Webdunia - Bharat's app for daily news and videos

Install App

ಮಾರಾಟಕ್ಕೆ ಮುನ್ನವೇ 4 ಲಕ್ಷ ಜನರಿಂದ ಲೆನೋವೋ ವೈಬ್‌ ಕೆ5 ಮುಂಗಡ ಬುಕ್ಕಿಂಗ್

Webdunia
ಮಂಗಳವಾರ, 21 ಜೂನ್ 2016 (19:53 IST)
ಸ್ಮಾರ್ಟ್‌ಪೋನ್ ತಯಾರಿಕಾ ಸಂಸ್ಥೆಯಾಗಿರುವ ಲೆನೋವೋ, ಇಂದು ಕೈಗೆಟುಕುವ ದರದ 4ಜಿ ಸ್ಮಾರ್ಟ್‌ಪೋನ್‌ಗಳ ಬಿಡುಗಡೆ ಕುರಿತು ಮಾಹಿತಿ ನೀಡಿದೆ. 
 
ವೈಬ್ ಕೆ-5 ಆವೃತ್ತಿಯ ಪೋನ್‌ಗಳು ಮಾರುಕಟ್ಟೆಗೆ ಬಿಡುಗಡೆ ಹೊಂದುವ ಒಂದು ದಿನ ಮುಂಚಿತವಾಗಿಯೇ 4 ಲಕ್ಷ ಗ್ರಾಹಕರು ಮುಂಗಡ ಬುಕ್ಕಿಂಗ್ ಮಾಡಿರುವುದು ಹೊಸ ಕ್ರೇಜ್ ಸೃಷ್ಟಿಸಿದೆ.
 
ಕಡಿಮೆ ದರದ ಲೆನೋವೋ ಎ-6000 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಮಾರುಕಟ್ಟೆಯಲ್ಲಿ ಯಶಸ್ವಿಯಾಗಿ ಮಾರಾಟವಾದ ಬೆನ್ನಲ್ಲೇ ನಾಳೆ ಮಧ್ಯಾಹ್ನ 2 ಗಂಟೆಗೆ ಅಮೆಜಾನ್ ಆನ್‌ಲೈನ್‌ ಮಾರುಕಟ್ಟೆಯಲ್ಲಿ ವೈಬ್ ಕೆ-5 ಆವೃತ್ತಿಯ ಪೋನ್‌ಗಳು ಮಾರಾಟಕ್ಕೆ ಸಿದ್ಧಗೊಂಡಿವೆ. ಈ ಆವೃತ್ತಿಯ ಪೋನ್‌ಗಳು ಗ್ರಾಹಕರಿಗೆ 6,999 ರೂಪಾಯಿಗಳಲ್ಲಿ ಲಭ್ಯವಾಗಲಿದೆ.
 
ಬಾರ್ಸಿಲೋನಾದಲ್ಲಿ ನಡೆದ ಎಮ್‌ಡಬ್ಲೂಸಿ ಕಾರ್ಯಕ್ರಮದಲ್ಲಿ ಲೆನೋವೋ ವೈಬ್ ಕೆ-5 ಮತ್ತು ವೈಬ್-ಕೆ5 ಪ್ಲಸ್ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳನ್ನು ಬಿಡುಗಡೆಗೊಳಿಸುವುದಾಗಿ ಘೋಷಿಸಲಾಗಿತ್ತು. ಈಗಾಗಲೇ ವೈಬ್ ಕೆ-5 ಪ್ಲಸ್ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಫ್ಲಿಪ್‌ಕಾರ್ಟ್ ಆನ್‌ಲೈನ್‌ ಮಾರುಕಟ್ಟೆಯಲ್ಲಿ 8,499 ರೂಪಾಯಿಗಳಲ್ಲಿ ಲಭ್ಯವಿದೆ.
 
ಈ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು 1280x720 ಫಿಕ್ಸೆಲ್ ರೆಸಲ್ಯೂಶನ್ ಜೊತೆಗೆ 5 ಇಂಚ್ ಎಚ್‌ಡಿ ಡಿಸ್‌‍ಪ್ಲೇ, 2 ಜಿಬಿ ರ್ಯಾಮ್ ಜೊತೆಗೆ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 415 ಪ್ರೊಸೆಸರ್ ಮತ್ತು 16 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. 
 
ಲೆನೋವೋ ವೈಬ್ ಕೆ-5 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಡ್ಯುವಲ್ ಸಿಮ್ ವೈಶಿಷ್ಟ್ಯದ ಜೊತೆಗೆ 5.1 ಆಂಡ್ರಾಯ್ಡ್  ಲಾಲಿಪಾಪ್ ವೈಶಿಷ್ಟ್ಯವನ್ನು ಹೊಂದಿದೆ. ಈ ಹೊಸ ವೈಶಿಷ್ಟ್ಯದ ಸ್ಮಾರ್ಟ್‌ಪೋನ್‌ ಎಲ್‌ಇಡಿ ಫ್ಯ್ಯಾಶ್ ಜೊತೆಗೆ 13 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು 5 ಮೆಗಾ ಫಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದ್ದು, 2,750 ಎಮ್‌ಎಎಚ್ ಬ್ಯಾಟರಿ ಸಾಮರ್ಥ್ಯ ಹೊಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments