Select Your Language

Notifications

webdunia
webdunia
webdunia
webdunia

5000 ರೂ,ಗಳನ್ನು ಪಾವತಿಸಿ ಡಾಟ್ಸನ್ ರೆಡಿ ಗೋ ಮಾಡೆಲ್ ಕಾರು ಬುಕ್ ಮಾಡಿ

5000 ರೂ,ಗಳನ್ನು ಪಾವತಿಸಿ ಡಾಟ್ಸನ್ ರೆಡಿ ಗೋ ಮಾಡೆಲ್ ಕಾರು ಬುಕ್ ಮಾಡಿ
ನವದೆಹಲಿ , ಶನಿವಾರ, 30 ಏಪ್ರಿಲ್ 2016 (12:51 IST)
ನವದೆಹಲಿ: ಜಪಾನ್ ಮೂಲದ ದೈತ್ಯ ಕಾರು ತಯಾರಿಕಾ ಸಂಸ್ಥೆಯಾಗಿರುವ ನಿಸ್ಸಾನ್‌, ಇತ್ತೀಚ್ಚಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಡಾಟ್ಸನ್ ರೆಡಿ ಗೋ ಆವೃತ್ತಿಯ ಕಾರುಗಳ ಬುಕಿಂಗ್‌ನ್ನು ಮೇ 1 ರಿಂದ ಪ್ರಾರಂಭಿಸಲಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ನಿಸ್ಸಾನ್ ಶೋರೂಮ್‌ಗಳಲ್ಲಿ 5 ಸಾವಿರ ಮುಂಗಡ ಹಣ ಪಾವತಿ ಮಾಡುವ ಮೂಲಕ ಗ್ರಾಹಕರು ದಟ್ಸನ್ ರೆಡಿ ಗೋ ಆವೃತ್ತಿಯ ಕಾರುಗಳನ್ನು ಬುಕಿಂಗ್ ಮಾಡಬಹುದು. ಬುಕಿಂಗ್ ಮಾಡಿರುವ ವಾಹನಗಳನ್ನು ಪ್ರಸಕ್ತ ವರ್ಷದ ಜೂನ್ ತಿಂಗಳಲ್ಲಿ ಗ್ರಾಹಕರಿಗೆ ತಲುಪಿಸುವ ನಿರೀಕ್ಷೆ ಇದೆ ಎಂದು ಸಂಸ್ಥೆ ತಿಳಿಸಿದೆ.
 
ನಿಸ್ಸಾನ್ ಸಂಸ್ಥೆ, ದಟ್ಸನ್ ರೆಡಿ ಗೋ ಆವೃತ್ತಿಯ ಕಾರುಗಳ ಅಧಿಕೃತ ಬೆಲೆಯನ್ನು ಘೋಷಿಸಿಲ್ಲವಾದರು, ಈ ಆವೃತ್ತಿಯ ವಾಹನಗಳ ಆರಂಭಿಕ ಬೆಲೆಯನ್ನು 2.5 ಲಕ್ಷ ರೂಪಾಯಿಗಳಿಗೆ ನಿಗದಿ ಪಡಿಸಲಾಗಿದೆ.
 
ಗ್ರಾಹಕರು ಈ ಆವೃತ್ತಿಯ ಕಾರುಗಳನ್ನು ಆನ್‌ಲೈನ್ ಮಾರುಕಟ್ಟೆಯಾದ ಸ್ನಾಪ್‌ಡೀಲ್‌ನಲ್ಲಿ ಅಥವಾ ಆಂಡ್ರಾಯಡ್ ದಟ್ಸನ್ ಇಂಡಿಯಾ ಅಪ್ಲಿಕೇಶನ್‌ ಮೂಲಕ ಬುಕ್ ಮಾಡಬಹುದಾಗಿದೆ.
 
ಮಾರುಕಟ್ಟೆಯಲ್ಲಿ ರೆನಾಲ್ಟ್ ಕ್ವೀಡ್, ಮಾರುತಿ ಆಲ್ಟೊ 800 ಮತ್ತು ಹ್ಯುಂಡೈ ಇಯಾನ್ ಆವೃತ್ತಿಯ ಕಾರುಗಳಿಗೆ ದಟ್ಸನ್ ರೆಡಿ ಗೋ ಆವೃತ್ತಿಯ ಕಾರು ತೀವ್ರ ಪೈಪೋಟಿ ನೀಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಟ್ಟೆಯಲ್ಲಿದ್ದ ಮಗು ಸಾಯಿಸಿದವಳಿಗೆ 100 ವರ್ಷ ಶಿಕ್ಷೆ