Webdunia - Bharat's app for daily news and videos

Install App

ಲಾವಾ ಕಂಪೆನಿಯಿಂದ ಮೂರು ಆಂಡ್ರಾಯ್ಡ್ ಫೋನ್‌ಗಳು ಮಾರುಕಟ್ಟೆಗೆ

Webdunia
ಶುಕ್ರವಾರ, 29 ಏಪ್ರಿಲ್ 2016 (14:01 IST)
ಸ್ಮಾರ್ಟ್‌ಪೋನ್ ತಯಾರಿಕಾ ಸಂಸ್ಥೆಯಾಗಿರುವ ಲಾವಾ, 4ಜಿ ಎಲ್‌ಟಿಇ ವೈಶಿಷ್ಟ್ಯಕ್ಕೆ ಸ್ಪಂದಿಸುವ ಆವೃತ್ತಿಯ ಎ-7, ಎ76 ಮತ್ತು ಎ89 ಆವೃತ್ತಿಯ ಪೋನ್‌ಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಮೊದಲ ಎರಡು ಆವೃತ್ತಿಯ ಪೋನ್‌ಗಳು ಈಗಾಗಲೇ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಮುಂದಿನ ಕೆಲ ದಿನಗಳಲ್ಲಿ ಮೂರನೇಯ ಆವೃತ್ತಿಯ ಪೋನ್‌ ಬಿಡುಗಡೆಯಾಗಲಿದೆ. 

ಈ ಮೂರು ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು 1 ಜಿಬಿ ರ್ಯಾಮ್ ಜೊತೆಗೆ 5.1 ಆಂಡ್ರಾಯ್ಡ್ ಲಾಲಿಪಾಪ್ ವೈಶಿಷ್ಟ್ಯವನ್ನು ಹೊಂದಿದೆ. ಪ್ರತಿ ಸ್ಮಾರ್ಟ್‌ಪೋನ್‌ಗಳು 1.5ಜಿಎಚ್‌ಝಡ್ ಕ್ವಾಡ್ ಕೋರ್ ಪ್ರೊಸೆಸರ್, 8 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯ, ಮೈಕ್ರೊ ಕಾರ್ಡ್ ಸ್ಲಾಟ್ ಮೂಲಕ ಮೆಮೊರಿ ವಿಸ್ತರಣೆ ಸ್ಥಳಾವಕಾಶ ಮತ್ತು ಎಲ್‌ಇಡಿ ಫ್ಲ್ಯಾಶ್ ಜೊತೆಗೆ 5 ಮೆಗಾ ಪಿಕ್ಸೆಲ್ಸ್ ಮೂಲ ಕಾಮೆರಾ ಹೊಂದಿದೆ. 
 
ಲಾವಾ ಎ-89 ಸ್ಮಾರ್ಟ್‌ಪೋನ್‌ಗಳು 2 ಮೆಗಾ ಪಿಕ್ಸೆಲ್ಸ್ ಸ್ನಪ್ಪರ್, 5 ಇಂಚಿನ ಡಿಸ್‌ಪ್ಲೇ ಮತ್ತು 2000 ಎಮ್‌ಎಎಚ್ ಬ್ಯಾಟರಿಯನ್ನು ಹೊಂದಿದೆ. ಎ-72 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು 5 ಮೆಗಾ ಪಿಕ್ಸೆಲ್ಸ್ ಫ್ರಂಟ್ ಫೇಸಿಂಗ್ ಲೆನ್ಸ್, 5 ಇಂಚಿನ ಫುಲ್ ಟಚ್ ಸ್ಕ್ರೀನ್ ಡಿಸ್‌ಪ್ಲೇ ಮತ್ತು 2500ಎಮ್‌ಎಎಚ್‌ ಬ್ಯಾಟರಿಯನ್ನು ಹೊಂದಿದ್ದು, ಲಾವಾ ಎ-76 ಆವೃತ್ತಿ ವಿಜಿಎ ವೆಬ್‌ಕ್ಯಾಮ್, 1850ಎಮ್‌ಎಎಚ್‌ ಬ್ಯಾಟರಿ ಮತ್ತು 4.5 ಇಂಚಿನ ಡಿಸ್‌ಪ್ಲೇ ಹೊಂದಿದೆ.
 
ಲಾವಾ ಎ-72, ಎ-76 ಮತ್ತು ಎ-89 ಆವೃತ್ತಿಯ ಸ್ಮಾರ್ಟ್‌ಪೋನ್‌ಗಳ ಬೆಲೆ ಕ್ರಮವಾಗಿ 6499 ರೂಪಾಯಿ, 5699 ರೂಪಾಯಿ ಮತ್ತು 5999 ರೂಪಾಯಿಗಳಲ್ಲಿ ಲಭ್ಯವಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸುಂದರವಾಗಿದ್ದಳೆಂದು ತಲೆ ಬೋಳಿಸಿ, ವರದಕ್ಷಿಣೆ ಕಿರುಕುಳ: ಯುಎಇಯಲ್ಲಿ ಮಗುವಿನೊಂದಿಗೆ ಕೇರಳ ಮಹಿಳೆ ಆತ್ಮಹತ್ಯೆ

ಶುಭಾಂಶು ಶುಕ್ಲ ಬದಲು ದಲಿತರನ್ನು ಬಾಹ್ಯಾಕಾಶಕ್ಕೆ ಕಳುಹಿಸಬೇಕಿತ್ತು: ಕಾಂಗ್ರೆಸ್ ನಾಯಕ ಉದಿತ್ ರಾಜ್

ಬೆಂಗಳೂರು, ನೋಟ್ಸ್ ನೀಡು ನೆಪದಲ್ಲಿ ವಿದ್ಯಾರ್ಥಿನಿ ಮೇಲೆ ಶಿಕ್ಷಕರಿಬ್ಬರು, ಸ್ನೇಹಿತನಿಂದ ರೇಪ್‌

ಮಂತ್ರಾಲಯಕ್ಕೆ ಭೇಟಿ ನೀಡಿದ ಬಳಿಕ ಪೀಠಾಧಿಪತಿಯರನ್ನು ಭೇಟಿಯಾದ ಸಚಿವ ರಾಮಲಿಂಗಾರೆಡ್ಡಿ

₹1 ಕೋಟಿ ಸುಲಿಗೆಗೆ ಉದ್ಯಮಿಯ ಮಗನನ್ನೇ ಕಿಡ್ನ್ಯಾಪ್ ಮಾಡುವುದಾಗಿ ಬೆದರಿಕೆ: ಸಂಚು ವಿಫಲ

ಮುಂದಿನ ಸುದ್ದಿ
Show comments