Select Your Language

Notifications

webdunia
webdunia
webdunia
webdunia

ವಾರ್ಷಿಕ 10 ಲಕ್ಷ ಆದಾಯವಿದ್ದರೆ 2016ರಿಂದ ಎಲ್‌ಪಿಜಿ ಸಬ್ಸಿಡಿ ಕಡಿತ

ವಾರ್ಷಿಕ 10 ಲಕ್ಷ ಆದಾಯವಿದ್ದರೆ 2016ರಿಂದ ಎಲ್‌ಪಿಜಿ ಸಬ್ಸಿಡಿ ಕಡಿತ
ಬೆಂಗಳೂರು , ಸೋಮವಾರ, 28 ಡಿಸೆಂಬರ್ 2015 (18:29 IST)
ಕೇಂದ್ರ ಸರ್ಕಾರ 2016 ಜನವರಿ 1ರಿಂದ ವಾರ್ಷಿಕ 10 ಲಕ್ಷಕ್ಕಿಂತ ಹೆಚ್ಚಿನ ಆದಾಯವಿರುವವರಿಗೆ ಎಲ್‌ಪಿಜಿ ಸಬ್ಸಿಡಿಯನ್ನು ನಿಲ್ಲಿಸಲು ನಿರ್ಧರಿಸಿದೆ. ಶೀಘ್ರವೇ ಈ ಕುರಿತು  ಅಧಿಕೃತ ಪ್ರಕಟಣೆಯನ್ನು ಕೇಂದ್ರ ಸರ್ಕಾರ ಹೊರಡಿಸಲಿದೆ.

ಇದಕ್ಕೆ ಮುಂಚೆ ಸ್ವಯಂಪ್ರೇರಣೆಯಿಂದ ಎಲ್‌ಪಿಜಿ ಸಬ್ಸಿಡಿಯನ್ನು ಕೈಬಿಡುವಂತೆ ಕೇಂದ್ರ ಸರ್ಕಾರ ಹೆಚ್ಚಿದ ಆದಾಯ ವರ್ಗದ ಜನರಿಗೆ ಸೂಚಿಸಿತ್ತು. ಆದರೆ ಕೇಂದ್ರದ ಒತ್ತಾಯಕ್ಕೆ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲ. 
 
ಗ್ರಾಹಕರು ಪ್ರಸಕ್ತ ಸಬ್ಸಿಡಿ ದರದಲ್ಲಿ ವರ್ಷಕ್ಕೆ 12 ಸಿಲಿಂಡರ್ ಪಡೆಯಲು ಅರ್ಹರಾಗಿದ್ದು, ಅದಕ್ಕಿಂತ ಹೆಚ್ಚಿಗೆ ಪಡೆಯಲು ಮಾರುಕಟ್ಟೆ ದರವನ್ನು ನೀಡಬೇಕಾಗುತ್ತದೆ.ದೆಹಲಿಯಲ್ಲಿ ಸಬ್ಸಿಡಿಯೇತರ ಅಡುಗೆ ಅನಿಲದ ದರ 606. 50 ರೂ.ಗಳಾಗಿದ್ದರೆ, ಸಬ್ಸಿಡಿ ಸಿಲಿಂಡರ್ ದರ 14.2 ಕೆಜಿ ಸಿಲಿಂಡರ್‌ಗೆ 417. 82 ರೂ. ಈ ಸಬ್ಸಿಡಿಯನ್ನು ಸ್ಥಳೀಯ ಗ್ರಾಹಕರಿಗೆ ನೇರವಾಗಿ  ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

Share this Story:

Follow Webdunia kannada