Webdunia - Bharat's app for daily news and videos

Install App

ಇಂಟೆಕ್ಸ್ ಆಕ್ವಾ ಲಯನ್ಸ್ 3ಜಿ ಸ್ಮಾರ್ಟ್‌ಪೋನ್‌ಗಳು ಮಾರುಕಟ್ಟೆಗೆ ಬಿಡುಗಡೆ

Webdunia
ಸೋಮವಾರ, 2 ಮೇ 2016 (18:48 IST)
ಗುಜರಾತ್ ಲಯನ್ಸ್ ತಂಡದ ಮಾಲೀಕತ್ವ ಹೊಂದಿರುವ ಇಂಟೆಕ್ಸ್ ಟೆಕ್ನಾಲಜೀಸ್, ಐಪಿಎಲ್ ಕ್ರಿಕೆಟ್ ಪ್ರಿಯರಿಗಾಗಿ ಕಡಿಮೆ ದರದ ಆಕ್ವಾ ಲಯನ್ಸ್ 3ಜಿ ಸ್ಮಾರ್ಟ್‌ಪೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಗ್ರಾಹಕರಿಗೆ ಈ ಸ್ಮಾರ್ಟ್‌ಪೋನ್‌ಗಳು 4,990 ರೂಪಾಯಿಗಳಲ್ಲಿ ಲಭ್ಯವಿದೆ. 
ಇಂಟೆಕ್ಸ್ ಆಕ್ವಾ ಲಯನ್ಸ್ 3ಜಿ ಸ್ಮಾರ್ಟ್‌ಪೋನ್ ಡ್ಯುಯಲ್ ಸಿಮ್ ಮತ್ತು ಆಂಡ್ರಾಯ್ಡ್ 5.1 ಲಾಲಿಪಾಪ್ ವ್ಯಶಿಷ್ಟ್ಯವನ್ನು ಹೊಂದಿದೆ. ಈ ಪೋನ್‌ಗಳು 720x1280 ಪಿಕ್ಸೆಲ್ಸ್ ರೆಸಲ್ಯೂಶನ್ ಜೊತೆಗೆ 5 ಇಂಚಿನ ಎಚ್‌ಡಿ ಡಿಸ್‌ಪ್ಲೇ, 1 ಜಿಬಿ ರ್ಯಾಮ್ ಸೇರಿದಂತೆ 1.2 ಜಿಎಚ್‌ಝಡ್ ಕ್ವಾಡ್ ಕೋರ್ ಪ್ರೊಸೆಸರ್ ಹೊಂದಿದೆ.
 
ಈ ಸ್ಮಾರ್ಟ್‌ಪೋನ್‌ಗಳು 5 ಮೆಗಾ ಪಿಕ್ಸೆಲ್ಸ್ ರಿಯರ್ ಕ್ಯಾಮೆರಾ ಜೊತೆಗೆ 2 ಮೆಗಾ ಪಿಕ್ಸೆಲ್ಸ್ ಫ್ರಂಟ್ ಕ್ಯಾಮೆರಾ, 8 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯ, 32 ಜಿಬಿ ವಿಸ್ತರಣೆ ಸಾಮರ್ಥ್ಯ, 3500 ಎಮ್‌ಎಎಚ್ ಲಿ-ಪೊ ಬ್ಯಾಟರಿಯನ್ನು ಹೊಂದಿದೆ. ಇಂಟೆಕ್ಸ್ ಆಕ್ವಾ ಲಯನ್ಸ್ 3ಜಿ ಪೋನ್‌ಗಳು 145x71.5x9.5 ಸುತ್ತಳತೆ ಹೊಂದಿದ್ದು 172 ಗ್ರಾಂ ತೂಕವನ್ನು ಹೊಂದಿದೆ. 
 
ಇಂಟೆಕ್ಸ್ ಆಕ್ವಾ ಲಯನ್ಸ್ 3ಜಿ ಈ ಪೋನ್‌ಗಳು ಬ್ಲೂಟೂತ್, ವೈ-ಫೈ, 3ಜಿ, ಜಿಪಿಎಸ್‌ ಮತ್ತು ಮೈಕ್ರೋ ಯುಎಸ್‌ಬಿ ಕನೆಕ್ಟಿವಿಟಿ ಸೌಲಭ್ಯವನ್ನು ಒಳಗೊಂಡಿದೆ. ಈ ಪೋನ್‌ಗಳು ಇಂಟೆಕ್ಸ್ ಸರ್ವಿಸ್, ಫೋಲೊ, ಒಪೆರಾ ಮಿನಿ, ಕ್ಲೀನ್ ಮಾಸ್ಟರ್, ನ್ಯೂಸ್‌ಹಂಟ್, ಐ-ಸ್ಟೋರ್, ಹೈಕ್‌ ನಂತಹ ಪ್ರೆ-ಲೋಡೆಡ್ ಅಪ್ಲಿಕೇಶನ್‌ ಹೊಂದಿದೆ. ಈ ಆವೃತ್ತಿಯ ಪೋನ್‌ಗಳು ವೈಟ್ ಮತ್ತು ಷಾಂಪೇನ್ ಬಣ್ಣದಲ್ಲಿ ಗ್ರಾಹಕರಿಗೆ ಲಭ್ಯವಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments