Select Your Language

Notifications

webdunia
webdunia
webdunia
webdunia

ಜಪಾನ್: ಪ್ರತಿ ಗಂಟೆಗೆ 600 ಕಿ.ಮೀ ಓಡಿ ಐತಿಹಾಸಿಕ ದಾಖಲೆ ಸ್ಥಾಪಿಸಿದ ರೈಲು

ಜಪಾನ್: ಪ್ರತಿ ಗಂಟೆಗೆ 600 ಕಿ.ಮೀ ಓಡಿ ಐತಿಹಾಸಿಕ ದಾಖಲೆ ಸ್ಥಾಪಿಸಿದ ರೈಲು
ಟೋಕಿಯೋ , ಮಂಗಳವಾರ, 21 ಏಪ್ರಿಲ್ 2015 (16:00 IST)
ಜಪಾನ್‌ನಲ್ಲಿ ನೂತನ ರೈಲೊಂದು ರೈಲು ಇತಿಹಾಸದಲ್ಲಿಯೇ ಹೊಸ ದಾಖಲೆಯನ್ನು ಬರೆದಿದೆ. ಪ್ರತಿ ಗಂಟೆಗೆ 600 ಕಿ.ಮೀ ವೇಗದಲ್ಲಿ ಚಲಿಸಿ ವಿಶ್ವದಲ್ಲಿಯೇ ಅತಿ ವೇಗದ ರೈಲು ಎನ್ನುವ ಖ್ಯಾತಿಗೆ ಒಳಗಾಗಿದೆ.    

ಆಯಸ್ಕಾಂತಿಯ ತಂತ್ರಜ್ಞಾನವನ್ನು ಹೊಂದಿರುವ ಮಾಗ್‌ಲೆವ್ ರೈಲನ್ನು ಮೌಂಟ್ ಫಿಜಿ ಬಳಿಯಿರುವ ರೈಲ್ವೆ ನಿಲ್ದಾಣದಿಂದ ಪರೀಕ್ಷಾರ್ಥವಾಗಿ ಓಡಿಸಲಾಗಿದೆ. ರೈಲಿನ ಗರಿಷ್ಠ ವೇಗ ಪ್ರತಿ ಗಂಟೆಗೆ 603 ಕಿ.ಮೀ ಎಂದು ಸೆಂಟ್ರಲ್ ಜಪಾನ್ ರೈಲ್ವೆ ತಿಳಿಸಿದೆ.  

ಕಳೆದ 2003ರಲ್ಲಿ ಪ್ರತಿ ಗಂಟೆಗೆ 581 ಕಿ.ಮೀ ವೇಗದಲ್ಲಿ ಚಲಿಸುವ ರೈಲನ್ನು ಸಿದ್ದಪಡಿಸಿದ್ದ ಕಂಪೆನಿ, ಇದೀಗ ತಾನೇ ಆ ದಾಖಲೆಯನ್ನು ಮುರಿದು ಪ್ರತಿ ಗಂಟೆಗೆ 590 ಕಿ.ಮೀ ವೇಗದ ರೈಲನ್ನು ದೇಶಕ್ಕೆ ಅರ್ಪಿಸಿತ್ತು. ಇಂದು ಓಡಿಸಲಾದ ರೈಲಿನ ವೇಗ (ಪ್ರತಿ ಗಂಟೆಗೆ 603 ಕಿ.ಮೀ) ವಿಶ್ವದಲ್ಲಿಯೇ ಎಲ್ಲಾ ದಾಖಲೆಗಳನ್ನು ಮುರಿದು ಹಾಕಿದೆ.  

ಮೌಂಟ್ ಫಿಜಿ ಬಳಿಯಿರುವ ರೈಲ್ವೆ ನಿಲ್ದಾದಲ್ಲಿ ರೈಲಿನ ವೇಗದ ಪರೀಕ್ಷೆ ನಡೆಸಲಾಯಿತು. ನಿಲ್ದಾಣದಲ್ಲಿ ಸೇರಿದ್ದ ಸಾವಿರಾರು ಜನರು ರೈಲಿನ ಓಟಕ್ಕೆ ಶುಭಕೋರಿದರು. ನಿಗದಿಯಂತೆ ರೈಲು ಗುರಿ ತಲುಪಿರುವುದು ನೆರದಿದ್ದವರಿಗೆ ಸಂತಸ ತಂದಿತು.

ಸೂಪರ್ ಸ್ಪೀಡ್ ಟ್ರೇನ್‌ನಲ್ಲಿ ಪ್ರವಾಸ ಮಾಡಿದ್ದ ವರದಿಗಾರರ ಪ್ರಕಾರ, ರೈಲು ಪ್ರಯಾಣ ವಿಮಾನದ ಪ್ರಯಾಣದಂತೆ ಭಾಸವಾಯಿತು. ತುಂಬಾ ಸಂತಸ ತಂದಿದೆ ಎಂದರು.

ರೈಲಿನ ವೇಗ ಹೆಚ್ಚಾದಂತೆ ಸ್ಥಿರತೆ ಹೆಚ್ಚಾಗುತ್ತದೆ. ಮುಂಬರುವ ದಿನಗಳಲ್ಲಿ ರೈಲಿನ ಪ್ರವಾಸ ಮತ್ತಷ್ಟು ಆನಂದದಾಯಕವಾಗಲಿದೆ ಎಂದು ಮಾಗ್‌ಲೆವ್ ಟೆಸ್ಟ್ ಸೆಂಟರ್‌ನ ಮುಖ್ಯಸ್ಥ ಯಾಸುಕಾಜು ಎಂಡೋ ಹೇಳಿದ್ದಾರೆ.

Share this Story:

Follow Webdunia kannada