Webdunia - Bharat's app for daily news and videos

Install App

ಹೊಂಡಾ ನವೀ ಮಾಡೆಲ್‌ನ 10 ಸಾವಿರ ದ್ವಿಚಕ್ರ ವಾಹನಗಳ ಮಾರಾಟ

Webdunia
ಬುಧವಾರ, 22 ಜೂನ್ 2016 (15:47 IST)
ಭಾರತೀಯ ಯುವ ಪೀಳಿಕೆಯನ್ನು ಆಕರ್ಷಿಸುತ್ತಿರುವ ಹೊಂಡಾ ನವೀ ಆವೃತ್ತಿಯ ಬೈಕ್‌ಗಳು 10 ಸಾವಿರ ಮಾರಾಟದ ಗಡಿ ದಾಟಿದೆ ಎಂದು ಹೊಂಡಾ ಮೋಟರ್ ಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಘೋಷಿಸಿದೆ.
 
ಪ್ರಸಕ್ತ ಸಾಲಿನ ಫೆಬ್ರುವರಿ ತಿಂಗಳಲ್ಲಿ ನಡೆದ ಆಟೋ ಎಕ್ಸ್ಪೋ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದ ಹೊಂಡಾ ನವೀ ದ್ವಿಚಕ್ರವಾಹನಗಳು ಭಾರತೀಯ ಯುವಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದವು.
 
ಹೊಂಡಾ ನವೀ ಆವೃತ್ತಿಯ ಬೈಕ್‌ಗಳಿಗೆ ಗ್ರಾಹಕರು ನೀಡಿರುವ ಪ್ರತಿಕ್ರಿಯೆಯಿಂದ ಸಂತವಾಗಿದೆ ಎಂದು ಹೋಂಡಾ ಸಂಸ್ಥೆಯ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಹಿರಿಯ ಉಪಾಧ್ಯಕ್ಷ ಯದ್ವಿಂದರ್ ಸಿಂಗ್ ಹೇಳಿದ್ದಾರೆ.
 
ಹೊಂಡಾ ನವೀ ಆವೃತ್ತಿಯ ಬೈಕ್‌ಗಳು 10 ಸಾವಿರ ಮಾರಾಟದ ಗಡಿ ದಾಟಿರುವದನ್ನು ಸಂಭ್ರಮಿಸುತ್ತಿರುವ ಸಂಸ್ಥೆ, ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಹೊಸ ನಗರಗಳಿಗೆ ವಿಸ್ತರಿಸಲು ನಿರ್ಧರಿಸಿದೆ. ಈ ಬೈಕ್‌ಗಳ ಬುಕ್ಕಿಂಗ್‌ಗಳಲ್ಲಿ ಹೆಚ್ಚಳವಾಗಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.
 
ಹೊಂಡಾ ನವೀ ಆವೃತ್ತಿಯ ಬೈಕ್‌ಗಳು 109 ಸಿಸಿ ಎಂಜಿನ್, 8 ಪಿಎಸ್ ನಲ್ಲಿರುವ 7,000 ಆರ್‌ಪಿಎಮ್ ಮತ್ತು ಗರಿಷ್ಠ ಟಾರ್ಕ್ 8.96 ಎನ್‌ಎಮ್ ಜೊತೆಗೆ 5,500ಆರ್‌ಪಿಎಮ್ ವೈಶಿಷ್ಟ್ಯ ಹೊಂದಿದೆ. ಈ ಹೊಸ ವೈಶಿಷ್ಟ್ಯದ ಬೈಕ್ ಫ್ರಂಟ್ 12 ಮತ್ತು ರಿಯರ್ 10 ಟೈಯರ್‌ಗಳನ್ನು ಹೊಂದಿದೆ. 
 
ದೆಹಲಿ ಶೋ ರೂಮ್ ದರ ಹೊರತು ಪಡೆಸಿ ಹೋಂಡಾ ನವೀ ಆವೃತ್ತಿಯ ಬೈಕ್‌ಗಳು ಮಾರುಕಟ್ಟೆಯಲ್ಲಿ ಆರಂಭಿಕ ಬೆಲೆ 39,648 ರೂಪಾಯಿಗಳಲ್ಲಿ ಲಭ್ಯವಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

2019 ರಲ್ಲಿ ತೀರಿಕೊಂಡಿದ್ದ ಅರುಣ್ ಜೇಟ್ಲಿ 2020 ರಲ್ಲಿ ಬೆದರಿಕೆ ರಾಹುಲ್ ಗಾಂಧಿಗೆ ಬೆದರಿಕೆ ಹಾಕಿದ್ರಂತೆ

ಪ್ರಜ್ವಲ್ ರೇವಣ್ಣಗೆ ಜೀವನ ಪರ್ಯಂತ ಜೈಲು ಶಿಕ್ಷೆ, ಕಣ್ಣೀರು ಹಾಕಿದ ಅಜ್ಜ ದೇವೇಗೌಡ

ರಾಹುಲ್ ಗಾಂಧಿಯಿಂದ ಮತಗಳ್ಳತನ ಆರೋಪ: ಕಾಂಗ್ರೆಸ್ ಪ್ರತಿಭಟನೆಗೆ ಪ್ರತಿತಂತ್ರ ಹೂಡಿದ ಬಿಜೆಪಿ

ಮೊಸಳೆಕಣ್ಣೀರು ಹಾಕುತ್ತಿರುವ ರಾಹುಲ್ ಗಾಂಧಿ, ರೈತರು ಆತ್ಮಹತ್ಯೆ ಮಾಡಿಕೊಂಡಾಗ ಎಲ್ಲಿ ಇದ್ರೂ: ಪಿ.ಸಿ.ಮೋಹನ್

ಮುಂಬೈ, ಕೋಲ್ಕತ್ತಾ ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ: ಇಂಡಿಗೋ ಮುಂದಿನ ಕ್ರಮಕ್ಕೆ ಮೆಚ್ಚುಗೆ

ಮುಂದಿನ ಸುದ್ದಿ
Show comments