Webdunia - Bharat's app for daily news and videos

Install App

ರೈಲು ಟಿಕೆಟ್ ಬುಕ್ಕಿಂಗ್‍ಗೆ ಹೊಸ ಆಪ್

Webdunia
ಶನಿವಾರ, 7 ಜನವರಿ 2017 (08:38 IST)
ರೈಲು ಟಿಕೆಟ್ ಬುಕ್ಕಿಂಗ್‌ನ್ನು ಪ್ರಯಾಣಿಕರು ಇನ್ನಷ್ಟು ವೇಗವಾಗಿ ಮಾಡಿಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಹೊಸ ಆಪ್‌ನ್ನು ಶೀಘ್ರದಲ್ಲೇ ಐಆರ್‌ಟಿಸಿ ಬಿಡುಗಡೆ ಮಾಡುತ್ತಿದೆ. ಸದ್ಯಕ್ಕೆ ಇರುವ ಟಿಕೆಟ್ ಬುಕಿಂಗ್ ಆಪ್‍ಗೆ ಇನ್ನಷ್ಟು ಹೊಸ ಸೌಲಭ್ಯಗಳನ್ನು ಸೇರಿಸಿ ಈ ಆಪನ್ನು ಐಆರ್‌ಸಿಟಿಸಿ ಸಿದ್ಧಪಡಿಸಿದೆ.
 
ಲೇಟೆಸ್ಟ್ ತಂತ್ರಜ್ಞಾನದೊಂದಿಗೆ ಈ ಆಪ್ ತಯಾರಿಸಿದ್ದೇವೆ, ಇನ್ನಷ್ಟು ವೇಗವಾಗಿ, ಸುಲಭವಾಗಿ ಐಆರ್‌ಟಿಸಿ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳಬಹುದೆಂದು ರೈಲ್ವೆ ಸಚಿವಾಲಯ ಅಧಿಕಾರಿಗಳು ತಿಳಿಸಿದ್ದಾರೆ. ಆನ್‌ಲೈನ್ ರೈಲು ಬುಕಿಂಗ್‍ಗಾಗಿ ಐಆರ್‌ಸಿಟಿಸಿ ಅಧಿಕೃತವಾಗಿ ಐಆರ್‌ಸಿಟಿಸಿ ರೈಲ್ ಕನಕ್ಟ್ ಆಪನ್ನು ಇನ್ನೊಂದು ವಾರದಲ್ಲಿ ಆರಂಭಿಸಲಿದೆ.
 
ಪ್ರಯಾಣಿಕರ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಆಪ್ ಬಿಡುಗಡೆ ಮಾಡಲಾಗುತ್ತಿದೆ. ಮುಂದಿನ ತಲೆಮಾರಿನ ಇ-ಟಿಕೆಟ್ ವ್ಯವಸ್ಥೆ ಆಧಾರವಾಗಿ ಇದನ್ನು ತರಲಾಗುತ್ತಿದೆ. ರೈಲ್ವೆ ಟಿಕೆಟ್‍ಗಳನ್ನು ಸರ್ಚ್ ಮಾಡಲು, ಬುಕ್ ಮಾಡಿಕೊಳ್ಳಲು ಈ ಆಪ್ ಪ್ರಯಾಣಿಕರಿಗೆ ಉಪಯೋಗವಾಗಲಿದೆ. ಟಿಕೆಟ್‌ಗಳನ್ನು ಕ್ಯಾನ್ಸಲ್ ಮಾಡಿಕೊಳ್ಳುವ ಸದುಪಾಯವನ್ನೂ ಈ ಆಪ್ ಮೂಲಕ ಐಆರ್‌ಸಿಟಿಸಿ ಕಲ್ಪಿಸಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments