ಸ್ಮಾರ್ಟ್ಪೋನ್ ತಯಾರಿಕಾ ಸಂಸ್ಥೆಯಾಗಿರುವ ಇಂಟೆಕ್ಸ್, ಕಡಿಮೆ ದರದ ಇಂಟೆಕ್ಸ್ ಅಕ್ವಾ ಕ್ಲಾಸಿಕ್ 3ಜಿ ಸ್ಮಾರ್ಟ್ಪೋನ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಈ ಆವೃತ್ತಿಯ ಸ್ಮಾರ್ಟ್ಪೋನ್ಗಳು ಗ್ರಾಹಕರಿಗೆ 4,444 ರೂಪಾಯಿಗಳಲ್ಲಿ ಲಭ್ಯವಾಗಲಿದೆ.
ಇಂಟೆಕ್ಸ್ ಅಕ್ವಾ ಕ್ಲಾಸಿಕ್ 3ಜಿ ಸ್ಮಾರ್ಟ್ಪೋನ್ಗಳು 480 x 854 ಪಿಕ್ಸೆಲ್ಸ್ ಜೊತೆಗೆ 5 ಇಂಚ್ ಡಿಸ್ಪ್ಲೇ ಒಳಗೊಂಡಿದ್ದು, 1.2ಜಿಎಚ್ಡಿ ಕ್ವಾಡ್ ಕೋರ್ ಪ್ರೊಸೆಸರ್, 1 ಜಿಬಿ ರ್ಯಾಮ್ ಮತ್ತು 8 ಜಿಬಿ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.
ಈ ಆವೃತ್ತಿಯ ಸ್ಮಾರ್ಟ್ಪೋನ್ಗಳು 9.3 ಎಂಎಂ ತೆಳುವಾಗಿದ್ದು, 160 ಗ್ರಾಂ ತೂಕ ಹೊಂದಿದೆ. ಇಂಟೆಕ್ಸ್ ಅಕ್ವಾ ಕ್ಲಾಸಿಕ್ 3ಜಿ ಸ್ಮಾರ್ಟ್ಪೋನ್ಗಳು 5 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು ಫ್ರಂಟ್ ವಿಜಿಎ ಕ್ಯಾಮೆರಾ ಹೊಂದಿದ್ದು, 2,100 ಎಮ್ಎಎಚ್ ಬ್ಯಾಟರಿ ಮತ್ತು ವೈ-ಫೈ 802.11 ಬಿ/ಜಿ/ಎನ್, ಬ್ಲೂಟೂತ್, ಜಿಪಿಎಸ್ ಜೊತೆಗೆ ಎ-ಜಿಪಿಎಸ್ ಮತ್ತು ಎಫ್ಎಮ್ ರೇಡಿಯೋ ಹೊಂದಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.