Select Your Language

Notifications

webdunia
webdunia
webdunia
webdunia

ಚಿನ್ನದ ದರಗಳು 30 ರೂ. ಕುಸಿತ, 10 ಗ್ರಾಂ.ಗೆ 27, 160 ರೂ.

ಚಿನ್ನದ ದರಗಳು 30 ರೂ. ಕುಸಿತ, 10 ಗ್ರಾಂ.ಗೆ 27, 160 ರೂ.
guna , ಶನಿವಾರ, 25 ಏಪ್ರಿಲ್ 2015 (18:56 IST)
ಚಿನಿವಾರ ಪೇಟೆಯಲ್ಲಿ ಚಿನ್ನದ ದರಗಳು ರೂ. 30 ಕುಸಿತು ಪ್ರತಿ ಹತ್ತು ಗ್ರಾಂ.ಗೆ 27, 160 ರೂ. ತಲುಪಿದೆ. ದುರ್ಬಲ ಜಾಗತಿಕ ಪ್ರವೃತ್ತಿ ಮತ್ತು ಆಭರಣ ಮಾರಾಟಗಾರರಿಂದ ಬೇಡಿಕೆ ಕುಸಿತದಿಂದ ಈ ಬೆಳವಣಿಗೆ ಉಂಟಾಗಿದೆ.
 
ಬೆಳ್ಳಿ ಕೂಡ 150 ರೂ. ಕುಸಿತ ಅನುಭವಿಸಿ ಪ್ರತಿ ಕೆಜಿಗೆ 36, 350 ರೂ. ತಲುಪಿದೆ. ಕೈಗಾರಿಕೆ ಘಟಕಗಳ ಖರೀದಿ ಬೆಂಬಲದ ಕೊರತೆಯಿಂದ ಈ ಬೆಳವಣಿಗೆ ಉಂಟಾಗಿದೆ. 
ನ್ಯೂಯಾರ್ಕ್‌ನಲ್ಲಿ ಚಿನ್ನವು ಶೇ. 1.10ರಷ್ಟು ಕುಸಿತ ಅನುಭವಿಸಿ ಔನ್ಸ್‌ಗೆ 1180.40 ಡಾಲರ್ ತಲುಪಿದೆ. 
 
 ರಾಷ್ಟ್ರ ರಾಜಧಾನಿಯಲ್ಲಿ 99.9 ಮತ್ತು 99.5 ಶುದ್ಧತೆಯ ಚಿನ್ನವು ತಲಾ 30 ರೂ. ಕುಸಿದಿದ್ದು, ಕ್ರಮವಾಗಿ ಪ್ರತಿ ಹತ್ತು ಗ್ರಾಂ.ಗೆ 27, 160 ಮತ್ತು 27, 010 ತಲುಪಿದೆ. ಶುಕ್ರವಾರದ ವಹಿವಾಟಿನಲ್ಲಿ ರೂ. 190 ರೂ. ಗಳಿಸಿತ್ತು. ಸವರನ್ 8 ಗ್ರಾಂ.ಗೆ 23,700 ರೂ. ತಲುಪಿದೆ. 

Share this Story:

Follow Webdunia kannada