Select Your Language

Notifications

webdunia
webdunia
webdunia
webdunia

ವಿಮಾನ ನಿಲ್ದಾಣ ಖಾಸಗೀಕರಣ: ಪರಾಮರ್ಶಿಸಲಿರುವ ಕೇಂದ್ರ

ವಿಮಾನ ನಿಲ್ದಾಣ ಖಾಸಗೀಕರಣ: ಪರಾಮರ್ಶಿಸಲಿರುವ ಕೇಂದ್ರ
ನವದೆಹಲಿ , ಸೋಮವಾರ, 29 ಸೆಪ್ಟಂಬರ್ 2014 (11:02 IST)
ವಿಮಾನ ನಿಲ್ದಾಣಗಳ ಶುಲ್ಕ ದುಬಾರಿಯಾಗುತ್ತಿದೆ ಎಂದು ಏರಲೈನ್ಸ್ ಆರೋಪಿಸುತ್ತಿರುವ ಕಾರಣ ಪ್ರಮುಖ ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸುವ ಯೋಜನೆಯನ್ನು ಇನ್ನೊಮ್ಮೆ ಪರಾಮರ್ಶಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.

ಹಿಂದಿನ ಯುಪಿಎ ಸರಕಾರ ಖಾಸಗಿ ಸಹಭಾಗಿತ್ವದಲ್ಲಿ ಕೆಲವು ಪ್ರಮುಖ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ಹಾಗೂ ನಿರ್ಮಿಸುವ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಖಾಸಗಿ ಸಹಭಾಗಿತ್ವದ ಪರಿಣಾಮ ವಿಮಾನ ನಿಲ್ದಾನ ಶುಲ್ಕದಲ್ಲಿ ಭಾರಿ ಏರಿಕೆಯಾಗಿದೆ. ನಷ್ಟದಲ್ಲಿರುವ ಕಂಪನಿಗೆ ಇದರಿಂದ ಮತ್ತಷ್ಟು ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಸಹಭಾಗಿತ್ವ ಕುರಿತು ಒಪ್ಪಂದಗಳನ್ನು ಕೇಂದ್ರ ಸರಕಾರ ಪರಾವರ್ಶೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
 
ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಹಲವು ವಿಮಾನ ನಿಲ್ದಾಣಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಗೊಳಿಸಲಾಗುತ್ತದೆ. ಖಾಸಗಿ ಸಹಭಾಗಿತ್ವದ ಸ್ವರೂಪದಲ್ಲಿ ಬದಲಾವಣೆಯಾದರೆ ಈ ವಿಮಾನ ನಿಲ್ದಾನಗಳ ಅಭಿವೃದ್ಧಿಯೂ ನೆನೆಗುದಿಗೆ ಬೀಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Share this Story:

Follow Webdunia kannada