Select Your Language

Notifications

webdunia
webdunia
webdunia
webdunia

ಹಾನರ್ 8 ಮಾಡೆಲ್ ಸ್ಮಾರ್ಟ್‌ಫೋನ್ ಜುಲೈ 11 ರಂದು ಮಾರುಕಟ್ಟೆಗೆ

ಹಾನರ್ 8 ಮಾಡೆಲ್ ಸ್ಮಾರ್ಟ್‌ಫೋನ್ ಜುಲೈ 11 ರಂದು ಮಾರುಕಟ್ಟೆಗೆ
ನವದೆಹಲಿ , ಶುಕ್ರವಾರ, 1 ಜುಲೈ 2016 (13:06 IST)
ಹುವಾವೇ ಟರ್ಮಿನಲ್ಸ್ ಹಾನರ್ ಬ್ರ್ಯಾಂಡ್, ಹಾನರ್-8 ಮಾಡೆಲ್ ಸ್ಮಾರ್ಟ್‌ಫೋನ್‌ನ್ನು ಜುಲೈ 11 ರಂದು ನಡೆಯುವ ಸಮಾರಂಭದಲ್ಲಿ ಅನಾವರಣಗೊಳಿಸುವುದಾಗಿ ದೃಢೀಕರಿಸಿದೆ. ಹಾನರ್ -8 ಮಾಡೆಲ್ ಫೋನ್ ಡ್ಯೂಯಲ್ ಸಿಮ್, ರಿಯರ್ ಕ್ಯಾಮೆರಾ ವೈಶಿಷ್ಟ್ಯವನ್ನು ಹೊಂದಿರುವುದು ಮಾತ್ರ ಬಹಿರಂಗವಾಗಿದ್ದು, ಕಂಪೆನಿಯಿಂದ ಮತ್ತಷ್ಟು ಮಾಹಿತಿ ಬಹಿರಂಗವಾಗಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.
 
ನಿರೀಕ್ಷಿತ ಹಾನರ್-8 ಆವೃತ್ತಿಯ ಪೋನ್‌ಗಳು 5.2 ಇಂಚ್ ಫುಲ್ ಎಚ್‌ಡಿ ಡಿಸ್‌ಪ್ಲೇ, ಆಂಡ್ರಾಯ್ಡ್ 6.0 ಮಾರ್ಷ್ಮ್ಯಾಲೋ, 2900ಎಮ್‌ಎಎಚ್ ಸಾಮರ್ಥ್ಯದ ಬ್ಯಾಟರಿ, ಆಕ್ಟಾ ಕೋರ್ ಕಿರಿನ್ 950 ಪ್ರೊಸೆಸರ್, 4ಜಿಬಿ ರ್ಯಾಮ್, ಎನ್‌ಎಫ್‌ಸಿ ಮತ್ತು ಫಿಂಗರ್‌ಪ್ರಿಂಟ್ ಸ್ಕ್ಯಾನರ್ ವೈಶಿಷ್ಟ್ಯವನ್ನು ಹೊಂದಿದೆ.
 
ಈ ಹಿಂದೆ, ಹಾನರ್ ಸಂಸ್ಥೆಯು 10999 ರೂಪಾಯಿ ಬೆಲೆಯ ಹಾನರ್ 5ಸಿ ಆವೃತ್ತಿಯ ಪೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಈ ಆವೃತ್ತಿಯ ಪೋನ್‌ಗಳು ಫ್ಲಿಪ್‌ಕಾರ್ಟ್ ಮತ್ತು ಹಾನರ್ ಅಧಿಕೃತ ವೆಬ್‌ಸೈಟ್‌ನಲ್ಲಿ  ಬುಧವಾರ ನಡೆದ ಮೊದಲ ಫ್ಯಾಶ್ ಸೇಲ್‌ನಲ್ಲಿ ಲಭ್ಯವಿದ್ದವು. ಈ ಪೋನ್‌ಗಳು 15 ತಿಂಗಳ ಖಾತರಿ, ಒಂದು ತಿಂಗಳ ಸ್ಕ್ರೀನ್ ರಿಪ್ಲೇಸಮೆಂಟ್‌ ಕೊಡುಗೆಯೊಂದಿಗೆ ಗ್ರಾಹಕರಿಗೆ ಲಭ್ಯವಿದ್ದವು. 
 
ಡ್ಯೂಯಲ್ ಸಿಮ್ ಹೊಂದಿರುವ ಹಾನಲ್ 5-ಸಿ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳ ಎರಡು ಸಿಮ್‌ಗಳು 4ಜಿ ಎಲ್‌ಟಿಇ ಸಂಪರ್ಕಕ್ಕೆ ಸ್ಪಂದಿಸುತ್ತವೆ. ಈ ಪೋನ್‌ಗಳು 5.2 ಇಂಚ್ ಫುಲ್ ಎಚ್‌ಡಿ ಡಿಸ್‌ಪ್ಲೇ, ಹೈಸಿಲಿಕಾನ್ ಕಿರಿನ್ 650 ಆಕ್ಟಾ ಕೋರ್ ಪ್ರೊಸೆಸರ್ (4 ಕಾರ್ಟೆಕ್ಸ್- ಎ53 ಕೋರ್ಸ್ 1.7ಜಿಎಚ್‌ಝಡ್ +4 ಕಾರ್ಟೆಕ್ಸ್- ಎ53 ಕೋರ್ಸ್ 2ಜಿಎಚ್‌ಝಡ್), 2 ಜಿಬಿ ರ್ಯಾಮ್, 16 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯ ಮತ್ತು 128 ಜಿಬಿ ವಿಸ್ತರಣೆಯ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. 
 
ಈ ಆವೃತ್ತಿಯ ಪೋನ್‌ಗಳು 13 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು 8 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ, ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು 3000ಎಮ್‌ಎಎಚ್ ಸಾಮರ್ಥ್ಯದ ಬ್ಯಾಟರಿ ವೈಶಿಷ್ಟ್ಯ ಹೊಂದಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಯಡಿಯೂರಪ್ಪಗೆ ಟಾಂಗ್ ನೀಡಲು ಕೆ.ಎಸ್.ಈಶ್ವರಪ್ಪ ಸಿದ್ದತೆ