Webdunia - Bharat's app for daily news and videos

Install App

ನಾನು ಆಪ್ಸ್‌ನಿಂದ ಲ್ಯಾಂಡ್‌ಲೈನ್ ಫೋನ್‌ಗಳಿಗೆ ಉಚಿತ ಕರೆ ಸೌಲಭ್ಯ

Webdunia
ಬುಧವಾರ, 22 ಜೂನ್ 2016 (19:38 IST)
ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸ್‌ಬುಕ್ ಮೆಸೆಂಜರ್ ಸೇರಿದಂತೆ ಅನೇಕ ಮೊಬೈಲ್ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಕರೆ ಮಾಡುವ ಸೌಲಭ್ಯವನ್ನು ನೀಡಿದೆ.
 
ಆದಾಗ್ಯೂ, ಈ ಅಪ್ಲಿಕೇಶನ್‌ಗಳು ಕೇವಲ ಮೊಬೈಲ್ ಮೂಲಕ ಧ್ವನಿ ಕರೆ ಮಾಡುವ ಸೌಲಭ್ಯವನ್ನು ನೀಡುತ್ತವೆ. ಆದರೆ, "ನಾನು" ಆ್ಯಪ್ ಅಪ್ಲಿಕೇಶನ್ ಮೂಲಕ ಲ್ಯಾಂಡ್‌ಲೈನ್ ಸಂಪರ್ಕಗಳಿಗೂ ಉಚಿತವಾಗಿ ಕರೆ ಮಾಡಬಹುದಾಗಿದೆ.
 
ನಾನು ಹೆಸರಿನ ಹೊಸ ವೈಶಿಷ್ಟ್ಯದ ಅಪ್ಲಿಕೇಶನ್ ಮೂಲಕ ಮೊಬೈಲ್ ಸಂಖ್ಯೆಗಳಿಗೆ ಮತ್ತು ಲ್ಯಾಂಡ್‌ಲೈನ್ ದೂರವಾಣಿ ಸಂಪರ್ಕಗಳಿಗೆ ಉಚಿತವಾಗಿ ಕರೆ ಮಾಡಬಹುದಾಗಿದೆ.
 
ಈ ಹಿಂದೆ ಸರಕಾರ ಮತ್ತು ಟೆಲಿಕಾಮ್ ಸಂಸ್ಥೆಗಳು ನಾನು ಹೆಸರಿನ ಅಪ್ಲಿಕೇಶನ್ ಕುರಿತು ಆಕ್ಷೇಪಣೆ ಎತ್ತಿದ್ದವು. ಈ ಕುರಿತು ನಾನು ಅಪ್ಲಿಕೇಶನ್ ಸೇವೆಯಿಂದ ಯಾವುದೇ ಕಾನೂನು ಉಲ್ಲಂಘನೆಯಾಗುವುದಿಲ್ಲ ಎಂದು ನಾನು ಅಪ್ಲಿಕೇಶನ್ ಮುಖ್ಯಸ್ಥ ಮಾರ್ಟಿನ್ ನೈಗೇಟ್ ಪ್ರತಿಕ್ರಿಯೆ ನೀಡಿದ್ದಾರೆ.
 
ನಾನು ಹೆಸರಿನ ಹೊಸ ವೈಶಿಷ್ಟ್ಯದ ಅಪ್ಲಿಕೇಶಷನ್, ಬಳಕೆದಾರರಿಗೆ ಪ್ರತಿನಿತ್ಯ ವಿಶ್ವದಾದ್ಯಂತ ಕರೆ ಮಾಡಲು ಸೀಮಿತವಾದ ಉಚಿತ ಕರೆಗಳನ್ನು ನೀಡುತ್ತದೆ. ಈ ಅಪ್ಲಿಕೇಶನ್‌ನ್ನು ಇನ್‌ಸ್ಟಾಲ್ ಮಾಡಿಕೊಳ್ಳದ ಗ್ರಾಹಕರಿಗೂ ಸಹ ಉಚಿತವಾಗಿ ಕರೆ ಮಾಡಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments