Select Your Language

Notifications

webdunia
webdunia
webdunia
webdunia

ಎಲ್‌ಜಿ ಕಂಪೆನಿಯಿಂದ ಜಿ5 ಸ್ಮಾರ್ಟ್‌ಫೋನ್ ಇಂದು ಮಾರುಕಟ್ಟೆಗೆ

ಎಲ್‌ಜಿ ಕಂಪೆನಿಯಿಂದ ಜಿ5 ಸ್ಮಾರ್ಟ್‌ಫೋನ್ ಇಂದು ಮಾರುಕಟ್ಟೆಗೆ
ನವದೆಹಲಿ , ಗುರುವಾರ, 31 ಮಾರ್ಚ್ 2016 (12:43 IST)
ದಕ್ಷಿಣ ಕೊರಿಯಾದ ಮೊಬೈಲ್ ತಯಾರಕಾ ಸಂಸ್ಥೆಯಾಗಿರುವ ಎಲ್‌ಜಿ, ತನ್ನ ಮೊದಲ ಮಾಡ್ಯುಲರ್ ಸ್ಮಾರ್ಟ್‌ಪೋನ್, ಜಿ 5 ಮಾದರಿಯನ್ನು ಇಂದು ಬಿಡುಗಡೆಗೊಳಿಸಿದೆ. ಭಾರತದಲ್ಲಿ ಜಿ 5 ಆವೃತ್ತಿ ಸ್ಮಾಟ್‌ಪೋನ್‌ಗಳನ್ನು ಮುಂದಿನ ತ್ರೈಮಾಸಿಕದಲ್ಲಿ ಬಿಡುಗಡೆಗೊಳಿಸುವ ಕುರಿತು ಸಂಸ್ಥೆ ಕಳೆದ ತಿಂಗಳಷ್ಟೇ ದೃಢಪಡಿಸಿತ್ತು.
ಎಲ್‌ಜಿ, ಜಿ5 ಮಾದರಿಯ ಪೋನ್‌ಗಳು ಹಲವು ವೈಶಿಷ್ಟ್ಯ ಹೊಂದಿದ್ದು, ಸ್ವತಂತ್ರವಾಗಿ ಅಪ್‌ಗ್ರೇಡ್ ಮತ್ತು ರಿಪ್ಲೇಸ್ ಮಾಡಬಹುದಾದ ವ್ಯವಸ್ಥೆ ಒಳಗೊಂಡಿದೆ. ತೆಗೆಯಬಲ್ಲ ಬ್ಯಾಟರಿಯೊಂದಿಗೆ, ಡ್ಯಾನಿಶ್ ಸಂಸ್ಥೆಯ ಬ್ಯಾಂಗ್ ಮತ್ತು ಒಲುಫ್ಸೆನ್ ಅಭಿವೃದ್ಧಿಪಡಿಸಿದ ಸೌಂಡ್ ಸಿಸ್ಟಮ್  ಹೊಂದಿದೆ.
 
ದಕ್ಷಿಣ ಕೊರಿಯಾದ ಸಾಮ್‌ಸುಂಗ್ ಮೊಬೈಲ್ ತಯಾರಿಕಾ ಸಂಸ್ಥೆಗೆ ಸ್ಫರ್ಧೆ ನೀಡಲು ಎಲ್‌ಜಿ ಈ ಮಾದರಿ ಪೋನ್‌ಗಳನ್ನ ಅಭಿವೃದ್ಧಿ ಪಡಿಸಿದೆ ಎಂದು ವರದಿಗಳು ತಿಳಿಸುತ್ತವೆ.

Share this Story:

Follow Webdunia kannada