Select Your Language

Notifications

webdunia
webdunia
webdunia
webdunia

ಚಿನ್ನದ ದರಗಳು 3 ವಾರಗಳಲ್ಲೇ ಕನಿಷ್ಠ ಕುಸಿತ: ಪ್ರತಿ 10 ಗ್ರಾಂ.ಗೆ 27,275 ರೂ.

ಚಿನ್ನದ ದರಗಳು 3 ವಾರಗಳಲ್ಲೇ  ಕನಿಷ್ಠ ಕುಸಿತ: ಪ್ರತಿ 10 ಗ್ರಾಂ.ಗೆ 27,275 ರೂ.
ನವದೆಹಲಿ , ಶುಕ್ರವಾರ, 29 ಮೇ 2015 (16:19 IST)
ಸತತವಾಗಿ ನಾಲ್ಕನೇ ದಿನ ಇಳಿಕೆ ಪ್ರವೃತ್ತಿಯನ್ನು ತೋರಿಸಿದ ಚಿನ್ನವು ಶುಕ್ರವಾರ ಇನ್ನೂ 50 ರೂ. ನಷ್ಟ ಅನುಭವಿಸಿ ಮೂರು ವಾರಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದು ಚಿನಿವಾರ ಪೇಟೆಯಲ್ಲಿ  ಪ್ರತಿ 10 ಗ್ರಾಂ.ಗೆ 27, 275 ರೂ. ಗೆ ತಲುಪಿದೆ. ಆಭರಣತಯಾರಕರು ಮತ್ತು ಚಿಲ್ಲರೆ ಮಾರಾಟಗಾರರ ಬೇಡಿಕೆ ಕುಸಿತ ಮತ್ತು  ದುರ್ಬಲ ಜಾಗತಿಕ ಪ್ರವೃತ್ತಿಯಿಂದ ಈ ಬೆಳವಣಿಗೆ ಉಂಟಾಗಿದೆ. ಆದಾಗ್ಯೂ, ಬೆಳ್ಳಿಯು 210 ರೂ. ಚೇತರಿಸಿಕೊಂಡು 38, 750 ರೂ. ಪ್ರತಿ ಕೆಜಿಗೆ ತಲುಪಿದೆ. ಕೈಗಾರಿಕೆ ಘಟಕಗಳ ಹೊಸ ಖರೀದಿ ಬೆಂಬಲದಿಂದ ಈ ಬೆಳವಣಿಗೆ ಉಂಟಾಗಿದೆ. 
 
ರಾಷ್ಟ್ರೀಯ ರಾಜಧಾನಿಯಲ್ಲಿ  99.9 ಮತ್ತು 99.5  ಶುದ್ಧತೆಯ ಚಿನ್ನವು 50 ರೂ. ಕುಸಿದು ಪ್ರತಿ 10 ಗ್ರಾಂ.ಗೆ  27, 275 ಮತ್ತು 27, 125 ರೂ.ಗೆ ಕ್ರಮವಾಗಿ ತಲುಪಿದೆ. 
ಹಿಂದಿನ ಮೂರು ಸೆಷನ್‌ಗಳಲ್ಲಿ ಚಿನ್ನವು 150 ರೂ. ಕಳೆದುಕೊಂಡಿತ್ತು. 
 
ಚಿನ್ನದ ನಾಣ್ಯವು ಖರೀದಿದಾರರ ಖರೀದಿ ಕೊರತೆಯಿಂದ  ಪ್ರತಿ 8 ಗ್ರಾಮ್ ನಾಣ್ಯಕ್ಕೆ 23, 700 ರೂ.ಗೆ ತಲುಪಿದೆ. ಬೆಳ್ಳಿಯ ನಾಣ್ಯಗಳು ಪ್ರತಿ 100 ನಾಣ್ಯಗಳಿಗೆ 56,000 ರೂ. ಖರೀದಿ ದರ ಮತ್ತು ಮಾರಾಟ ದರ 57,000 ರೂ. ಮುಟ್ಟಿದೆ. 

Share this Story:

Follow Webdunia kannada