Select Your Language

Notifications

webdunia
webdunia
webdunia
webdunia

ಐಬಾಲ್‌ನಿಂದ ಕಾಂಪ್‌ಬುಕ್ ಲ್ಯಾಪ್‌ಟಾಪ್ ಮಾರುಕಟ್ಟೆಗೆ

ಐಬಾಲ್‌ನಿಂದ ಕಾಂಪ್‌ಬುಕ್ ಲ್ಯಾಪ್‌ಟಾಪ್ ಮಾರುಕಟ್ಟೆಗೆ
ನವದಹಲಿ , ಬುಧವಾರ, 11 ಮೇ 2016 (15:32 IST)
ಮುಂಬೈ ಮೂಲದ ಐಬಾಲ್ ಸಂಸ್ಥೆ, ಅಗ್ಗದ ಬೆಲೆಯ ಕಾಂಪ್‌ಬುಕ್ ಎಕ್ಸಲೆನ್ಸ್ ಮತ್ತು ಕಾಂಪ್‌ಬುಕ್ ಎಗ್‌‌ಝಂಪ್ಲೈರ್ ಆವೃತ್ತಿಯ ಲ್ಯಾಪ್‌ಟಾಪ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಮಾರುಕಟ್ಟೆಯಲ್ಲಿ ಈ ಆವೃತ್ತಿಯ ಲ್ಯಾಪ್‌ಟಾಪ್‌ಗಳ ಬೆಲೆ ಕ್ರಮವಾಗಿ 9,999 ರೂಪಾಯಿ ಮತ್ತು 13,999 ರೂಪಾಯಿಗಳಲ್ಲಿ ಲಭ್ಯವಿದೆ.
ಕಾಂಪ್‌ಬುಕ್ ಎಕ್ಸಲೆನ್ಸ್ ಆವೃತ್ತಿಯ ಲ್ಯಾಪ್‌ಟಾಪ್‌ಗಳು 11.6 ಇಂಚಿನ ಮಲ್ಟಿ-ಟಚ್ ಐಪಿಎಸ್‌ ಡಿಸ್‌ಪ್ಲೇ ಹೊಂದಿದ್ದು, ಕಾಂಪ್‌ಬುಕ್ ಎಗ್‌‌ಝಂಪ್ಲೈರ್ ಆವೃತ್ತಿಯ ಲ್ಯಾಪ್‌ಟಾಪ್‌ಗಳು 14 ಇಂಚಿನ ಮಲ್ಟಿ-ಟಚ್ ಐಪಿಎಸ್‌ ಡಿಸ್‌ಪ್ಲೇ ಹೊಂದಿದೆ. ಉಳಿದಂತೆ ಎರಡು ಲ್ಯಾಪ್‌ಟಾಪ್‌ಗಳಲ್ಲಿ ಸಾಕಷ್ಟು ಸಾಮ್ಯತೆ ಹೊಂದಿದೆ.
 
ಈ ಎರಡು ಆವೃತ್ತಿಯ ಲ್ಯಾಪ್‌ಟಾಪ್‌ಗಳು 1.83ಜಿಎಚ್‌ಝಡ್ ಇಂಟೆಲ್ ಕ್ವಾಡ್ ಕೋರ್ ಎಸ್‌ಒಸಿ, 2 ಜಿಬಿ ರ್ಯಾಮ್ ಮತ್ತು 10,000ಎಮ್‌ಎಎಚ್ ಬ್ಯಾಟರಿ ಹೊಂದಿದ್ದು, 32 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯದ ಜೊತೆಗೆ 64 ಜಿಬಿ ವಿಸ್ತರಣೆಯ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ.
 
ಈ ಲ್ಯಾಪ್‌ಟಾಪ್‌ಗಳು ಟ್ರಾಕ್‌ಪ್ಯಾಡ್ ಜೊತೆ ಪೂರ್ಣ ಅಳತೆಯ ಕೀಬೋರ್ಡ್ ಹೊಂದಿದ್ದು, ಮೈಕ್ ಮತ್ತು ಹೆಡ್‌ಪೋನ್‌ಗಾಗಿ 3.5ಎಮ್‌ಎಮ್ ಕಾಂಬೊ ಜ್ಯಾಕ್, ಡ್ಯುಯಲ್-ಸ್ಪೀಕರ್ಸ್ ಮತ್ತು ಫ್ರಂಟ್ ಫೆಸಿಂಗ್ ವಿಜಿಎ ಕ್ಯಾಮೆರಾ ಹೊಂದಿದೆ.
 
ಕಾಂಪ್‌ಬುಕ್ ಎಕ್ಸಲೆನ್ಸ್ ಮತ್ತು ಕಾಂಪ್‌ಬುಕ್ ಎಗ್‌‌ಝಂಪ್ಲೈರ್ ಆವೃತ್ತಿಯ ಲ್ಯಾಪ್‌ಟಾಪ್‌ಗಳು 8.5 ಗಂಟೆ ಬಾಳಿಕೆ ಬರುವ 10,000ಎಮ್‌ಎಎಚ್ ಬ್ಯಾಟರಿ ಹೊಂದಿದ್ದು, ಮಾರುಕಟ್ಟೆಯಲ್ಲಿ ಕೋಬಾಲ್ಟ್ ಬ್ಲ್ಯೂ ಮತ್ತು ಬ್ಲಾಕ್ ಬಣ್ಣದಲ್ಲಿ ಲಭ್ಯವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರು- ಅಜ್ಮೀರ್ ರೈಲಿಗೆ ಬಾಂಬ್ ಬೆದರಿಕೆ