Select Your Language

Notifications

webdunia
webdunia
webdunia
webdunia

ಮ್ಯಾಗಿ ನೂಡಲ್ಸ್ ಸ್ನಾಪ್‌ಡೀಲ್‌ನಲ್ಲಿ ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್

ಮ್ಯಾಗಿ ನೂಡಲ್ಸ್ ಸ್ನಾಪ್‌ಡೀಲ್‌ನಲ್ಲಿ ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್
ನವದೆಹಲಿ , ಸೋಮವಾರ, 9 ನವೆಂಬರ್ 2015 (19:15 IST)
ಮ್ಯಾಗಿ ನೂಡಲ್ಸ್ ಸೋಮವಾರದಿಂದ ಪುನಃ ಮಾರುಕಟ್ಟೆಗೆ ಲಗ್ಗೆ ಹಾಕಿದೆ ಎಂದು ನೆಸ್ಲೆ ಇಂಡಿಯಾ ಪ್ರಕಟಿಸಿದೆ. ನೆಸ್ಲೆಯ ಜನಪ್ರಿಯ ಬ್ರಾಂಡ್ ನೂಡಲ್ಸ್‌ಗಳ ಮಾರಾಟಕ್ಕೆ ಮುಂಬೈ ಹೈಕೋರ್ಟ್ ಅನುಮತಿ ನೀಡುವ ಮೂಲಕ ನಿಷೇಧವನ್ನು ರದ್ದುಮಾಡಿದ ಬೆನ್ನಲ್ಲೇ ಸೋಮವಾರದಿಂದ ಸ್ಮಾಪ್‌ಡೀಲ್‌ನಲ್ಲಿ ನೂಡಲ್ಸ್ ಆನ್‌ಲೈನ್ ಮಾರಾಟಕ್ಕೆ ನೆಸ್ಲೆ ಹೊರಟಿದೆ.

 ಜನಪ್ರಿಯ ನೂಡಲ್ ಬ್ರಾಂಡನ್ನು ಸ್ನಾಪ್‌ಡೀಲ್‌ನಲ್ಲಿ 70 ಗ್ರಾಂ 12 ಪ್ಯಾಕ್‌ಗಳಿಗೆ 144 ರೂ.ಗೆ ಮಾರಾಟ ಮಾಡಲಾಯಿತು. ಸ್ನಾಪ್‌ಡೀಲ್‌ನಲ್ಲಿ ಮ್ಯಾಗಿ ಮಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಸೋಲ್ಡ್ಔಟ್ ಆಗುವ ಮೂಲಕ ಮ್ಯಾಗಿ ನೂಡಲ್ಸ್ ಭರ್ಜರಿ ಪುನಾರಂಭ ಮಾಡಿದೆ.
 
ಮ್ಯಾಗಿ ನೂಡಲ್ಸ್ ಗ್ರಾಹಕರಿಗೆ ಸೇರಿದ್ದು, ಪವಿತ್ರ ದೀಪಾವಳಿ ಸೀಸನ್‌ನಲ್ಲಿ ಮ್ಯಾಗಿ ನೂಡಲ್ಸ್ ಪರಿಚಿತ ರುಚಿಯನ್ನು ಪುನಃ ಅವರಿಗೆ ನೀಡಲು ನಮಗೆ ಸಂತೋಷವಾಗುತ್ತದೆ ಎಂದು ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ನೆಸ್ಲೆ ಇಂಡಿಯಾ ತಿಳಿಸಿದೆ.

 ಮ್ಯಾಗಿ ನೂಡಲ್ಸ್ ಆನ್‌ಲೈನ್ ಮಾರಾಟಕ್ಕೆ ಕಂಪನಿಯು ಸ್ನಾಪ್‌ಡೀಲ್ ಜತೆ ಪಾಲುದಾರಿಕೆಯನ್ನು ಸಹ ಹೊಂದಿದೆ. ಮ್ಯಾಗಿ ನೂಡಲ್ಸ್‌ಗಳನ್ನು ಕರ್ನಾಟಕ, ಪಂಜಾಬ್ ಮತ್ತು ಗೋವಾದಲ್ಲಿ ಉತ್ಪಾದಿಸಲಾಗುತ್ತದೆ. 

Share this Story:

Follow Webdunia kannada