Webdunia - Bharat's app for daily news and videos

Install App

2017ರಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಹವಾ ಆರಂಭವಾಗಲಿದೆಯಂತೆ...!

Webdunia
ಮಂಗಳವಾರ, 28 ಜೂನ್ 2016 (19:27 IST)
ಮಾರುತಿ ಸುಜುಕಿ ಸ್ವಿಫ್ಟ್ 2017ರ ಆವೃತ್ತಿಯ ಕಾರುಗಳು ಮುಂದಿನ ವರ್ಷದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿರುವಂತೆಯೇ ಕೆಲವು ಚಿತ್ರಗಳು ಸೋರಿಕೆಯಾಗಿರುವುದು ನೋಡಿದಲ್ಲಿ ಸ್ವಿಫ್ಟ್ ಕಾರು ಯಾವ ರೀತಿ ಇರಬಹುದು ಎನ್ನುವ ಅಂದಾಜು ಮೂಡಿಸುತ್ತದೆ. 
 
ಮಾರುತಿ ಸುಜುಕಿ ಸಂಸ್ಥೆ ಹೊಸ ಆವೃತ್ತಿಯ ಸ್ವಿಫ್ಟ್ ಕಾರುಗಳಲ್ಲಿ ಹಲವಾರು ಬದಲಾವಣೆಗಳಿರಲಿವೆ ಎಂದು ಗ್ರಾಹಕರಿಗೆ ಭರವಸೆ ನೀಡಿದ್ದು, ಮುಂದಿನ ವರ್ಷದಿಂದ ಮಾರಾಟಕ್ಕೆ ಮಾರುಕಟ್ಟೆಯನ್ನು ಪ್ರವೇಶಿಸಲಿವೆ ಎಂದು ಮೂಲಗಳು ತಿಳಿಸಿವೆ. 
 
ಭಾರತದಲ್ಲಿ ಯಶಸ್ವಿಯಾಗಿ ಮಾರಾಟವಾಗಿರುವ ಬಲೆನೋ ಮತ್ತು ಬ್ರೆಜ್ಜಾ ಆವೃತ್ತಿಯ ಕಾರುಗಳ ನಂತರ ಮಾರುತಿ ಸುಜುಕಿ, ಸ್ವಿಫ್ಟ್ ಕಾರುಗಳನ್ನು ವಿಶಿಷ್ಟವಾಗಿ ಮರುವಿನ್ಯಾಸಗೊಳಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧಸಿದೆ. ಆದರೆ, 2017 ರಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಸ್ವಿಫ್ಟ್ ಆವೃತ್ತಿಯ ಕಾರುಗಳು ಬದಲಾವಣೆಯ ವಿನ್ಯಾಸದೊಂದಿಗೆ, ಸುಧಾರಿತ ಮೈಲೇಜ್ ಮತ್ತು ಅತ್ಯುತ್ತಮ ಪ್ರದರ್ಶನ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. 
 
ಈ ಆವೃತ್ತಿಯ ಕಾರುಗಳು ಮೂರು ಎಂಜಿನ್ ಆಯ್ಕೆಯ ಮೂಲಕ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಹಲವು ಮಾಧ್ಯಮಗಳು ವರದಿಯನ್ನು ಪ್ರಕಟಿಸಿವೆ.
 
ಅಕ್ಟೋಬರ್ ತಿಂಗಳಲ್ಲಿ ಪ್ಯಾರಿಸ್‌ನಲ್ಲಿ ನಡೆದ ಆಟೋ ಪ್ರದರ್ಶನದಲ್ಲಿ ಹೊಸ ವೈಶಿಷ್ಟ್ಯದ ಸ್ವಿಫ್ಟ್ ಕಾರುಗಳನ್ನು ಪ್ರದರ್ಶಿಸಲಾಗಿತ್ತು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments