Select Your Language

Notifications

webdunia
webdunia
webdunia
webdunia

275 ರೂ. ಏರಿದ ಚಿನ್ನದ ದರ , ಪ್ರತಿ 10 ಗ್ರಾಂ.ಗೆ 26, 600 ರೂ.

275 ರೂ. ಏರಿದ ಚಿನ್ನದ ದರ , ಪ್ರತಿ 10 ಗ್ರಾಂ.ಗೆ 26, 600 ರೂ.
ಮುಂಬೈ: , ಗುರುವಾರ, 17 ಸೆಪ್ಟಂಬರ್ 2015 (19:31 IST)
ಎರಡು ದಿನಗಳ ಸತತ ನಷ್ಟವನ್ನು ಕಳಚಿಕೊಂಡ ಚಿನ್ನವು ಗುರುವಾರ 275 ರೂ. ಏರಿಕೆಯಾಗಿ ಪ್ರತಿ 10 ಗ್ರಾಂ.ಗೆ 26, 600 ರೂ.ಗೆ ತಲುಪಿದೆ. ಆಭರಣ ವ್ಯಾಪಾರಿಗಳು ಮತ್ತು ಚಿಲ್ಲರೆ ಮಾರಾಟಗಾರರ ಖರೀದಿ ಆಸಕ್ತಿ ನಡುವೆ ವಿದೇಶದಲ್ಲಿ ದೃಢವಾದ ಪ್ರವೃತ್ತಿಯಿಂದ ಚಿನ್ನದ ದರ ಏರಿಕೆಯಾಗಿದೆ.

ಕೈಗಾರಿಕೆ ಘಟಕಗಳು ಮತ್ತು ನಾಣ್ಯ ತಯಾರಕರ ಬೇಡಿಕೆ ಹೆಚ್ಚಳದ ಹಿನ್ನೆಲೆಯಲ್ಲಿ ಬೆಳ್ಳಿ ಕೂಡ 1000 ರೂ. ಏರಿಕೆಯಾಗಿ ಕೆಜಿಗೆ 35, 700 ರೂ. ತಲುಪಿದೆ. ರಾಷ್ಟ್ರೀಯ ರಾಜಧಾನಿಯಲ್ಲಿ  ಶೇ. 99.9 ಮತ್ತು 99.5ರಷ್ಟು ಶುದ್ಧಚಿನ್ನವು ತಲಾ 275 ರೂ.ಏರಿಕೆಯಾಗಿ ಪ್ರತಿ 10 ಗ್ರಾಂ.ಗೆ   26,600 ರೂ ಮತ್ತು 26, 450 ರೂ. ಮುಟ್ಟಿದೆ.

ಚಿನ್ನದ ನಾಣ್ಯ ಕೂಡ 100 ರೂ.ಏರಿಕೆಯಾಗಿ ಪ್ರತಿ 10 ಗ್ರಾಂ.ಗೆ 22, 200 ರೂ. ಮುಟ್ಟಿದೆ. 
 

Share this Story:

Follow Webdunia kannada