Select Your Language

Notifications

webdunia
webdunia
webdunia
webdunia

ಲೆನೊವೊ ಝಡ್-1 ಸ್ಮಾರ್ಟ್‌ಪೋನ್‌ಗಳು ಮೇ 10 ರಂದು ಮಾರುಕಟ್ಟೆಗೆ

ಲೆನೊವೊ ಝಡ್-1 ಸ್ಮಾರ್ಟ್‌ಪೋನ್‌ಗಳು ಮೇ 10 ರಂದು ಮಾರುಕಟ್ಟೆಗೆ
ನವದೆಹಲಿ , ಬುಧವಾರ, 4 ಮೇ 2016 (18:26 IST)
ಸ್ಮಾರ್ಟ್‌ಪೋನ್ ತಯಾರಿಕಾ ಸಂಸ್ಥೆಯಾಗಿರುವ ಲೆನೊವೊ, ಹೊಸ ವೈಶಿಷ್ಟ್ಯದ ಝಡ್-1 ಆವೃತ್ತಿ ಸ್ಮಾರ್ಟ್‌ಪೋನ್‌ಗಳನ್ನು ಮೇ 10 ರಂದು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಚೀನಾದ ಮಾರುಕಟ್ಟೆಯಲ್ಲಿ ಬಿಡುಗಡೆ ಹೊಂದಿರುವ ಝುಕ್ ಝಡ್-1 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳನ್ನೆ ಡಬ್ ಮಾಡಿ ಲೆನೊವೊ ಝಡ್-1 ಆವೃತ್ತಿಗಳನ್ನು ವಿನ್ಯಾಸಗೊಳಿಸಲಾಗಿದೆ. 
 
ಲೆನೊವೊ ಝಡ್-1 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು 12.1 ಸೈನೋಜನ್ ಓಎಸ್ ಆಧಾರಿತ 5.1.1 ಆಂಡ್ರಾಯ್ಡ್ ಲಾಲಿಪಾಪ್ ವೈಶಿಷ್ಟ್ಯವನ್ನು ಹೊಂದಿದೆ.
 
ಈ ಆವೃತ್ತಿಯ ಪೋನ್‌ಗಳು 2.5ಜಿಎಚ್‌ಝಡ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 801 ಪ್ರೊಸೆಸರ್ ಜೊತೆಗೆ ಆಯಡ್ರಿನೋ 330 ಗ್ರಾಫಿಕ್ಸ್, 3 ಜಿಬಿ ರ್ಯಾಮ್, ಡ್ಯುವಲ್ ಸಿಮ್, 64 ಜಿಬಿ ಆಂತರಿಕ ಸ್ಟೋರೇಜ್, 4100ಎಮ್‌ಎಎಚ್ ಬ್ಯಾಟರಿ ಹೊಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಉರಿಯುತ್ತಿದ್ದ ಕಟ್ಟಡದ ಮೇಲಿಂದ ಮೂವರು ಮಕ್ಕಳನ್ನು ಎಸೆದ ಮಹಿಳೆ