Select Your Language

Notifications

webdunia
webdunia
webdunia
webdunia

ಮಹೀಂದ್ರಾ ಟಿಯುವಿ-300 ಆವೃತ್ತಿಯ ವಾಹನ ಮಾರುಕಟ್ಟೆಗೆ

ಮಹೀಂದ್ರಾ ಟಿಯುವಿ-300 ಆವೃತ್ತಿಯ ವಾಹನ ಮಾರುಕಟ್ಟೆಗೆ
ನವದೆಹಲಿ , ಗುರುವಾರ, 12 ಮೇ 2016 (16:50 IST)
ಯುಟಿಲಿಟಿ ವಾಹನದ ವಾಹನ ತಯಾರಿಕಾ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ, ಎಸ್‌ಯುವಿ ವಿಭಾಗದ ಬಲಿಷ್ಟವಾದ ಟಿಯುವಿ-300 ಆವೃತ್ತಿಯ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮುಂಬೈ ಶೋರೂಮ್ ದರ ಹೊರತುಪಡಿಸಿ ಈ ಆವೃತ್ತಿಯ ವಾಹನಗಳು 8.87 ಲಕ್ಷ ರೂಪಾಯಿ ಬೆಲೆಯಲ್ಲಿ ಲಭ್ಯವಾಗಲಿದೆ.
ಬಲಿಷ್ಟವಾದ ಟಿಯುವಿ-300 ಟಿ-8 ಮತ್ತು ಟಿ8-ಎಎಮ್‌ಟಿ ಆವೃತ್ತಿಯ ವಾಹನಗಳು ಹೊಸ ಎಮ್‌‌ಹಾಕ್ 100 ಎಂಜಿನ್, 100 ಬಿಎಚ್‌ಪಿ ಸಾಮರ್ಥ್ಯವನ್ನು ಹೊಂದಿದೆ.
 
ಎಎಮ್‌ಟಿ ಆವೃತ್ತಿಯ ವಾಹನಗಳನ್ನು ಹೆಚ್ಚು ಶಕ್ತಿ, ಸ್ವಯಂಚಾಲಿತ ಗೇರ್ ವರ್ಗಾವಣೆ ಮತ್ತು ಆಯಾಸ ಮುಕ್ತ ಚಾಲನೆ ಅನುಭವಕ್ಕಾಗಿ ಸಂಪೂರ್ಣವಾಗಿ ನವೀಕರಣಗೊಳಿಸಲಾಗಿದೆ ಎಂದು ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆ ತಿಳಿಸಿದೆ.
 
ಈ ಹೊಸ ವೈಶಿಷ್ಟ್ಯದ ವಾಹನಗಳು ಗ್ರಾಹಕರಿಗೆ ಉತ್ತಮ ವ್ಯವಸ್ಥೆಗಾಗಿ ಕುಶಿನ್ಡ್ ಸೀಟ್ ಮತ್ತು ಎರಡನೇ ಸಾಲಿನಲ್ಲಿ ಮಕ್ಕಳ ಸುರಕ್ಷತೆ ಸೀಟ್‌ಗಳನ್ನು ಅಳವಡಿಸಲಾಗಿದ್ದು, ಚಾಕಲಕರಿಗೆ ರೋಮಾಂಚಕ ಡ್ರೈವ್ ಅನುಭವ ನೀಡಲಿದೆ ಎಂದು ಸಂಸ್ಥೆ ತಿಳಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಾಂಕಾರಿಂದ ಮಾತ್ರ ಕಾಂಗ್ರೆಸ್ ಪುನರುಜ್ಜೀವನ