Select Your Language

Notifications

webdunia
webdunia
webdunia
webdunia

ಈಗ ಹೆಚ್ಚಾಗಲಿವೆ ಮೊಬೈಲ್ ಕಾಲ್‌ ದರಗಳು

ಈಗ ಹೆಚ್ಚಾಗಲಿವೆ ಮೊಬೈಲ್ ಕಾಲ್‌ ದರಗಳು
ನವದೆಹಲಿ , ಗುರುವಾರ, 24 ಜುಲೈ 2014 (18:01 IST)
ದೂರಸಂಚಾರ ಕಂಪೆನಿಗಳು ಮೊಬೈಲ್ ಕಾಲ್‌ ಸೇವೆ ದರಗಳು ನಿರ್ಧರಿಸುವ ಸ್ವಾತಂತ್ರ್ಯ ಹೊಂದಿವೆ ಎಂದು ಭಾರತೀಯ ದೂರಸಂಚಾರ ನಿಯಮ ಪ್ರಾಧಿಕಾರ(ಟ್ರಾಯ್‌) ತಿಳಿಸಿದೆ. ಒಂದು ವೇಳೆ ದೂರ ಸಂಚಾರ ಕಂಪೆನಿಗಳು ಪ್ರಸಕ್ತ ಕಾಲ್‌‌ದರಗಳಗಿಂತ ಹೆಚ್ಚಿನ ದರ ಮಾಡಲು ಬಯಸಿದರೆ ಈ ಅಧಿಕಾರ ಅವುಗಳಿಗೆ ಇರುತ್ತದೆ ಎಂದು ಟ್ರಾಯ್ ತಿಳಿಸಿದೆ. 
 
" ನಾನು ಮೂಲ ದರಗಳಲ್ಲಿ ಹೆಚ್ಚಳ ಬಯಸುವುದಿಲ್ಲ, ಒಂದು ವೇಳೆ ಕಂಪೆನಿಗಳು ಬದಲಾವಣೆ ಮಾಡಲು ಬಯಸಿದರೆ ಟ್ರಾಯ್‌ ಹತ್ತಿರ ನಿಯಂತ್ರಿಸುವ ಅಧಿಕಾರವಿದೆ. ನಾವು ದರ ಏರಿಕೆ ವಿಚಾರದಲ್ಲಿ ಮುಕ್ತವಾಗಿದ್ದೇವೆ. ಇದರಲ್ಲಿ ಮುಚ್ಚಿಡುವುದು ಏನಿಲ್ಲ:" ಎಂದು ಟ್ರಾಯ್ ಚೇರಮೆನ್‌ ರಾಹುಲ್‌ ಖುಲ್ಲರ್ ತಿಳಿಸಿದ್ದಾರೆ. 
 
ಟ್ರಾಯ್‌ನ ಈ ಶಿಫಾರಸ್ಸಿನ ನಂತರ ಮೊಬೈಲ್ ದರಗಳಲ್ಲಿ ಬದಲಾವಣೆ ಬಗ್ಗೆ ಕೇಳಲಾಗಿತ್ತು. ಟ್ರಾಯ್‌‌ ಸ್ಪೆಕ್ಟಂ ಭಾಗಿಧಾರಿ ಮತ್ತು ಲೀಜ್‌ ಲೈನ್‌ ಮೇಲೆ ಅಧಿಕ ದರಗಳ ಮೇಲೆ ಕೆಲಸ ನಿರ್ವಹಿಸುತ್ತಿದೆ. ಇದರಿಂದ ಮೊಬೈಲ್ ಅಪರೇಟರ್‌ಗಳ ವೆಚ್ಚದಲ್ಲಿ ಕಡಿಮೆಯಾಗುವುದು. 
 
ಮೊಬೈಲ್ ಅಪರೇಟರ್‌‌ಗಳು ಗ್ರಾಹಕರಿಂದ ವಸೂಲಿ ಮಾಡುವ ಮೂಲ ದರಗಳು ಅಧಿಕವಾಗಿವೆ. ಕಂಪೆನಿ ಇವುಗಳನ್ನು ಕಡಿಮೆ ಮಾಡಬಹುದು. ಹೆಚ್ಚಿನ ಅಪರೇಟರ್‌‌ಗಳ ಮೂಲ ದರ ಪ್ರತಿ ಸೆಕೆಂಡ್‌ಗೆ 2 ಪೈಸೆ ಇದೆ ಎಂದು ಟ್ರಾಯ್ ಮೂಲಗಳು ತಿಳಿಸಿವೆ. 

Share this Story:

Follow Webdunia kannada