Webdunia - Bharat's app for daily news and videos

Install App

10 ಸಾವಿರ ಮುಂಗಡ ಬುಕ್ಕಿಂಗ್ ಗಡಿ ದಾಟಿದ ಹೊಂಡಾ ಬಿಆರ್-ವಿ ಮಾಡೆಲ್

Webdunia
ಶುಕ್ರವಾರ, 24 ಜೂನ್ 2016 (15:23 IST)
ಕಳೆದ ತಿಂಗಳಷ್ಟೇ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಕ್ರೀಡಾ ಬಳಕೆಯ ಹೊಂಡಾ ಬಿಆರ್-ವಿ ಆವೃತ್ತಿಯ ಕಾರುಗಳು ಮಾರಾಟ 10,000 ಮುಂಗಡ ಬುಕ್ಕಿಂಗ್ ಗಡಿ ದಾಟಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.
 
ಕಳೆದ ಮೇ 5 ರಂದು ಮಾರುಕಟ್ಟೆಗೆ ಬಿಡುಗಡೆಯಾಗಿರುವ ಹೊಂಡಾ ಬಿಆರ್-ವಿ  ಆವೃತ್ತಿಯ ಕಾರುಗಳು ಗ್ರಾಹಕರನ್ನು ವೈವಿಧ್ಯಮಯ ಪ್ರೊಫೈಲ್‌‍‌ನಿಂದ ಆಕರ್ಷಿಸುತ್ತಿದೆ ಎಂದು ಭಾರತೀಯ ಹೊಂಡಾ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.
 
ಕಳೆದ ತಿಂಗಳಷ್ಟೇ ಮಾರುಕಟ್ಟೆಗೆ ಬಿಡುಗಡೆ ಹೊಂದಿರುವ ಈ ಕಾರುಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಇಲ್ಲಿಯವರೆಗೂ 10 ಸಾವಿರ ಮುಂಗಡ ಬುಕ್ಕಿಂಗ್ ಗಡಿದಾಟಿದೆ. ಈ ಆವೃತ್ತಿಯ ಕಾರುಗಳು ಯುವಕರನ್ನು ಮತ್ತು ಮಧ್ಯ ವಯಸ್ಕರನ್ನು ಆಕರ್ಷಿಸುತ್ತಿರುವ ಬಿಆರ್-ವಿ ಆವೃತ್ತಿಯ ಕಾರುಗಳು, ಇನ್ನೂ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲಿದೆ ಎಂದು ಎಚ್‌ಸಿಐಎಸ್ ಸಂಸ್ಥೆಯ ಅಧ್ಯಕ್ಷ ಯೊಇಚಿರೋ ಯಿನೋ ತಿಳಿಸಿದ್ದಾರೆ.
 
ಪ್ರಸಕ್ತ ಬೇಡಿಕೆಯ ಪ್ರಕಾರ, ಬಿಆರ್-ವಿ ಪೆಟ್ರೋಲ್ ಎಂಜಿನ್ ವಾಹನ ಮತ್ತು ಡಿಸೇಲ್ ಎಂಜಿನ್ ಆವೃತ್ತಿಯ ಕಾರುಗಳಿಗೂ ಸಮನಾದ ಬೇಡಿಕೆ ಇದೆ ಎಂದು ಸಂಸ್ಥೆ ತಿಳಿಸಿದೆ.
 
ಕ್ರೀಡಾ ಬಳಕೆಯ ಹೊಂಡಾ ಬಿಆರ್-ವಿ  ಆವೃತ್ತಿಯ ಕಾರುಗಳು ಎಳು ಆಸನಗಳನ್ನು ಹೊಂದಿದ್ದು, ದೆಹಲಿ ಶೋ ರೂಮ್ ದರ ಹೊರತು ಪಡಿಸಿ ಗ್ರಾಹಕರಿಗೆ 8.75 ಲಕ್ಷ ರೂಪಾಯಿಗಳಿಂದ 12.9 ಲಕ್ಷ ರೂಪಾಯಿಗಳಲ್ಲಿ ಲಭ್ಯವಾಗಲಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ವಿಮಾನ ದುರಂತ: ವಾರದೊಳಗೆ ಪ್ರಾಥಮಿಕ ವರದಿ ಹೊರಬೀಳುವ ಸಾಧ್ಯತೆ

ತಮ್ಮ ವಶದಲ್ಲಿರುವ ಕೈದಿಗಳು, ಮೀನುಗಾರರ ಪಟ್ಟಿ ವಿನಿಮಯ ಮಾಡಿಕೊಂಡ ಭಾರತ, ಪಾಕಿಸ್ತಾನ

ಯಾವ ಚಾನೆಲ್ ಗಳು ನನ್ನ ಬಗ್ಗೆ ಸುಳ್ಳು ಸುದ್ದಿ ಹಾಕಿದ್ರೂ ಕೇಳೋನಲ್ಲ ನಾನು: ಸಿದ್ದರಾಮಯ್ಯ

ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾದ ಎನ್ ರಾಮಚಂದರ್ ರಾವ್ ಹಿನ್ನೆಲೆ ಹೀಗಿದೆ

ಸರಣಿ ಹೃದಯಾಘಾತಕ್ಕೆ ಕೊವಿಡ್ ಲಸಿಕೆ ಕಾರಣವಾ: ಸಿದ್ದರಾಮಯ್ಯ ಸ್ಪೋಟಕ ಹೇಳಿಕೆ

ಮುಂದಿನ ಸುದ್ದಿ
Show comments