Select Your Language

Notifications

webdunia
webdunia
webdunia
webdunia

ಮೀಜೂ ಎಮ್‌-3 ನೋಟ್ ಸ್ಮಾರ್ಟ್‌ಪೋನ್‌ ಮಾರುಕಟ್ಟೆಗೆ

ಮೀಜೂ ಎಮ್‌-3 ನೋಟ್ ಸ್ಮಾರ್ಟ್‌ಪೋನ್‌ ಮಾರುಕಟ್ಟೆಗೆ
ನವದೆಹಲಿ , ಬುಧವಾರ, 11 ಮೇ 2016 (12:51 IST)
ಸ್ಮಾರ್ಟ್‌ಪೋನ್ ತಯಾರಿಕಾ ಸಂಸ್ಥೆಯಾಗಿರುವ ಮೀಜೂ, ಹೊಸ ವೈಶಿಷ್ಟ್ಯದ ಎಮ್‌-3 ನೋಟ್ ಆವೃತ್ತಿಯ ಸ್ಮಾರ್ಟ್‌ಪೋನ್‌ನ್ನು ಬಿಡುಗಡೆ ಮಾಡಿದೆ. ಈ ಆವೃತ್ತಿಯ ಪೋನ್‌ಗಳು ಮೇ 31 ರಿಂದ ಅಮೆಜಾನ್ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. 
ಈ ಆವೃತ್ತಿಯ ಪೋನ್‌ಗಳು ಚೀನಾದ ಮಾರುಕಟ್ಟೆಯಲ್ಲಿ 2 ವಿಧದಲ್ಲಿ ಲಭ್ಯವಾಗಲಿದ್ದು, 2 ಜಿಬಿ ರ್ಯಾಮ್ 16 ಜಿಬಿ ಆಂತರಿಕ ಸ್ಟೋರೇಜ್ ಮತ್ತು 3 ಜಿಬಿ ರ್ಯಾಮ್ 32 ಜಿಬಿ ಆಂತರಿಕ ಸ್ಟೋರೇಜ್ ವೈಶಿಷ್ಟ್ಯದಲ್ಲಿ ಲಭ್ಯವಿದೆ.
 
ಮೀಜೂ ಎಮ್‌-3 ನೋಟ್ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಫ್ಲೆಮ್ 5 ಓಎಸ್ ಆಧಾರಿತ ಆಂಡ್ರಾಯ್ಡ್ 5.1 ಲಾಲಿಪಾಪ್ ವೈಶಿಷ್ಟ್ಯವನ್ನು ಹೊಂದಿದ್ದು, ಈ ಪೋನ್‌ಗಳು 5.5 ಇಂಚ್ ಫುಲ್-ಎಚ್‌ಡಿ (1080x1920 ಪಿಕ್ಸೆಲ್) ಎಲ್‌ಟಿಜಿಎಸ್ ಡಿಸ್‌ಪ್ಲೇ, ಆಕ್ಟಾ ಕೋರ್ ಮೀಡಿಯಾಟೆಕ್‌ ಹೆಲಿಯೋ ಪಿ-10 ಎಸ್‌ಒಸಿ (1.8ಜಿಎಚ್‌ಝಡ್ ಕ್ವಾಡ್ ಕೋರ್ ಕಾರ್ಟೆಕ್ಸ್-ಎ53, ಮತ್ತು 1ಎಚ್‌ಝಡ್ ಕ್ವಾಡ್ ಕೋರ್ ಕಾರ್ಟೆಕ್ಸ್-ಎ53) ವೈಶಿಷ್ಟ್ಯ ಹೊಂದಿದೆ.
 
ಈ ಆವೃತ್ತಿಯ ಪೋನ್‌ಗಳು ಎಫ್/2.0 ಅಪರ್ಚರ್ ಪಿಡಿಎಎಫ್ ಆಟೋಫೋಕಸ್ ಜೊತೆಗೆ 13 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು ಎಫ್/2.0 ಅಪರ್ಚರ್ 5 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಮೀಜೂ ಎಮ್‌-3 ನೋಟ್ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು 2.1 ಎಮ್‌-ಟಚ್ ತಂತ್ರಜ್ಞಾನದ ಫಿಂಗರ್ಪ್ರಿಂಟ್ ಸೆನ್ಸಾರ್ ಹೊಂದಿದೆ.
 
ಎಮ್‌-3 ನೋಟ್ ಆವೃತ್ತಿಯ ಪೋನ್‌ಗಳು ಡ್ಯುಯಲ್ ಸಿಮ್ ಹೊಂದಿದ್ದು, ಎರಡು ಸಿಮ್‌ಗಳು 4ಜಿ ಸಂಪರ್ಕಕ್ಕೆ ಸ್ಪಂದಿಸುತ್ತವೆ. ಈ ಪೋನ್‌ಗಳು 802.11 ಎ/ಬಿ/ಜಿ/ಎನ್ ವೈ-ಫೈ, ಬಿಎಲ್‌ಇ ಜೊತೆ 4.0 ಬ್ಲೂಟೂತ್ ಮತ್ತು ಜಿಪಿಎಸ್‌/ಎ ಜಿಪಿಎಸ್ ಕನೆಕ್ಟಿವಿಟಿ ಆಯ್ಕೆಯನ್ನು ಹೊಂದಿದ್ದು, ಗ್ರಾಪಕರಿಗೆ ಈ ಪೋನ್‌ಗಳು ಗ್ರೇ, ಗೋಲ್ಡ್ ಮತ್ತು ಸಿಲ್ವರ್ ಬಣ್ಣದಲ್ಲಿ ಲಭ್ಯವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಭಾರತಕ್ಕೆ ಮದ್ಯದ ದೊರೆ ಮಲ್ಯರನ್ನು ಒಪ್ಪಿಸಲು ಬ್ರಿಟನ್ ನಕಾರ