Select Your Language

Notifications

webdunia
webdunia
webdunia
webdunia

ಲೆನೋವೋ ಕಂಪೆನಿಯಿಂದ ಝಡ್‌ 2 ಪ್ಲಸ್ ಮಾಡೆಲ್ ಮಾರುಕಟ್ಟೆಗೆ

ಲೆನೋವೋ ಕಂಪೆನಿಯಿಂದ ಝಡ್‌ 2 ಪ್ಲಸ್ ಮಾಡೆಲ್ ಮಾರುಕಟ್ಟೆಗೆ
ನವದೆಹಲಿ , ಮಂಗಳವಾರ, 30 ಆಗಸ್ಟ್ 2016 (16:41 IST)
ಸ್ಮಾರ್ಟ್‌ಪೋನ್ ತಯಾರಿಕಾ ಸಂಸ್ಥೆಯಾಗಿರುವ ಲೆನೋವೋ, ಭಾರತದ ಮಾರುಕಟ್ಟೆಗೆ ಹೊಸ ಆವೃತ್ತಿಯ ಪೋನ್‌ ಬಿಡುಗಡೆ ಮಾಡುವ ಕುರಿತು ಮಾಹಿತಿ ನೀಡಿದ್ದು, ಟ್ವಿಟರ್ ಖಾತೆಯಲ್ಲಿ ಹೊಸ ಹ್ಯಾಂಡ್‌ಸೆಟ್‌ನ ಟಿಸರ್ ಬಿಡುಗಡೆಗೊಳಿಸಿದೆ. 
 
ಮಾಧ್ಯಮ ವರದಿಗಳ ಪ್ರಕಾರ, ಈ ಹೊಸ ಆವೃತ್ತಿಯ ಪೋನ್‌ಗಳನ್ನು ಲೆನೊವೋ ಝಡ್2-ಪ್ಲಸ್ ಹೆಸರಿನಿಂದ ಗುರುತಿಸಲಾಗುತ್ತದೆ. ಆದರೆ, ಲೆನೊವೋ ಝಡ್2-ಪ್ಲಸ್ ಮಾಡೆಲ್‌ನ್ನು ಬೇರೆ ಹೆಸರಲ್ಲಿ ಬಿಡುಗಡೆಗೊಳಿಸುವ ಹಿಂದಿನ ರಹಸ್ಯ ಸ್ಪಷ್ಟವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
 
ಪ್ರಸಕ್ತ ಸಾಲಿನ ಮೇ ತಿಂಗಳಲ್ಲಿ ಲೆನೊವೋ ಸಂಸ್ಥೆ, 18,370 ರೂಪಾಯಿ ಬೆಲೆಯ ಜಕ್ ಝಡ್-2 ಆವೃತ್ತಿಯ ಪೋನ್‌ಗಳನ್ನು ಚೀನಾ ಮಾರುಕಟ್ಟೆಗೆ ಬಿಡುಗಡೆಗೊಳಿಸಿತ್ತು. 
 
ಲೆನೋವೋ ಜಕ್ ಝಡ್-2 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು 1920 x 1080 ಪಿಕ್ಸೆಲ್ ರೆಸಲ್ಯೂಶನ್ ಜೊತೆಗೆ 5 ಇಂಚಿನ ಫುಲ್ ಎಚ್‌ಡಿ ಡಿಸ್‌ಪ್ಲೇ ಒಳಗೊಂಡಿದೆ. 2.15 ಕ್ವಾಡ್ ಕೋರ್ ಸ್ನಾಪ್ಡ್ರಾಗನ್ 820 ಪ್ರೊಸೆಸರ್ ಮತ್ತು ಆಯಡ್ರಿನೋ 530 ಜಿಪಿಯು ವೈಶಿಷ್ಟ್ಯದೊಂದಿಗೆ 4 ಜಿಬಿ ರ್ಯಾಮ್ ಮತ್ತು 64 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. 
 
ಈ ಸ್ಮಾರ್ಟ್‌ಪೋನ್‌ಗಳು ಆಂಡ್ರಾಯ್ಡ್ 6.0 ಮಾರ್ಷ್ಮ್ಯಾಲೋ ಆಪರೇಟಿಂಗ್ ಸಿಸ್ಟಮ್ ಮತ್ತು ಕ್ವಿಕ್ ಚಾರ್ಜ್ 3.0 ತಂತ್ರಜ್ಞಾನದ 3500 ಎಮ್‌ಎಎಚ್ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಈ ಪೋನ್‌ಗಳ ಫಿಂಗರ್‌ಪ್ರಿಂಟ್ ವಿಶೇಷತೆಯನ್ನು ಒಳಗೊಂಡಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಗೋಮಾಂಸ ಸೇವನೆಗೆ ಸಲಹೆ ಮಾಡಿಲ್ಲ, ಅಥ್ಲೀಟ್‌ಗಳಿಗೆ ಸ್ಫೂರ್ತಿ ತುಂಬಿದೆ: ಉದಿತ್ ರಾಜ್