Webdunia - Bharat's app for daily news and videos

Install App

ಟಾಪ್‌-10 ಪಟ್ಟಿಯಲ್ಲಿ ಮಾರುತಿ ಸುಜುಕಿ ಉತ್ಪನ್ನಗಳಿಗೆ ಅಗ್ರಸ್ಥಾನ

Webdunia
ಸೋಮವಾರ, 29 ಆಗಸ್ಟ್ 2016 (13:36 IST)
ಇತ್ತೀಚೆಗೆ ಬಿಡುಗಡೆಯಾದ ಸುವಿ ವಿಟಾರಾ ಬ್ರೆಝ್ಝಾ ಸೇರಿದಂತೆ ಏಳು ಆವೃತ್ತಿಯ ವಾಹನಗಳು ಜುಲೈ ತಿಂಗಳಿನ ಮಾರಾಟದ ಟಾಪ್‌ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವ ಮೂಲಕ ಪ್ರಯಾಣಿಕ ವಾಹನ ವಿಭಾಗದ ಮಾರಾಟದಲ್ಲಿ ಮಾರುತಿ ಸುಜುಕಿ ಸಂಸ್ಥೆ ಅಗ್ರ ಸ್ಥಾನವನ್ನು ಕಾಪಾಡಿಕೊಂಡಿದೆ. 
 
ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್‌ನ ಇತ್ತೀಚಿನ ವರದಿಯ ಪ್ರಕಾರ, ಪ್ರಸಕ್ತ ಸಾಲಿನ ಜುಲೈ ತಿಂಗಳಲ್ಲಿ 19,844 ಕಾರುಗಳು ಮಾರಾಟವಾಗುವ ಮೂಲಕ ಮಾರುತಿ ಸುಜುಕಿಯ ಆಲ್ಟೋ ಕಾರುಗಳು ಟಾಪ್‌ಟೆನ್ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷದ ಜುಲೈ ತಿಂಗಳಲ್ಲಿ 22,212 ಕಾರುಗಳ ಮಾರಾಟವಾಗಿದ್ದರೆ, ಪ್ರಸಕ್ತ ವರ್ಷದ ಜುಲೈ ತಿಂಗಳ ಅವಧಿಯಲ್ಲಿ 19,844 ಅಲ್ಟೋ ಕಾರುಗಳು ಮಾರಾಟವಾಗಿವೆ.
 
ಜುಲೈ ತಿಂಗಳಲ್ಲಿ 16,170 ಕಾರುಗಳು ಮಾರಾಟವಾಗುವ ಮೂಲಕ ಕಾಂಪ್ಯಾಕ್ಟ್ ಸೆಡಾನ್ ಡಿಜೈರ್ ಆವೃತ್ತಿಯ ಕಾರುಗಳು ಎರಡನೇಯ ಸ್ಥಾನವನ್ನು ಪಡೆದುಕೊಂಡಿದ್ದು, ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ 19,716 ಕಾರುಗಳು ಮಾರಾಟವಾಗಿದ್ದವು.
 
ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ 15,540 ಕಾರುಗಳು ಮಾರಾಟವಾಗಿ, ಪ್ರಸಕ್ತ ಆರ್ಥಿಕ ವರ್ಷದ ಜುಲೈ ತಿಂಗಳಲ್ಲಿ 15,540 ಕಾರುಗಳನ್ನು ಮಾರಾಟ ಹೊಂದುವ ಮೂಲಕ ಕಾಂಪ್ಯಾಕ್ಟ್ ವ್ಯಾಗನ್ ಆರ್ ಆವೃತ್ತಿಯ ಕಾರುಗಳು ಮೂರನೇಯ ಸ್ಥಾನವನ್ನು ಪಡೆದುಕೊಂಡಿದೆ.
 
