Webdunia - Bharat's app for daily news and videos

Install App

ಮಹೀಂದ್ರಾದಿಂದ ಪಿಕಪ್‌ ಮಾಡೆಲ್ ವಾಹನ ಮಾರುಕಟ್ಟೆಗೆ

Webdunia
ಬುಧವಾರ, 27 ಏಪ್ರಿಲ್ 2016 (20:46 IST)
ವಾಹನ ತಯಾರಿಕಾ ಸಂಸ್ಥೆಯಾಗಿರುವ ಮಹೀಂದ್ರಾ ಮತ್ತು ಮಹೀಂದ್ರಾ, ಬೊಲೇರೋ ಪಿಕ್ ಅಪ್ ಆವೃತ್ತಿಯ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. 
ದೆಹಲಿ ಶೋರೂಮ್ ದರ ಹೊರತು ಪಡಿಸಿ ಪಿಕಪ್ ಮಾಡೆಲ್‌ನ ಬಿಎಸ್‌-3 ಆವೃತ್ತಿಯ ವಾಹನಗಳ ಬೆಲೆ 6.15 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗಿ ಬಿಎಸ್‌-4 ಆವೃತ್ತಿಯ ವಾಹನದ ಬೆಲೆ 6.30 ಲಕ್ಷ ರೂಪಾಯಿ ಎಂದು ಮೂಲಗಳು ತಿಳಿಸಿವೆ.
 
ಹಿಂದಿನ ಆವೃತ್ತಿಯ ಮೂಲಭೂತವಾಗಿ ಸುಧಾರಿಸಲ್ಪಟ್ಟು ಬೊಲೇರೋ ಪಿಕಪ್‌ ಆವೃತ್ತಿಯನ್ನು ಸಿದ್ಧ ಪಡಿಸಿದ್ದು, ಈ ಆವೃತ್ತಿಯ ವಾಹನಗಳ ವಿನ್ಯಾಸ ಮತ್ತು ಸಣ್ಣ ಯಾಂತ್ರಿಕ ಬದಲಾವಣೆಗಳನ್ನು ನವೀಕರಿಸಲಾಗಿದೆ. ಸರಕು ಸಾಗಟದ ವಾಹನಗಳನ್ನು 1250 ಕೆಜಿ ಮತ್ತು 1500 ಕೆಜಿ ಸಾಮರ್ಥ್ಯ ಎಂದು ಎರಡು ವಿಧದಲ್ಲಿ ವಿಂಗಡಿಸಲಾಗಿದೆ.
 
ಮಹೀಂದ್ರಾ ಸಂಸ್ಥೆಯ ಬೊಲೇರೋ ಪಿಕಪ್‌, ಬಿಎಸ್‌-4 ಆವೃತ್ತಿಯ ವಾಹನಗಳು 2.5 ಲೀಟರ್ ಫೋರ್ ಸಿಲೆಂಡರ್ ಡಿಸೇಲ್ ಎಂಜಿನ್ ಜೊತೆಗೆ 70 ಎಚ್‌ಪಿ ಸಾಮರ್ಥ್ಯ ಹೊಂದಿದ್ದು, ಬಿಎಸ್‌-3 ಆವೃತ್ತಿಗಳು 63 ಎಚ್‌ಪಿ ಸಾಮರ್ಥ್ಯವನ್ನು ಹೊಂದಿದೆ. ಈ ಆವೃತ್ತಿಯ ವಾಹನಗಳು ಪ್ರತಿ ಗಂಟೆಗೆ 110 ಕಿಲೋಮೀಟರ ವೇಗ ಸಾಮರ್ಥ್ಯವನ್ನು ಪಡೆದುಕೊಳ್ಳಲು 5 ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments