Webdunia - Bharat's app for daily news and videos

Install App

ಮೋದಿ ಕನಸಾದ ಹೈಸ್ಪೀಡ್‌ ಟ್ರೇನ್‌‌ಗೆ ಜಪಾನ್‌ ಮತ್ತು ಚೀನಾ ಪೈಪೋಟಿ

Webdunia
ಗುರುವಾರ, 28 ಆಗಸ್ಟ್ 2014 (19:32 IST)
ನರೇಂದ್ರ ಮೋದಿ ಸರಕಾರದ ಮಹಾತ್ವಾಕಾಂಕ್ಷೆಯಾದ ಹೈ-ಸ್ಪೀಡ್‌ ಟ್ರೇನ್‌‌‌ ‌ಯೋಜನೆಗಾಗಿ ಚೀನಾ ಮತ್ತು ಜಪಾನ್‌‌ ಎರಡೂ ದೇಶಗಳು ಪೈಪೊಟಿಗಿಳಿದಿವೆ. ಎರಡೂ ದೇಶಗಳ ಹತ್ತಿರ ಇದಕ್ಕಾಗಿ ಸಾಕಷ್ಟು ಸಂಪನ್ಮೂಲಗಳನ್ನು ಇವೆ ಎಂದು ಆಂಗ್ಲ ಪತ್ರಿಕೆಯೊಂದು ವರದಿಮಾಡಿದೆ. 
 
ಇದೇ ವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಜಪಾನ್‌‌ಗೆ ತೆರಳಲಿದ್ದಾರೆ ಮತ್ತು ಅಲ್ಲಿಯ ಬುಲೆಟ್‌‌ ಟ್ರೇನ್‌‌ ಯೋಜನೆ ಕೂಡ ನೋಡಲಿದ್ದಾರೆ. ಜಪಾನ್ ಪ್ರಧಾನಮಂತ್ರಿ ಶಿಂಜೊ ಆಬೆ ಇದಕ್ಕಾಗಿ ಬಹಳಷ್ಟು ಪ್ರಯತ್ನ ಪಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೋದಿ ಜಪಾನ್‌‌‌ನ ಕ್ಯೋತೊ ನಗರದಲ್ಲಿ ಇಳಿಯಲಿದ್ದಾರೆ. ಅಲ್ಲಿ ಜಪಾನ್‌‌‌ನ ಪ್ರಖ್ಯಾತ ರೈಲ್ವೆ ನೆಟ್ವರ್ಕ್‌‌ ಶಿನಕಾಂಸೆನ್‌‌ ಇದೆ. ಜಪಾನ್‌ ಭಾರತದ ಬುಲೆಟ್‌ ಟ್ರೇನ್‌‌‌ ಸಹಿತ ಆರ್ಥಿಕ ಸೌಲಭ್ಯಗಳು ನೀಡಲು ಸಿದ್ದವಿದೆ. 
 
ಇನ್ನೊಂದು ಕಡೆ, ಚೀನಾ ಕೂಡ ಈ ಪ್ರೊಜೆಕ್ಟ್‌‌ಗಾಗಿ ಸಿದ್ದವಾಗಿದೆ. ಚೀನಾ ಜಪಾನ್‌ಗಿಂತ ಕಡಿಮೆ ಬೆಲೆಯ ಹೈಸ್ಪೀಡ್‌‌ ಟ್ರೇನ್‌‌ ನೀಡುತ್ತದೆ ಮತ್ತು ಇದಕ್ಕಾಗಿ ಹಣಕಾಸಿನ ಸಹಾಯ ಕೂಡ ಮಾಡುತ್ತದೆ. ಚೀನಾದ ಅಧ್ಯಕ್ಷ ಶಿ ಜಿನಪಿಂಗ್‌ ಸಪ್ಟೆಂಬರ್‌‌‌‌ ಮಧ್ಯದಲ್ಲಿ ಭಾರತಕ್ಕೆ ಬರಲಿದ್ದಾರೆ. ಇವರು ಕೂಡ ಭಾರತದ ಈ ಮಹಾತ್ವಾಕಾಂಕ್ಷೆ ಯೋಜನೆಗೆ ಕೈಜೋಡಿಸಲು ಬಯಸುತ್ತಿದ್ದಾರೆ. ಚೀನಾ ಪ್ರಸಕ್ತ ವರ್ಷದಲ್ಲಿ ತನ್ನ ರೈಲು ಯೋಜನೆಗಳನ್ನು ಹೆಚ್ಚಿಸಿದೆ. ಚೀನಾದ ಹತ್ತಿರ ಕೂಡ ಬುಲೆಟ್‌ ಟ್ರೇನ್‌‌ಗಳಿವೆ ಮತ್ತು ಜಪಾನ್‌‌ಗಿಂತ ಕಡಿಮೆ ದರದಲ್ಲಿ ಈ ಕಾರ್ಯನಿರ್ವಹಿಸಲು ಬಯಸುತ್ತದೆ. 
 
ಮುಂಬೈ-ಅಹಮದಾಬಾದ್ ಬುಲೆಟ್‌ ಟ್ರೇನ್‌‌‌‌ ಯೋಜನೆ ಮೇಲೆ 60,000 ಕೋಟಿ ರೂಪಾಯಿಯ ದೊಡ್ಡ ಮೊತ್ತದ ಹಣ ಖರ್ಚಾಗುವ ಅಂದಾಜಿದೆ. ಈ ತರಹದ ದೊಡ್ಡ ಯೋಜನೆಗೆ ಚೀನಾ ಮತ್ತು ಜಪಾನ್‌ ಎರಡೂ ದೇಶಗಳು ಆಸಕ್ತಿ ತೋರಿಸುತ್ತಿವೆ. ಈ  ಯೋಜನೆಗೆ ಎರಡೂ ದೇಶಗಳು ಮೋದಿಯ ಮನವೊಲಿಸುವ ಪ್ರಯತ್ನ ಮಾಡುತ್ತಿವೆ ಮತ್ತು ಮುಂದೆಯೂ ಮನವೊಲಿಸುತ್ತವೆ ಎಂದು ಮೂಲಗಳು ತಿಳಿಸಿವೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments