. ವಿಶ್ವಬ್ಯಾಂಕ್ ಸೂಚ್ಯಂಕದಲ್ಲಿ ಭಾರತ ಪ್ರಸಕ್ತ 14ನೇ ಶ್ರೇಯಾಂಕದಲ್ಲಿದ್ದು, ಸರ್ಕಾರ ಆ ಶ್ರೇಯಾಂಕವನ್ನು 50ಕ್ಕೆ ಸುಧಾರಿಸಲು ಬದ್ಧವಾಗಿದೆ. 

Share this Story:

Follow Webdunia kannada