Select Your Language

Notifications

webdunia
webdunia
webdunia
webdunia

ಹೊಸ ಬಡ್ಡಿದರದ ಸೂತ್ರದಿಂದ ಗೃಹಸಾಲಗಳು ಮತ್ತಷ್ಟು ಅಗ್ಗ

ಹೊಸ ಬಡ್ಡಿದರದ ಸೂತ್ರದಿಂದ ಗೃಹಸಾಲಗಳು  ಮತ್ತಷ್ಟು ಅಗ್ಗ
ನವದೆಹಲಿ , ಶುಕ್ರವಾರ, 1 ಏಪ್ರಿಲ್ 2016 (13:47 IST)
ಗೃಹ ಸಾಲಗಳು ಮತ್ತಷ್ಟು ಅಗ್ಗವಾಗುತ್ತಿದ್ದು, 15 ವರ್ಷಗಳ ಅವಧಿಗೆ 50 ಲಕ್ಷ ಸಾಲ ತೆಗೆದುಕೊಳ್ಳುವವರಿಗೆ ಇಎಂಐ 300 ರೂ.ನಷ್ಟು ಇಳಿಮುಖವಾಗಿದೆ. ದೇಶದ ಅತೀ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಏಪ್ರಿಲ್ ಒಂದರಿಂದ ಗೃಹಸಾಲ ಬಡ್ಡಿದರವನ್ನು ಶೇ. 9.5 ರಿಂದ ಶೇ. 9.4ಕ್ಕೆ  ಕಡಿತಮಾಡಿದೆ.
 
 ಬ್ಯಾಂಕುಗಳು ದೇಶಾದ್ಯಂತ ಸಾಲ ದರಗಳನ್ನು ಲೆಕ್ಕ ಹಾಕುವ ವಿಧಾನದಲ್ಲಿ ಬದಲಾವಣೆಯಿಂದ ಈ ಪರಿಷ್ಕರಣೆ ಉಂಟಾಗಿದೆ. ರಿಸರ್ವ್ ಬ್ಯಾಂಕ್ 2015ರ ಡಿಸೆಂಬರ್‌ನಲ್ಲಿ  ಪ್ರಕಟಿಸಿದ ನಿಯಮಗಳಿಂದ ದರಗಳನ್ನು ಪರಿಷ್ಕರಿಸುವ ಬ್ಯಾಂಕುಗಳ ಸ್ವಾತಂತ್ರ್ಯ ಮೊಟಕಾಗಿದೆ.  

ಫಂಡ್‌ಗಳ ಕನಿಷ್ಠ ವೆಚ್ಚವನ್ನು ಆಧರಿಸಿ ದರಗಳನ್ನು ನಿರ್ಧರಿಸಬೇಕಾಗಿದೆ. ಬ್ಯಾಂಕ್‌ಗಳು ತಮ್ಮ ನಿಧಿಗಳ ವೆಚ್ಚವನ್ನು ಲೆಕ್ಕಾಚಾರ ಮಾಡಿ ಯಾವುದೇ ಬದಲಾವಣೆಯನ್ನು ಸಾಲಗಾರರಿಗೆ ವರ್ಗಾಯಿಸಬೇಕು. ಈ ಹೊಸ ಸೂತ್ರ ಆಧಾರಿತ ಮಾನದಂಡವನ್ನು ಸಾಲದರದ ಕನಿಷ್ಠ ವೆಚ್ಚವೆನ್ನಲಾಗುತ್ತದೆ. 

Share this Story:

Follow Webdunia kannada