Select Your Language

Notifications

webdunia
webdunia
webdunia
webdunia

ವಿಜಯ್ ಮಲ್ಯ ಗಡಿಪಾರಿಗೆ ಬ್ರಿಟನ್‌ಗೆ ಕೇಂದ್ರ ಸರಕಾರ ಪತ್ರ

ವಿಜಯ್ ಮಲ್ಯ ಗಡಿಪಾರಿಗೆ ಬ್ರಿಟನ್‌ಗೆ ಕೇಂದ್ರ ಸರಕಾರ ಪತ್ರ
ನವದೆಹಲಿ , ಗುರುವಾರ, 28 ಏಪ್ರಿಲ್ 2016 (19:03 IST)
ಬ್ರಿಟನ್‌ನಿಂದ ಮದ್ಯದ ದೊರೆ ವಿಜಯ್ ಮಲ್ಯ ಅವರನ್ನು ಗಡಿಪಾರು ಮಾಡುವಂತೆ ಕೇಂದ್ರ ಸರಕಾರ ಬ್ರಿಟನ್ ಸರಕಾರಕ್ಕೆ ಪತ್ರ ಬರೆದಿದೆ.
 
ವಿದೇಶಾಂಗ ಸಚಿವಾಲಯ ದೆಹಲಿಯಲ್ಲಿರುವ ಬ್ರಿಟನ್‌ನ ರಾಯಭಾರಿ ಕಚೇರಿಗೆ ಪತ್ರ ಬರೆದು, ವಿಜಯ್ ಮಲ್ಯ ಅವರನ್ನು ಬ್ರಿಟನ್‌‌ನಿಂದ ಗಡಿಪಾರು ಮಾಡಿದಲ್ಲಿ ಹಣ ದುರುಪಯೋಗ ಪ್ರಕರಣದ ತನಿಖೆಗೆ ಸಹಕಾರಿಯಾಗುವುದಾಗಿ ಮನವಿ ಮಾಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.
 
ಬ್ರಿಟನ್‌ನಲ್ಲಿರುವ ರಾಯಭಾರಿ ಕಚೇರಿ ಕೂಡಾ ಬ್ರಿಟನ್‌ನ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಉತ್ತರಕ್ಕಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
 
ಕೇಂದ್ರ ಸರಕಾರ ಬ್ರಿಟನ್ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಮಲ್ಯ ಗಡಿಪಾರಿಗೆ ಒತ್ತಾಯಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
 
ಕೇಂದ್ರ ಸರಕಾರ, ಜಾರಿ ನಿರ್ದೇಶನಾಲಯ ನೀಡಿದ ಮೂರು ಸಮನ್ಸ್‌ಗಳನ್ನು ನಿರ್ಲಕ್ಷಿಸಿ ತನಿಖೆಗೆ ಅಸಹಕಾರ ನೀಡಿದ ಹಿನ್ನೆಲೆಯಲ್ಲಿ ಈಗಾಗಲೇ ಮಲ್ಯ ಅವರ ಪಾಸ್‌ಪೋರ್ಟ್ ರದ್ದುಗೊಳಿಸಿದೆ.ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್ ಈಗಾಗಲೇ ಜಾರಿಯಲ್ಲಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.  

Share this Story:

Follow Webdunia kannada

ಮುಂದಿನ ಸುದ್ದಿ

ಆರೆಸ್ಸೆಸ್ ಟೀಕಾಕಾರ ದಿಗ್ವಿಜಯ್ ಸಿಂಗ್‌ರಿಂದ ವಿಎಚ್‌ಪಿ ಕಚೇರಿಗೆ ಭೇಟಿ