ಕಳೆದ ಆರ್ಥಿಕ ವರ್ಷದ ಜುಲೈ ತಿಂಗಳಲ್ಲಿ 18,870 ಕಾರುಗಳು ಮಾರಾಟ ಹೊಂದುವ ಮೂಲಕ ಮೂರನೇಯ ಸ್ಥಾನವನ್ನು ಪಡೆದುಕೊಂಡಿದ್ದ ಮಾರುತಿ ಸುಜುಕಿಯ ಪ್ರೀಮಿಯಂ ಹ್ಯಾಚ್ಬ್ಯಾಕ್ ಸ್ವಿಫ್ಟ್ ಆವೃತ್ತಿಯ ಕಾರುಗಳು, ಪ್ರಸಕ್ತ ಸಾಲಿನ ಜುಲೈನಲ್ಲಿ 13,934 ಕಾರುಗಳು ಮಾರಾಟವಾಗುವ ಮೂಲಕ ನಾಲ್ಕನೇಯ ಸ್ಥಾನವನ್ನು ಪಡೆದುಕೊಂಡಿದೆ. 
 
ಕಳೆದ ತಿಂಗಳಲ್ಲಿ 11,961 ಕಾರುಗಳ ಮಾರಾಟವಾಗುವ ಮೂಲಕ ಹುಂಡೈ ಹ್ಯಾಚ್ಬ್ಯಾಕ್ ಗ್ರ್ಯಾಂಡ್ ಐ-10 ಆವೃತ್ತಿಯ ಕಾರುಗಳು ಐದನೇಯ ಸ್ಥಾನವನ್ನು ಪಡೆದುಕೊಂಡಿದ್ದು, ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ 8,691 ಕಾರುಗಳು ಮಾರಾಟವಾಗಿದ್ದವು.
 
ಪ್ರಸಕ್ತ ಸಾಲಿನ ಜುಲೈ ತಿಂಗಳಲ್ಲಿ 10,232 ಕಾರುಗಳು ಮಾರಾಟವಾಗುವ ಮೂಲಕ ಮಾರುತಿ ಸುಜುಕಿಯ ವಿಟಾರಾ ಬ್ರೆಝ್ಝಾ ಆವೃತ್ತಿಯ ಕಾರುಗಳು ಆರನೇಯ, ಹಾಗೂ 9,910 ಕಾರುಗಳು ಮಾರಾಟವಾಗುವ ಮೂಲಕ ಹುಂಡೈ ಪ್ರೀಮಿಯಂ ಹ್ಯಾಚ್ಬ್ಯಾಕ್ ಎಲೈಟ್ ಐ 20 ಆವೃತ್ತಿಗಳು ಏಳನೇಯ ಸ್ಥಾನವನ್ನು ಪಡೆದುಕೊಂಡಿದೆ. 
 
ಜುಲೈ ತಿಂಗಳಲ್ಲಿ 9,897 ಕಾರುಗಳು ಮಾರಾಟವಾಗುವ ಮೂಲಕ ಪ್ರವೇಶ ಮಟ್ಟದ ರೆನಾಲ್ಟ್ ಕ್ವೀಡ್ ಆವೃತ್ತಿಯ ಕಾರುಗಳು ಎಂಟನೇಯ, 9,120 ಕಾರುಗಳು ಮಾರಾಟವಾಗುವ ಮೂಲಕ ಪ್ರೀಮಿಯಂ ಹ್ಯಾಚ್ಬ್ಯಾಕ್ ಬಲೆನೋ ಆವೃತ್ತಿಗಳು ಒಂಬತ್ತನೇಯ ಹಾಗೂ 8,564 ಕಾರುಗಳ ಮಾರಾಟದ ಮೂಲಕ ವ್ಯಾನ್ ಆಮ್ನಿ ಕಾರುಗಳು ಹತ್ತನೇಯ ಸ್ಥಾನವನ್ನು ಪಡೆದುಕೊಂಡಿದೆ. 
 
ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಟಾಪ್‌ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದ ಹುಂಡೈ ಸಂಸ್ಥೆಯ ಕ್ರೇಟಾ, ಹೋಂಡಾ ಸಂಸ್ಥೆಯ ಜಾಝ್ ಹಾಗೂ ಮಾರುತಿ ಸುಜುಕಿಯ ಸೆಲೆರಿಯೋ ಆವೃತ್ತಿಯ ಕಾರುಗಳು, ಪ್ರಸಕ್ತ ಸಾಲಿನ ಟಾಪ್‌ಟೆನ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ವಿಫಲವಾಗಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments