Select Your Language

Notifications

webdunia
webdunia
webdunia
webdunia

ಸೂಪಫಾಸ್ಟ್‌‌‌ ರೈಲುಗಳಲ್ಲಿ ಸ್ಲೀಪರ್‌‌ ಕೋಚ್‌ ಬದಲಿಗೆ ಎಸಿ ಕೋಚ್‌

ಸೂಪಫಾಸ್ಟ್‌‌‌ ರೈಲುಗಳಲ್ಲಿ ಸ್ಲೀಪರ್‌‌ ಕೋಚ್‌ ಬದಲಿಗೆ ಎಸಿ ಕೋಚ್‌
ನವದೆಹಲಿ , ಮಂಗಳವಾರ, 29 ಜುಲೈ 2014 (17:03 IST)
ಭಾರತೀಯ ರೈಲ್ವೆ ಇಲಾಖೆ ಎಕ್ಸ್‌‌ಪ್ರೆಸ್‌ ಮತ್ತು ಸೂಪರ್‌ಫಾಸ್ಟ್‌‌‌‌ ರೈಲುಗಳಲ್ಲಿ ಹಳೆಯ ಸೆಕೆಂಡ್‌ ಕ್ಲಾಸ್‌‌ ಸ್ಲೀಪರ್‌‌‌‌‌ ಬದಲಿಗೆ ಥ್ರೀ ಟಯರ್‌ ಎಸಿ ಕೋಚ್‌‌‌ ಅಳವಡಿಸುವ ಚಿಂತನೆ ನಡೆಸಲಾಗುತ್ತಿದೆ. ಮುಂದಿನ ಐದರಿಂದ ಆರು ವರ್ಷಗಳವರೆಗೆ ಕಾರ್ಯ ಪೂರ್ಣಗೊಳಿಸುವ ಬಗ್ಗೆ ದಕ್ಷೀಣ ರೈಲ್ವೆ ಯೋಜನೆ ಸಿದ್ದಪಡಿಸಿದೆ ಎಂದು ಮೂಲಗಳು ತಿಳಿಸಿವೆ.
 
ಈ ಮೂಲಕ ದಕ್ಷೀಣ ರೈಲ್ವೆ ಕೆಲವು ಎಕ್ಸಪ್ರೆಸ್‌ ರೈಲುಗಳಲ್ಲಿ ಸಾಧಾರಣ ಸೆಕೆಂಡ್‌ ಕ್ಲಾಸ್‌ ಸ್ಲೀಪರ್‌ ಗಳನ್ನು ತಗೆದು ಥ್ರೀ ಟಯರ್‌‌ ಕೋಚ್‌‌‌ಗಳನ್ನು ಅಳವಡಿಸಲು ಪ್ರಾರಂಭಿಸಿದೆ. ಕಳೆದ ರವಿವಾರದಂದು ಎರ್ನಾಕುಲ್‌‌‌ನಿಂಧ ಹಜರತ್‌ ನಿಜಾಮುದ್ದೀನ್‌‌‌ಗೆ ತೆರಳುವ ಮಂಗಲಾ ಎಕ್ಸಪ್ರೆಸ್‌‌‌‌ ( ಟ್ರೇನ್‌‌ ನಂಬರ್‌ 12617)ನಲ್ಲಿ ಒಂದು ಸ್ಲೀಪರ್‌‌ ಕೋಚ್‌‌ ಎಸ್‌‌‌‌-2 ತಗೆದು ಅದರ ಬದಲಿಗೆ ಎಸಿ ಥ್ರೀ ಕೋಚ್‌ ಅಳವಡಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ..  
 
ಮೊದಲು ಈ ರೈಲಿನಲ್ಲಿ 11 ಸ್ಲೀಪರ್‌ ಕೋಚ್‌ ಇರುತ್ತಿದ್ದವು ಆದರೆ ಈಗ 10 ಸ್ಲೀಪರ್‌ ಕೋಚ್‌ಗಳು ಇರಲಿವೆ. ಥ್ರೀ ಟಿಯರ್‌‌‌ ಎಸಿ ಕೋಚ್‌‌‌ ಸಂಖ್ಯೆಯಲ್ಲಿ ಮೂರರಿಂದ ನಾಲ್ಕಕ್ಕೇರಲಿದೆ. 
 
ಈ ತರಹದ ವ್ಯವಸ್ಥೆಯಿಂದ ಪ್ರಯಾಣಿಕರ ಜೊತೆಗೆ ರೈಲ್ವೆ ಇಲಾಖೆಗೆ ಕೂಡ ಲಾಭವಾಗಲಿದೆ ಎಂದು ರೈಲ್ವೆಯ ಅಧಿಕಾರಿಯೊಬ್ಬರು ಮಾಧ್ಯಮದವರಿಗೆ ತಿಳಿಸಿದ್ದಾರೆ.

Share this Story:

Follow Webdunia kannada