Select Your Language

Notifications

webdunia
webdunia
webdunia
webdunia

ರಿಲಯನ್ಸ್ ಡಿಜಿಟಲ್‌ನಿಂದ ಎಲ್‌ವಾಯ್‌ಎಫ್ ಫ್ಲೇಮ್-2 ಮತ್ತು ವಿಂಡ್-4 ಸ್ಮಾರ್ಟ್‌ಪೋನ್ ಬಿಡುಗಡೆ

ರಿಲಯನ್ಸ್ ಡಿಜಿಟಲ್‌ನಿಂದ ಎಲ್‌ವಾಯ್‌ಎಫ್ ಫ್ಲೇಮ್-2 ಮತ್ತು ವಿಂಡ್-4 ಸ್ಮಾರ್ಟ್‌ಪೋನ್ ಬಿಡುಗಡೆ
ನವದೆಹಲಿ , ಶುಕ್ರವಾರ, 13 ಮೇ 2016 (16:53 IST)
ಟಿಲಿಕಾಮ್ ಸಂಸ್ಥೆಯಾಗಿರುವ ರಿಲಯನ್ಸ್ ಡಿಜಿಟಲ್, ಎಲ್‌ವಾಯ್‌ಎಫ್-ಬ್ರ್ಯಾಂಡೆಡ್ ಫ್ಲೇಮ್-2 ಮತ್ತು ವಿಂಡ್-4 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳ ಕ್ರಮವಾಗಿ 4,799 ಮತ್ತು 6,799 ಬೆಲೆಯಲ್ಲಿ ಲಭ್ಯವಾಗಲಿದ್ದು, ಶೀಘ್ರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.
ಈ ಎರಡು ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು (ಸಾಮಾನ್ಯ ಸಿಮ್ + ಮೈಕ್ರೋ ಸಿಮ್) ಡ್ಯುಯಲ್ ಸಿಮ್ ಹೊಂದಿದ್ದು, ಎರಡು ಸಿಮ್‌ಗಳು 4ಜಿ ಸೇವೆಗೆ ಸ್ಪಂದಿಸುತ್ತದೆ. ಎಲ್‌ವಾಯ್‌ಎಫ್ ವಿಂಡ್-4 ಸ್ಮಾರ್ಟ್‌ಪೋನ್ 4 ಇಂಚ್ ಡಬ್ಲ್ಯೂವಿಜಿಎ (480x800 ಪಿಕ್ಸಿಲ್) ಡಿಸ್‌ಪ್ಲೇ, ಆಂಡ್ರಾಯ್ಡ್ 5.1 ಲಾಲಿಪಾಪ್, 1 ಜಿಬಿ ರ್ಯಾಮ್, 1ಜಿಎಚ್‌ಝಡ್ ಕ್ವಾಡ್ ಕೋರ್ ಮೀಡಿಯಾಟಿಕ್ ಎಮ್‌ಟಿ6735ಎಮ್, ಎಸ್‌ಓಎಸ್ ವೈಶಿಷ್ಟ್ಯ ಹೊಂದಿದ್ದು, 8 ಜಿಬಿ ಆಂತರಿತ ಸ್ಟೋರೇಜ್ ಸಾಮರ್ಥ್ಯದ ಜೊತೆ 32 ಜಿಬಿ ವಿಸ್ತರಣೆಯ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ.
 
ಎಲ್‌ವಾಯ್‌ಎಫ್ ಫ್ಲೇಮ್-2 ಸ್ಮಾರ್ಟ್‌ಪೋನ್‌ಗಳು ಎಲ್‌ಇಡಿ ಫ್ಲಾಶ್ ಜೊತೆಗೆ 5 ಮೆಗಾ ಪಿಕ್ಸೆಲ್ ಆಟೋಫೋಕಸ್ ಕ್ಯಾಮೆರಾ ಮತ್ತು 2 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ಕ್ಯಾಮೆರಾಗಳು ಪೇಸ್ ಡಿಟೆಕ್ಷನ್ ಮತ್ತು ಸ್ಮೈಲ್ ಡಿಟೆಕ್ಷನ್ ಮೋಡ್ ವೈಶಿಷ್ಟ್ಯ ಹೊಂದಿದ್ದು, ಜಿಪಿಆರ್‌ಎಸ್/ಇಡಿಜಿಇ, 3ಜಿ, ಜಿಪಿಎಸ್, ಬ್ಲೂಟೂತ್, ವೈ-ಫೈ ಮತ್ತು ಮೈಕ್ರೋ ಯುಎಸ್‌ಬಿ ಕಲೆಕ್ಟಿವಿಟಿ ಸೌಲಭ್ಯ ಹೊಂದಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಶಿವಾಲಯದಲ್ಲಿ ಜೀವಂತ ನಾಗರ