Webdunia - Bharat's app for daily news and videos

Install App

ಆನ್‌ಲೈನ್ ಖರೀದಿ ವಾರಂಟಿ ವಿಶ್ವಾಸಾರ್ಹವಾಗಿರುತ್ತಾ?

Webdunia
ಭಾನುವಾರ, 21 ಡಿಸೆಂಬರ್ 2014 (15:28 IST)
ಆನ್‌ಲೈನ್ ಚಿಲ್ಲರೆ ಮಾರಾಟಗಳ ಪ್ರಮಾಣ ಏರುತ್ತಿರುವ ನಡುವೆ, ಇ-ವಾಣಿಜ್ಯ ಕೈಗಾರಿಕೆ ಪ್ರಸಕ್ತ ವಿತ್ತೀಯ ವರ್ಷದಲ್ಲಿ 216 ಶತಕೋಟಿಯನ್ನು ಮುಟ್ಟುವುದೆಂದು ನಿರೀಕ್ಷಿಸಲಾಗಿದೆ. ಆದರೆ ಈ ಕ್ಷೇತ್ರವು ಈಗಾಗಲೇ ಟೀಕೆಗಳನ್ನು ಎದುರಿಸಿದ್ದು, ಉತ್ಪಾದಕರು ಮತ್ತು ಗ್ರಾಹಕರು ಆನ್‌ಲೈನ್ ಖರೀದಿಗಳಿಗೆ ವಾರಂಟಿಗಳ ವಿಶ್ವಾಸಾರ್ಹತೆ ಕುರಿತು ಪ್ರಶ್ನಿಸಿದ್ದಾರೆ.

ಅಂತಾರಾಷ್ಟ್ರೀಯ ಬ್ರಾಂಡ್‌ಗಳು ಕೆಲವು ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಿದರೆ ವಾರಂಟಿಗೆ ಅರ್ಹವಲ್ಲ ಎಂದು ಘೋಷಿಸಿವೆ. ಆದರೆ ಮೂರನೇ ವ್ಯಕ್ತಿಯಾದ ಆನ್‌ಲೈನ್ ಮಾರಾಟಗಾರ ಕೆಲವು ನಿದರ್ಶನಗಳಲ್ಲಿ ವಾರಂಟಿ ನೀಡುತ್ತಾರೆ. ಉದಾಹರಣೆಗೆ ಟಿಸ್ಸಾಟ್ ಎರಡು ವರ್ಷಗಳ ಅಂತಾರಾಷ್ಟ್ರೀಯ ವಾರಂಟಿಯನ್ನು ಟಿಸ್ಸಾಟ್ ಎಸ್‌ಎ ಹೆಸರಿನಲ್ಲಿ ನೀಡಿದರೆ, ಕೆಲವು ಮಾರಾಟಗಾರರು ಇ ವಾಣಿಜ್ಯ ವೆಬ್‌ಸೈಟ್‌ಗಳಲ್ಲಿ ಒಂದು ವರ್ಷದ ವಾರಂಟಿ ಎಂದು ಪೋಸ್ಟ್ ಮಾಡುತ್ತಾರೆ.

ಈ ವಾರಂಟಿಗೆ ಉತ್ಪಾದಕರು ಮಾನ್ಯತೆ ನೀಡುವುದಿಲ್ಲ. ನಿಕಾನ್, ಡೆಲ್, ಎಚ್‌ಪಿ, ಲಿನೋವಾ ಬಗ್ಗೆ ಈ ರೀತಿಯ ದೂರುಗಳಿಲ್ಲ. ಗ್ರಾಹಕರು ದರ ಮತ್ತು ವಾರಂಟಿ ವಿಷಯಗಳ ಬಗ್ಗೆ ತಿಳಿದಿರುತ್ತಾರೆ. ಆನ್‌ಲೈನ್ ಖರೀದಿ ಮಾಡುವಾಗ ಯಾವುದನ್ನೂ ಮುಚ್ಚಿಡುವುದಿಲ್ಲ ಎಂದು ಕೆಪಿಎಂಜಿ ಮ್ಯಾನೇಜ್‌ಮೆಂಟ್ ಕನ್ಸಲ್ಟಿಂಗ್ ಮುಖ್ಯಸ್ಥ ಅಂಬರೀಷ್ ದಾಸ್‌ಗುಪ್ತಾ ಹೇಳಿದ್ದಾರೆ.

 ಆನ್‌ಲೈನ್ ವಾರಂಟಿ ಘೋಷಣೆ ಕಡ್ಡಾಯವಲ್ಲ. ಬಹುತೇಕ ಇ ವಾಣಿಜ್ಯ ಸೈಟ್‌ಗಳು ಕೇವಲ ಖರೀದಿಗಾರ ಮತ್ತು ವಾಸ್ತವ ಆನ್‌ಲೈನ್ ಮಾರಾಟಗಾರನ ನಡುವೆ  ಮಧ್ಯಸ್ಥಿಕೆ ವಹಿಸುತ್ತವೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments