Select Your Language

Notifications

webdunia
webdunia
webdunia
webdunia

ನ್ಯಾನೋ ಪುನಶ್ಚೇತನಕ್ಕೆ ಸ್ವಯಂಚಾಲಿತ ಗೇರು

ನ್ಯಾನೋ ಪುನಶ್ಚೇತನಕ್ಕೆ ಸ್ವಯಂಚಾಲಿತ ಗೇರು
ನವದೆಹಲಿ , ಶುಕ್ರವಾರ, 30 ಜನವರಿ 2015 (18:59 IST)
ತನ್ನ ಸಣ್ಣ ಕಾರು ನ್ಯಾನೋನಿಂದ ಅಧಿಕ ನಿರೀಕ್ಷೆಗಳಲ್ಲಿ ವಿಫಲವಾದ ನಂತರ, ಟಾಟಾ ಮೋಟರ್ಸ್ ಅನೇಕ ಉಪಕ್ರಮಗಳನ್ನು ಯೋಜಿಸುತ್ತಿದ್ದು, ನ್ಯಾನೋ ಮಾರಾಟದ ಪುನಶ್ಚೇತನಕ್ಕೆ ಸ್ವಯಂಚಾಲಿತ ಗೇರು ಸ್ವರೂಪವನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆಸಿದೆ.
 
ಸತತವಾಗಿ ಮಾರಾಟ ಕುಸಿತದಿಂದ ಈ ಮಾದರಿಯ ಕಾರನ್ನು ಹಂತ, ಹಂತವಾಗಿ ತೆಗೆಯಲಾಗುತ್ತದೆಯೇ ಎಂಬ ಪ್ರಶ್ನೆಯನ್ನು ಅಲ್ಲಗಳೆದ ಟಾಟಾ ಮೋಟರ್ಸ್ ವಕ್ತಾರ, 2014 ಜನವರಿಯಲ್ಲಿ ಕಂಪನಿಯು ನ್ಯಾನೋ ಟ್ವಿಸ್ಟ್ ಆರಂಭಿಸುವ ಮೂಲಕ ಸ್ಮಾರ್ಟ್ ಸಿಟಿ ಕಾರ್‌ಗಾಗಿ ಗ್ರಾಹಕರು ಕೇಳಿದ ಹೊಸ ಲಕ್ಷಣಗಳನ್ನು ಅಳವಡಿಸಿದೆ. ನ್ಯಾನೋ ಜೊತೆ ಎಎಂಟಿ ತಂತ್ರಜ್ಞಾನವನ್ನು ಕೂಡ ಆರಂಭಿಸಲು ಕಂಪನಿ ಯೋಜಿಸಿದೆ.

ಕಳೆದ ವರ್ಷ ನ್ಯಾನೋ ಮಾರಾಟದಲ್ಲಿ ಕುಸಿತ ಕಂಡಿದ್ದರೂ ಕಂಪಾಕ್ಟ್ ಸೆಡಾನ್ ಜೆಸ್ಟ್ ಮತ್ತು ಹ್ಯಾಚ್‌ಬ್ಯಾಕ್ ಬೋಲ್ಟ್ ದೇಶೀಯ ಮಾರಾಟದಲ್ಲಿ ಚೇತರಿಕೆಯನ್ನು ಕಂಪನಿ ಕಂಡಿದೆ.2014-15ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ಕೇವಲ 11,333 ನ್ಯಾನೋ ಕಾರುಗಳನ್ನು ಮಾರುವುದು ಮಾತ್ರ ಸಾಧ್ಯವಾಗಿದ್ದು, ಹಿಂದಿನ ವರ್ಷಕ್ಕಿಂತ 18. 64 ಶೇಕಡ ಕಡಿಮೆಯಾಗಿದೆ.

2009ರಲ್ಲಿ ಭಾರೀ ಕುತೂಹಲದೊಂದಿಗೆ ಆರಂಭಿಸಿದ ನ್ಯಾನೋ ಕಾರು ದರ ಒಂದು ಲಕ್ಷ ರೂ.ಗಳಾಗಿತ್ತು. ಆದರೆ ಟಾಟಾ ಗ್ರೂಪ್ ಕನಸಿನ ಯೋಜನೆಯ ನಿರೀಕ್ಷೆಗಳೆಲ್ಲಾ ತಲೆಕೆಳಗಾದವು. ನ್ಯಾನೋವನ್ನು ಅಗ್ಗದ ಕಾರು ಎಂದು ಬಿಂಬಿಸಿದ್ದೇ ಟಾಟಾ ಮೋಟರ್ಸ್ ತಪ್ಪು ಎಂದು ಟಾಟಾ ಹೇಳಿದ್ದರು.

Share this Story:

Follow Webdunia kannada