Select Your Language

Notifications

webdunia
webdunia
webdunia
webdunia

ಹೆಕೈಲ್ ಟೆಕ್ನಾಲಜಿಯಿಂದ ನಾಲ್ವರು ನೌಕರರಿಗೆ ಕಾರುಗಳ ಕೊಡುಗೆ

ಹೆಕೈಲ್ ಟೆಕ್ನಾಲಜಿಯಿಂದ ನಾಲ್ವರು  ನೌಕರರಿಗೆ ಕಾರುಗಳ ಕೊಡುಗೆ
ಮುಂಬೈ , ಶನಿವಾರ, 23 ಮೇ 2015 (15:35 IST)
ಹೆಕೈಲ್ ಟೆಕ್ನಾಲಜಿ ಕಂಪನಿಯು ತನ್ನ ಕಂಪನಿಯಲ್ಲಿ ಅತ್ಯುತ್ತಮ ಸಾಧನೆ ತೋರಿದ ನಾಲ್ವರು ನೌಕರರಿಗೆ ಶ್ರೇಷ್ಟ ದರ್ಜೆಯ ಕಾರುಗಳನ್ನು ಕೊಡುಗೆಯಾಗಿ ನೀಡಿದೆ.  ರಿಯಾಲ್ಟಿ ಪೋರ್ಟಲ್ ಹೌಸಿಂಗ್ ಕಂ. ಮುಖ್ಯಸ್ಥ ರಾಹುಲ್ ಯಾದವ್ ತನ್ನ ಸಿಬ್ಬಂದಿಗೆ ವೈಯಕ್ತಿಕ ಷೇರುಗಳನ್ನು ವಿತರಣೆ ಮಾಡಿ ಮುಖಪುಟದ ಸುದ್ದಿಯಾದ ಬಳಿಕ ಹೈಕೆಲ್ ಕಾರುಗಳನ್ನು ಸಿಬ್ಬಂದಿಗೆ ನೀಡುವ ಮೂಲಕ ಸುದ್ದಿ ಮಾಡಿದೆ. 
 
ತನ್ನ ನಾಲ್ವರು ಉತ್ತಮ ಸಾಧನೆ ತೋರಿದ ನೌಕರರಿಗೆ ಹೊಂಡೈ ಅಸೆಂಟ್ಸ್ ಮತ್ತು ಎರಡು 1-10 ಗ್ರಾಂಡ್ಸ್ ಕಾರುಗಳನ್ನು ಕೊಡುಗೆಯಾಗಿ ನೀಡಿದೆ. 2010ರಲ್ಲಿ ಆರಂಭವಾದ ಹೆಕೈಲ್ ಜಾಗತಿಕ ಗ್ರಾಹಕರಿಗೆ ಹಣಕಾಸಿನ ದತ್ತಾಂಶವನ್ನು ಒದಗಿಸುತ್ತಿದ್ದು,  23 ನೌಕರರಿದ್ದಾರೆ. ಐಸಿಸಿಐ ಸೆಕ್ಯೂರಿಟೀಸ್ ರಿಲಯನ್ಸ್ ಸೆಕ್ಯೂರಿಟೀಸ್, ಇಂಡಿಯಾ ಇನ್ಫೋಲೈನ್ ಮತ್ತು ಎಡೆಲ್‌ವೈಸ್ ಅದರ ಗ್ರಾಹಕರು ಎಂದು ಹೇಳಿಕೊಂಡಿದೆ. ಬ್ರಿಟನಲ್ಲಿ ಕೂಡ ಕಚೇರಿಯಿದೆ ಎಂದು ಹೆಕೈಲ್ ಹೇಳಿದೆ. 
 
ವಜ್ರ ರಫ್ತು ಕಂಪನಿ ಹರಿ ಕೃಷ್ಣ ಎಕ್ಸ್‌ಪೋರ್ಟ್ಸ್ ಕಳೆದ ವರ್ಷ ನೀಡಿದ ದೀಪಾವಳಿ ಬೋನಸ್‌ನಲ್ಲಿ ಸಿಬ್ಬಂದಿಗೆ ಒಟ್ಟು 50 ಕೋಟಿ ರೂ. ಮೌಲ್ಯದ  ಕಾರುಗಳು, ಆಭರಣಗಳು ಮತ್ತು ಅಪಾರ್ಟ್‌ಮೆಂಟ್‌ಗಳನ್ನು ನೀಡುವ ಮೂಲಕ ಸುದ್ದಿ ಮಾಡಿತ್ತು.

Share this Story:

Follow Webdunia kannada